ಇತ್ತೀಚಿನ ಸುದ್ದಿ
ಕನ್ನಡ ರಾಜ್ಯೋತ್ಸವ: ಕಡಲನಗರಿಯಲ್ಲಿ ಭರದ ಸಿದ್ಧತೆ, ಪೊಲೀಸ್ ತಂಡ, ಹೋಮ್ ಗಾರ್ಡ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನಿಂದ ರಿಹರ್ಸಲ್
31/10/2023, 10:05
ಚಿತ್ರ : ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com):ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪೂರ್ವ ಸಿದ್ಧತೆ ಹಾಗೂ ರಂಗ ತಾಲೀಮು ನಗರದ ನೆಹರೂ ಮೈದಾನದಲ್ಲಿ ನಡೆಯಿತು.
ಮಂಗಳೂರು ಕಮಿಷನರೇಟ್ ಕಾನೂನು ಸುವ್ಯವಸ್ಥೆ ಉಪ ಆಯುಕ್ತ ಸಿದಾರ್ಥ್ ಗೊಯಲ್, ಮಂಗಳೂರು ಸಿಎಆರ್ ಉಪ ಆಯುಕ್ತ
ಉಮೇಶ್ ಪಿ., ಸಹಾಯ ಪೊಲೀಸ್ ಆಯುಕ್ತ ಎಂ. ಎ. ಉಪಾಸೆ ಉಪಸ್ಥಿತರಿದ್ದರು.
ಪೊಲೀಸ್ ತಂಡದಿಂದ ಕವಾಯತು, ಹೋಂಗಾರ್ಡ್ ತಂಡ, ಸ್ಕೌಟ್ಸ್ ಆ್ಯಂಡ್ ಗೈಡ್ಸ್,ಶಾಲಾ ಮಕ್ಕಳ ತಂಡ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ ತಂಡದಿಂದ ರಿಹರ್ಸಲ್ ನಡೆಯಿತು. ವೇದಿಕೆ ಸಿದ್ಧತೆ, ಆಹ್ವಾನಿತರಿಗೆ ಕುಳಿತುಕೊಳ್ಳುವ ವ್ಯವಸ್ಥೆಯ ಸಿದ್ಧತೆ ಮಾಡಲಾಯಿತು.