9:42 AM Monday30 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ… ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರಕಾರಿ ಶುಶ್ರೂಷಾ ಕಾಲೇಜು 2ನೇ ಘಟಿಕೋತ್ಸವ ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಇತ್ತೀಚಿನ ಸುದ್ದಿ

ರಸ್ತೆಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದಿರೋ ಮರಗಿಡ: ರಸ್ತೆ ಕಾಣದೆ ಹೊರನಾಡು ಭಕ್ತರ ಕಾರು ಮುಖಾಮುಖಿ ಡಿಕ್ಕಿ; 4 ಮಂದಿಗೆ ಗಾಯ

15/10/2023, 09:03

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reeporterkarnataka@gmail.com

ರಸ್ತೆಯ ಇಕ್ಕೆಲಗಳ ಮರಗಿಡಗಳು ಹುಲುಸಾಗಿ ಬೆಳೆದಿದ್ದು ಅವುಗಳನ್ನ ಕಡಿಯದ ಹಿನ್ನೆಲೆ ರಸ್ತೆ ಸರಿಯಾಗಿ ಕಾಣದೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆ ಬಳಿ ನಡೆದಿದೆ. ಲೋಕೋಪಯೋಗಿ ಇಲಾಖೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡ-ಘಂಟೆಗಳನ್ನ ಕಡಿಯದ ಹಿನ್ನೆಲೆ ರಸ್ತೆ ಕಾಣದೆ ಮೇಲಿಂದ ಮೇಲೆ ಅಪಘಾತಗಳಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ತಿರುವಿನಲ್ಲಿ ರಸ್ತೆ ಸೂಕ್ತವಾಗಿ ಕಾಣಿಸದೆ ಹೊರನಾಡಿಗೆ ಹೋಗುತ್ತಿದ್ದ ಹಾಗೂ ಹೊರನಾಡಿನಿಂದ ಬರುತ್ತಿದ್ದ ಎರಡು ಕಾರುಗಳು ತಿರುವಿನಲ್ಲಿ ಮುಖಾಮುಖಿ ಡಿಕಿಯಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಎರಡು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಳಸ ತಾಲೂಕಿನ ಅನ್ನಪೂರ್ಣೇಶ್ವರಿ ದರ್ಶನಕ್ಕೆ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಶೃಂಗೇರಿ ಶಾರದಾಂಬೆ ದರ್ಶನ ಮುಗಿಸಿಕೊಂಡು ಹೊರನಾಡಿಗೆ ಬರುವವರು ಬೇರೆ ಮಾರ್ಗ ಅನುಸರಿಸುತ್ತಾರೆ. ಆದ್ರೆ, ಹೊರನಾಡಿಗಷ್ಟೆ ಬರುವವರು ಹೆಚ್ಚಾಗಿ ಕೊಟ್ಟಿಗೆಹಾರದಿಂದ ಜಾವಳಿ-ಹಿರೇಬೈಲು-ಕಳಸ ಮೂಲಕ ಹೊರನಾಡು ತಲುಪುತ್ತಾರೆ. ರಾಜ್ಯದ ಯಾವುದೇ ಮೂಲೆಯಿಂದ ಬಂದರೂ ಕೊಟ್ಟಿಗೆಹಾರಕ್ಕೆ ಬಂದು ಜಾವಳಿ-ಕೆಳಗೂರು-ಹಿರೇಬೈಲು-ಕಳಸದಿಂದ ಹೊರನಾಡಿಗೆ ಹೋಗುತ್ತಾರೆ. ಆದರೆ, ಕೊಟ್ಟಿಗೆಹಾರದಿಂದ ಕಳಸದವರೆಗೂ ಹಾವು-ಬಳುಕಿನ ಮೈಕಟ್ಟಿನ ಗಾಡ್ ಸೆಕ್ಷನ್ ರಸ್ತೆಯಿದ್ದು ರಸ್ತೆ ಇಕ್ಕೆಲಗಳ ಮರಗಿಡಗಳು ಹುಲುಸಾಗಿ ಬೆಳೆದು ನಿಂತಿದೆ. ರಸ್ತೆ ಸಮರ್ಪಕವಾಗಿ ಕಾಣಿಸಿದೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ಸ್ಥಳಿಯರು ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ. ಇದೀಗ, ನವರಾತ್ರಿಯ ಸಮಯ ನಿತ್ಯ ಹಗಲು-ರಾತ್ರಿ ಎನ್ನದೆ ನೂರಾರು ವಾಹನಗಳ ಓಡಾಟವಿರುತ್ತೆ. ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಬದಿಯ ಮರಗಿಡಗಳಲ್ಲಿ ಹುಲುಸಾಗಿ ಬೆಳೆದಿರುವ ಜಂಗಲ್‍ಗಳನ್ನ ಕಡಿಸಬೇಕಿದೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಈ ರೀತಿಯ ಅಪಘಾತಗಳು ಹೆಚ್ಚಾದರೂ ಆಗಬಹುದು. ಸ್ಥಳಿಯರಿಗೆ ಹಾಗೂ ಪೊಲೀಸರಿಗೆ ವಾಹನ ಸವಾರರ ಜಗಳ, ಟ್ರಾಫಿಕ್ ಕ್ಲಿಯರ್ ಮಾಡೋದೆ ಒಂದು ಕೆಸಲವಾಗೋದು ಖಂಡಿತ. ಹಾಗಾಗಿ, ಕೂಡಲೇ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ಪ್ರವಾಸಿ ಹಾಗೂ ಭಕ್ತರ ವಾಹನಳಿಗೆ ಯಾವುದೇ ತೊಂದರೆಯಾಗಂತೆ ಮರಗಿಡಗಳನ್ನ ತೆರವು ಮಾಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು