ಇತ್ತೀಚಿನ ಸುದ್ದಿ
ಉಡುಪಿ: ಒಂದೇ ಕುಟುಂಬದ 4 ಮಂದಿಯ ಹತ್ಯೆ; ಒಬ್ಬಳ ಮೇಲಿನ ದ್ವೇಷಕ್ಕೆ ಹಂತಕ ನಾಲ್ವರು ಬಲಿ ಪಡೆದನೇ?
13/11/2023, 19:41
ಉಡುಪಿ(reporterkarnataka.com): ಇಡೀ ಕರಾವಳಿಯನ್ನೇ ಬೆಚ್ಚಿ ಬೀಳಿಸಿದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿಯ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು, ಒಬ್ಬಳ ಕೊಲೆ ನಡೆಸುವುದಕ್ಕಾಗಿ ಜತೆಗೆ ಮತ್ತೆ ಮೂವರ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದಿತ್ತು. ತಾಯಿ ಹಸೀನಾ ಹಾಗೂ ಅವರ ಮಕ್ಕಳಾದ ಅಫ್ನಾನ್(23), ಅಯ್ನಾಝ್ (21) ಮತ್ತು ಅಸೀಮ್(14) ಎಂಬವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹಂತಕನು
ಒಬ್ಬಳ ಮೇಲಿನ ದ್ವೇಷದಿಂದ ಆಕೆಯನ್ನು ಕೊಲ್ಲಲ್ಲು ಬಂದರೂ ಸಾಕ್ಷ್ಮಿ ಉಳಿಯದಂತೆ ಮತ್ತೆ ಮೂವರನ್ನು ಕೊಂದಿದ್ದಾನೆ ಎನ್ನಲಾಗಿದೆ. ವೃದ್ಧೆಗೂ ಚಾಕು ಇರಿದರೂ ಅವರು ಓಡಿ ತಪ್ಪಿಸಿಕೊಂಡು ಬಚಾವ್ ಆಗಿದ್ದರು.
ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅಫ್ನಾನ್ ಮೇಲಿನ ದ್ವೇಷಕ್ಕೆ ದುಷ್ಕರ್ಮಿ ಇನ್ನೂ ಮೂವರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಹಂತಕನನ್ನು ಘಟನೆ ನಡೆದ ಮನೆಗೆ ಕರೆತಂದ ಆಟೋ ಡ್ರೈವರ್ ಈಗಾಗಲೇ ಕೊಲೆಗಡುಕನ ಕುರಿತು ಮಾಹಿತಿ ನೀಡಿದ್ದಾರೆ. ಪಾತಕಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.