2:29 PM Thursday20 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಫ್ರೀ ಬಸ್ ಎಫೆಕ್ಟ್: ಸರಕಾರಿ ಬಸ್ ನಿಲ್ದಾಣದಲ್ಲೇ ಬಟ್ಟೆ ಒಗೆದು ಒಣಗಿಸುವ ಮಹಿಳೆಯರು!

13/10/2023, 22:44

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಸರ್ಕಾರಿ ಬಸ್ ನಿಲ್ದಾಣವನ್ನ ಮಹಿಳೆಯರು ಬಚ್ಚಲು ಮನೆ ಮಾಡ್ಕೊಂಡು ಬಟ್ಟೆ ಒಣಗಿಸುವ ತಾಣವನ್ನಾಗಿಸಿಕೊಂಡು ಬಟ್ಟೆ ಒಣಗಿಸಿಕೊಂಡು ಇಡೀ ದಿನ ಆರಾಮಾಗಿದ್ದಾರೆ.
ಶಕ್ತಿ ಯೋಜನೆಯಡಿ ಸರ್ಕಾರ ಮಹಿಳೆಯರಿಗೆ ಫ್ರೀ ಬಸ್ ಬಿಟ್ಟ ಮೇಲೆ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಒಮ್ಮೆಲೆ ಹತ್ತಾರು ಮಹಿಳೆಯರು ತಂಡ ಮಾಡ್ಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ದಾಂಗುಡಿ ಇಡ್ತಿದ್ದಾರೆ. ಅದು ಇನ್ನೂ ನಿಂತಿಲ್ಲ. ಹೀಗೆ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಬರುವ ಮಹಿಳೆಯರು ಕೊಟ್ಟಿಗೆಹಾರದಲ್ಲಿ ಬಸ್ ಕಾಯುತ್ತಾ ಅಲ್ಲೇ ಬಟ್ಟೆ ತೊಳೆದುಕೊಂಡು ಬಸ್ ನಿಲ್ದಾಣದಲ್ಲೇ ಒಣಗಿಸಿಕೊಂಡು ಕಾಲ ಕಳೆಯುತ್ತಿದ್ದಾರೆ. ರಾಜ್ಯದ ಯಾವುದೇ ಭಾಗದಿಂದ ಸರ್ಕಾರಿ ಬಸ್ಸಿನಲ್ಲಿ ಬಂದರೂ ಕೊಟ್ಟಿಗೆಹಾರದಲ್ಲಿ ಇಳಿಯಲೇಬೇಕು. ಫ್ರೀ ಬಸ್ಸಿನಲ್ಲಿ ಹೊರನಾಡಿಗೆ ಹೋಗಬೇಕಂದ್ರೆ ಕೊಟ್ಟಿಗೆಹಾರಕ್ಕೆ ಬಂದೇ ಹೋಗಬೇಕು. ಆದ್ರೆ, ಕೊಟ್ಟಿಗೆಹಾರದಿಂದ ಹೊರನಾಡಿಗೆ ಸರ್ಕಾರಿ ಬಸ್‍ಗಳ ಸಂಖ್ಯೆ ತೀರಾ ಕಡಿಮೆ. ದಿನಕ್ಕೆ ಹೆಚ್ಚೆಂದ್ರೆ ನಾಲ್ಕೈದು ಬಸ್ ಅಷ್ಟೆ ಸಂಚರಿಸೋದು. ಹಾಗಾಗಿ, ರಾಜ್ಯದ ನಾನಾ ಭಾಗಗಳಿಂದ ಬರುವ ಮಹಿಳೆಯರು ಫ್ರೀ ಬಸ್ ಕಾಯುತ್ತಾ ಕೊಟ್ಟಿಗೆಹಾರದ ಬಸ್ ನಿಲ್ದಾಣದಲ್ಲಿ ಜಮಾಯಿಸಿರುತ್ತಾರೆ. ಹೀಗೆ ಬಂದವರು, ಕೊಟ್ಟಿಗೆಹಾರದಲ್ಲಿ ನೀರಿನ ಸೌಲಭ್ಯ ಚೆನ್ನಾಗಿರೋದ್ರಿಂದ ಅಲ್ಲೇ ಬಟ್ಟೆ ತೊಳೆದು ಅಲ್ಲೇ ಒಣ ಹಾಕುತ್ತಿದ್ದಾರೆ.


ಬಸ್ ನಿಲ್ಲುವ ಜಾಗದ ನೆಲದ ಮೇಲೂ ಬಟ್ಟೆ ಹಾಕುತ್ತಿದ್ದಾರೆ. ಬಸ್ ನಿಲ್ದಾಣದ ಕಾಂಪೌಂಡ್ ಮೇಲೂ ಬಟ್ಟೆ ಹಾಕುತ್ತಿದ್ದಾರೆ. ಕಾಂಪೌಂಡ್ ಮೇಲಿನ ತಂತಿ, ರಾಡನ್ನೂ ಬಿಟ್ಟಿಲ್ಲ. ಇಡೀ ದಿನ ಬಸ್ ಕಾಯುವ ಮಹಿಳೆಯರು ಕೊಟ್ಟಿಗೆಹಾರದ ಸರ್ಕಾರಿ ಬಸ್ ನಿಲ್ದಾಣವನ್ನೇ ಬಚ್ಚಲು ಮನೆ ಮಾಡ್ಕೊಂಡು ಬಟ್ಟೆ ತೊಳೆದುಕೊಂಡು, ಒಣಗಿಸಿಕೊಂಡು ಬಸ್ ಬಂದ ಕೂಡಲೇ ಅವಸರವಸವಾಗಿ ಬಟ್ಟೆಯನ್ನ ಬ್ಯಾಗಿಗೆ ತುಂಬಿಕೊಂಡು ಹೋಗುತ್ತಿದ್ದಾರೆ. ಪ್ರಯಾಣಿಕರ ಈ ವರ್ತನೆಗೆ ಸ್ಥಳಿಯರು ಅಸಮಾಧಾನ ಹೊರಹಾಕಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳು ಕೂಡ ಮಹಿಳೆಯರಿಗೆ ತಿಳಿ ಹೇಳುತ್ತಿದ್ದಾರೆ. ಆದರೆ, ಉತ್ತರ ಕರ್ನಾಟಕದ ಮಹಿಳೆಯರು ಅಧಿಕಾರಿಗಳ ಅಥವ ಸ್ಥಳಿಯರ ಮಾತನ್ನ ಕೇಳುತ್ತಿಲ್ಲ. ಒಬ್ಬರಾದ ಮೇಲೊಬ್ಬರು ಬಟ್ಟೆ ತೊಳೆದು ಕಣ್ಣಿಗೆ ಕಂಡ ಜಾಗದಲ್ಲೆಲ್ಲಾ ಒಣ ಹಾಕುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು