ಇತ್ತೀಚಿನ ಸುದ್ದಿ
ಬೆಂಗಳೂರು ಸಮೀಪದ ಕುಣಿಗಲ್ ಬಳಿ ಫ್ಲೈ ಓವರ್ ನಿಂದ ಕೆಳಗೆ ಹಾರಿದ ಬೈಕ್: ಸವಾರ ಮಸ್ಕಿ ನಿವಾಸಿ ದಾರುಣ ಸಾವು
06/11/2023, 00:07
ಬೆಂಗಳೂರು/ರಾಯಚೂರು(reporterkarnataka.com): ಇಲ್ಲಿಗೆ ಸಮೀಪದ ಕುಣಿಗಲ್ ಫ್ಲೈ ಓವರ್ ನಿಂದ ಬೈಕೊಂದು ಕೆಳಗುರುಳಿದ ಪರಿಣಾಮ ರಾಯಚೂರು ಜಿಲ್ಲೆಯ ಮಸ್ಕಿಯ ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಮಸ್ಕಿ ಪಟ್ಟಣದ ಅಂತರಗಂಗೆ ಗ್ರಾಮದ ವೀರೇಂದ್ರ ಪಾಟೀಲ್(26) ಎಂದು ಗುರುತಿಸಲಾಗಿದೆ. ಈತ
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಬೈಕಿನಲ್ಲಿ ವೇಗವಾಗಿ ಬರುತ್ತಿದ್ದ ವೀರೇಂದ್ರ ಪಾಟೀಲ್ ಅವರ ಬೈಕ್ ಕುಣಿಗಲ್ ಬೈಪಾಸ್ ಸಮೀಪ ನಿಯಂತ್ರಣ ತಪ್ಪಿ ಏಕಾಏಕಿ ಪ್ಲೇ ಓವರ್ ತಡಗೋಡಗೆ ಡಿಕ್ಕಿ ಹೊಡೆದ ಬಳಿಕ 5-6 ಬಾರಿ ಪಲ್ಟಿಯಾಗಿ 40 ಅಡಿ ಕೆಳಗೆ ಬಿದ್ದಿದೆ.ಗಂಭೀರ ಗಾಯಗೊಂಡ ವೀರೇಂದ್ರ ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನೆಲಮಂಗಲ ಟ್ರಾಫಿಕ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಇಂದು ಬೆಂಗಳೂರಿನಿಂದ ಅಂತರಗಂಗೆ ಗ್ರಾಮಕ್ಕೆ ತರಲಾಗಿದ್ದು ಕುಟುಂಬಸ್ಥರ ಕೂಗು ಮುಗಿಲುಮಟ್ಟಿದೆ.