2:19 PM Friday24 - January 2025
ಬ್ರೇಕಿಂಗ್ ನ್ಯೂಸ್
7-8 ವರ್ಷ ಕಳೆದರೂ ಹಸ್ತಾಂತರವಾಗದ ಶಾಲಾ ಕೊಠಡಿ: ಮಾಹಿತಿ ಇಲ್ಲವೆಂದ ಬಿಇಒ; ಶಿಕ್ಷಣ… ಯುನಿಸೆಕ್ಸ್ ಸೆಲೂನ್ ದಾಳಿಕೋರರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇನೆ: ಉಡುಪಿಯಲ್ಲಿ ಗೃಹ ಸಚಿವ… ಏಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್ ಮೆನ್ ಗಳ ನೇಮಕ: ಬೀದರ್ ನಲ್ಲಿ… ವರ್ಷದಲ್ಲಿ 2 ಲಕ್ಷ ಅಕ್ರಮ ಪಂಪ್ ಸೆಟ್ ಗಳು ಸಕ್ರಮ: ಇಂಧನ ಸಚಿವ… ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ: ಜಿಲ್ಲೆಯ ಶಾಸಕರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆ ವಿಜಯಪುರ: ಫೇಕ್ ಡಾಕ್ಟರ್ ಇದ್ದಾರೆ ಎಚ್ಚರ; ನಾಲತವಾಡದಲ್ಲೂ ನಕಲಿ ವೈದ್ಯರುಗಳ ಹಾವಳಿ ಸ್ಥಳ ಮಹಜರು: ಕೋಟೆಕಾರು ದರೋಡೆ ಪ್ರಕರಣದ ಆರೋಪಿ ಪರಾರಿಗೆ ಯತ್ನ; ಪೊಲೀಸರ ಗುಂಡೇಟು,… ಕೋಟೆಕಾರು ದರೋಡೆ ಪ್ರಕರಣ: ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 3 ಮಂದಿ ಆರೋಪಿಗಳ… ಗಾಂಧಿ ಭಾರತ ಮರು ನಿರ್ಮಾಣ ಕನ್ನಡ- ಆಂಗ್ಲ ಪುಸ್ತಕ ಬಿಡುಗಡೆ: ಬೃಹತ್ ಗಾಂಧಿ… ಕಾಂತಾರ: ಚಾಪ್ಟರ್ 1 ಸಿನಿಮಾ ತಂಡ ಷರತ್ತು ಉಲ್ಲಂಘಿಸಿದರೆ ಚಿತ್ರೀಕರಣ ಸ್ಥಗಿತ: ಅರಣ್ಯ…

ಇತ್ತೀಚಿನ ಸುದ್ದಿ

ಸರಕಾರಿ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ, ಶಿವಮೊಗ್ಗದಲ್ಲಿ ಉಗ್ರರ ಹಾವಳಿ, ಎಸ್ಸಿ ಎಸ್ಟಿ ನಿಧಿ ಗ್ಯಾರಂಟಿಗೆ ಬಳಕೆ: ಶಾಸಕ ವೇದವ್ಯಾಸ ಕಾಮತ್ ಗರಂ

11/10/2023, 18:41

ಮಂಗಳೂರು(reporterkarnataka.com): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನಸಾಮಾನ್ಯರ ಗೋಳು ಕೇಳುವವರೇ ಇಲ್ಲ. ಸರಕಾರಿ ಕಚೇರಿಗಳಲ್ಲಿ ಸರ್ವರ್ ಇಲ್ಲ. ಗ್ಯಾರಂಟಿ ಯೋಜನೆಗೆ ಎಸ್ ಸಿ- ಎಸ್ ಟಿಗೆ ಮೀಸಲಿಟ್ಟ ಹಣವನ್ನೂ ಬಳಸಲಾಗುತ್ತಿದೆ. ಶಿವಮೊಗ್ಗದಲ್ಲಿ ಉಗ್ರರ ಹಾವಳಿ ಜಾಸ್ತಿಯಾಗಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಮಲೆನಾಡು ಶಿವಮೊಗ್ಗ ಉಗ್ರರ ಅಡಗು ತಾಣವಾಗಿ ಬದಲಾಗುತ್ತಿದೆ. ಇಲ್ಲಿ ಈ ಹಿಂದೆ ಸೆರ ಸಿಕ್ಕ ಶಂಕಿತ ಉಗ್ರರು ಮತ್ತು ಮೊನ್ನೆ ಈದ್ ವಿಲಾದ್ ಮೆರವಣಿಗೆ ವೇಳೆ ನಡೆದ ಗಲಭೆಯೇ ಇದಕ್ಕೆ ಸಾಕ್ಷಿ, ಪ್ರಚೋದನಕಾರಿ ಕಟೌಟ್‌ ಅಳವಡಿಕೆ, ಅಮಾಯಕ ಹಿಂದೂಗಳ ಮನೆ ಮೇಲೆ, ಪೊಲೀಸರ ಮೇಲೆ, ಅದರಲ್ಲೂ ಅಕ್ಷರ ಕಲಿಸಿದ ಗುರುಗಳ ಮನೆ ಮೇಲೂ ಕಲ್ಲು ತೂರಾಟ ನಡೆದಿದ್ದರೂ ಕಾಂಗ್ರೆಸ್‌ ಪಾಲಿಗೆ ಇದೊಂದು ಸಣ್ಣ ಘಟನೆ. ಸ್ವತಃ ಮಂತ್ರಿಗಳೇ ಆ ಹೇಳಿಕೆ ಕೊಟ್ಟಿದ್ದಾರೆ. ಅಲ್ಲಿಗೆ ಈ ಘಟನೆಯ ಹಿಂದೆ ಇರುವವರು ಯಾರೆಂದು ಗೊತ್ತಾಗುತ್ತದೆ ಎಂದರು.
ಎಸ್ಸಿ ಎಸ್ಟಿ ಹಣ ದುರ್ಬಳಕೆ; ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಕಲ್ಯಾಣಕ್ಕೆ ಮೀಸಲಾದ ನಿಧಿಯಿಂದ 31 ಕೋಟಿ
ರೂಪಾಯಿಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ.
ಇದು ದಲಿತರಿಗೆ ಮಾಡುವ ಅನ್ಯಾಯವಾಗಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ನಿಗದಿಯಾದ ಹಣವನ್ನು ಬೇರೆ ಬಳಸಿಕೊಳ್ಳಬಾರದೆಂಬ ನಿಯಮವಿದೆ ಎಂದು ಅವರು ಹೇಳಿದರು.
ಸರ್ವ‌ರ್ ಸಮಸ್ಯೆ: ನಗರದ ಆರ್ ಟಿಒ ಕಚೇರಿ, ಮಹಾನಗರ ಪಾಲಿಕ ಕಚೇರಿ, ಉಪ ನೋಂದಣಿ ಕಚೇರಿ, ರೇಷನ್ ಕಾರ್ಡ್ ಅಗತ್ಯ ಕಾರ್ಯಗಳಿಗೆ ಸರ್ಕಾರಿ ಕಚೇರಿಗೆ ಬರುವ ಜನರಿಗೆ ಸರ್ವ‌ರ್ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಸರಕಾರ ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ. ಇದರಿಂದಾಗಿ ಜನಸಾಮಾನ್ಯರು ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಪ್ರತಿ ದಿನ ಸರ್ಕಾರಿ ಕಚೇರಿ ಅಲೆಯುವಂತಾಗಿದೆ ಎಂದು ಅವರು ನುಡಿದರು.
ಕರೆಂಟ್ ಬಿಲ್ ಹೆಚ್ಚಳ ಮತ್ತು ಲೋಡ್ ಶೆಡ್ಡಿಂಗ್: ಉಚಿತ 200 ಯೂನಿಟ್ ಕರೆಂಟ್ ಕೊಡುತ್ತೇವೆ ಎಂದು ಹೇಳಿದ್ದ ಸರ್ಕಾರ ಚುನಾವಣೆ ಗೆದ್ದ ಮೇಲೆ ಕರೆಂಟ್ ಬಿಲ್ ಹೆಚ್ಚಳ ಮಾಡಿದ್ದಲ್ಲದೇ ಏಕಾಏಕಿ ಲೋಡ್ ಶೆಡ್ಡಿಂಗ್ ಅನ್ನು ಆರಂಭಿಸಿ ಜನರನ್ನು, ವಿದ್ಯಾರ್ಥಿಗಳನ್ನು ಕತ್ತಲೆ ದೂಡಿ ಕೊಟ್ಟ ಮಾತು ಮರೆತು ಬಿಟ್ಟಿದೆ. ಮಂಗಳೂರು ಜನತೆಗೆ ಇ-ಖಾತಾ ಸಮಸ್ಯೆ ಸೃಷ್ಟಿಯಾಗಿದ್ದು ಮಂಗಳೂರು-1 ನಲ್ಲಿ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಿ ದಾಖಲು ಮಾಡಿದ ಮೇಲೆ ಅದನ್ನು ಕಂದಾಯ ವಿಭಾಗಕ್ಕೆ ಕಳಿಸಲಾಗುತ್ತಿತ್ತು. ಇಲ್ಲಿ ಮಂಗಳೂರಿನ App ನ್ನು ಬೆಂಗಳೂರಿನ BBMP App ಗೆ ಲಿಂಕ್ ಮಾಡಲಾಗಿತ್ತು. ಅಲ್ಲಿ ಸರ್ವರ್ ಸಮಸ್ಯೆಯಾಗಿ ಒಂದು ಇ -ಖಾತ ಸಿಗಲು ತಿಂಗಳವರೆಗೆ ಕಾಯಬೇಕಿತ್ತು. ಸರ್ಕಾರ ಈ ಬಗ್ಗೆ ಯಾವುದೇ ಹೆಚ್ಚಿನ ಆಸಕ್ತಿ ತೋರದ ಪರಿಣಾಮ ಮಂಗಳೂರಿನ ಜನತೆಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಅವ್ಯವಸ್ಥೆ ನನ್ನ ಗಮನಕ್ಕೂ ಬಂದಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದು ಇತ್ತೀಚಿಗೆ ಇ -ಖಾತ ಒಂದು ವಾರದಲ್ಲಿ ಸಿಗುತ್ತಿವೆ. ಸದ್ಯ ತಾತ್ಕಾಲಿಕವಾಗಿ ಸಮಸ್ಯೆಯು ಬಗೆಹರಿದಿದ್ದು ಮುಂದಿನ ದಿನಗಳಲ್ಲಿ ಮಂಗಳೂರು ಜನತೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ನಮ್ಮ ಪ್ರಥಮ ಆದ್ಯತೆಯಾಗಿದೆ ಎಂದು ಅವರು ನುಡಿದರು.
ಸೈಬರ್ ವಂಚನೆ: ನಿವೇಶನ, ಫ್ಲ್ಯಾಟ್ ನೋಂದಣಿಗಾಗಿ ಮಂಗಳೂರು ಮಿನಿ ವಿಧಾನಸೌಧದ ಉಪನೋಂದಣಿ ಕಚೇರಿಗೆ ಹೋಗಿ ಬಯೋಮೆಟ್ರಿಕ್‌ ನೀಡುತ್ತಿರುವ ಹಲವು ಜನರ ಬ್ಯಾಂಕ್‌ ಖಾತೆಗೆ ಸೈಬರ್ ವಂಚಕರು ಕನ್ನ ಹಾಕಿದ್ದು ಲಕ್ಷಾಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ನಡೆದಿದ್ದು ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಸಬ್ ರಿಜಿಸ್ಟರ್ ಕಚೇರಿ ಎಂಬುದು ಸರ್ಕಾರದ ವ್ಯವಸ್ಥೆಯ ಒಂದು ಭಾಗ. ಇಲ್ಲಿಂದಲೇ ಸೈಬರ್ ವಂಚಕರಿಗೆ ಸಾರ್ವಜನಿಕರ ವ್ಯಯಕ್ತಿಕ ಮಾಹಿತಿ ಸೋರಿಕೆಯಾಗಿ ಬ್ಯಾಂಕ್ ಖಾತೆಯಿಂದ ಹಣ ದೋಚಲಾದರೆ ಇನ್ನು ಜನಸಾಮಾನ್ಯರು ಯಾರನ್ನು ನಂಬುವುದು? ಜಿಲ್ಲಾಡಳಿತ ಹಾಗೂ ಸರ್ಕಾರ ಈ ವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಕೂಡಲೇ ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬಿಟ್ಟು ಗಮನಹರಿಸಬೇಕು. ಮತ್ತು ಸರ್ಕಾರಿ ಕಛೇರಿಗೆ ಬಂದು ಸರ್ಕಾರದ ನಿಯಮಗಳನ್ನು ಪಾಲಿಸಿದ ಮೇಲೆಯೇ ಸಾರ್ವಜನಿಕರ ಮಾಹಿತಿ ಸೋರಿಕೆಯಾಗಿ ವಂಚನೆಗೊಳಗಾಗಿದ್ದರಿಂದ ಸಾರ್ವಜನಿಕರಿಗೆ ಉಂಟಾದ ನಷ್ಟವನ್ನು ಸರ್ಕಾರವೇ ಭರಿಸಿಕೊಡಬೇಕು. ಹಣ ಕಳೆದು ಕೊಂಡವರಿಗೆ ಸರಕಾರ ಹಣ ವಾಪಸ್ಸು ನೀಡ ಬೇಕು ಎಂದು ನುಡಿದರು.

ವೃದ್ಧರಿಗೆ, ಅಸಹಾಯಕರಿಗೆ ಸರಕಾರದಿಂದ ನೀಡುತ್ತಿದ್ದ ಸಹಾಯಧನಗಳಲ್ಲಿ ಪ್ರಸ್ತುತ ವ್ಯತ್ಯಯ ಉಂಟಾಗಿದೆ. ಈ ಹಿಂದೆ ಬಿಪಿಎಲ್ ಮಾತ್ರವಲ್ಲದೇ, ಎಪಿಎಲ್ ನಲ್ಲಿರುವ ಬಡವರಿಗೆ, ಅಸಹಾಯಕರಿಗೂ ಈ ಯೋಜನೆಗಳ ಫಲ ಸಿಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದಕ್ಕೂ ಕತ್ತರಿ ಬಿದ್ದಿದೆ. ಈಗ ಬಿಪಿಎಲ್ ಕಾರ್ಡ್ ಇಲ್ಲದೆ ಯಾವುದೇ ಅರ್ಜಿಯನ್ನು ತೆಗೆದುಕೊಳ್ಳುತ್ತಿಲ್ಲ. ಹಾಗಂತ ಬಡವರಿಗೆ ಬಿಪಿಎಲ್ ಕಾರ್ಡ್ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ಕ್ಷೇತ್ರದ ಜನರಿಂದ ಈ ಅವ್ಯವಸ್ಥೆ ನನ್ನ ಗಮನಕ್ಕೂ ಬಂದಿದ್ದು, ಈ ಯೋಜನೆಗಳ ಮೂಲಕ ಸಿಗುವ ಅಲ್ಪ ಸಹಾಯಧನವೇ ಎಷ್ಟೋ ಜನರ ಬದುಕಿಗೆ ಆಧಾರವಾಗಿರುವುದರಿಂದ ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಬೇಕು. ಎಪಿಎಲ್ ಅಸಹಾಯಕರು ಅರ್ಜಿ ಸಲ್ಲಿಸಲು ಹೋದರೆ ಸರ್ಕಾರಿ ಕಚೇರಿಗಳಲ್ಲಿ ಅರ್ಜಿಯನ್ನು ತೆಗೆದುಕೊಳ್ಳುತ್ತಿಲ್ಲ. ಕೇಳಿದರೆ ತಹಶೀಲ್ದಾರರ ಆದೇಶ ಎನ್ನುತ್ತಾರೆ. ತಹಶೀಲ್ದಾರರನ್ನು ಕೇಳಿದರೆ ಡಿಸಿ ಆದೇಶ ಎನ್ನುತ್ತಾರೆ. ಹೀಗೆ ಒಬ್ಬರ ಮೇಲೆ ಒಬ್ಬರು ಹೇಳುತ್ತಾರೆ ಹೋದರೆ, ಜನಸಾಮಾನ್ಯರು ಯಾರಲ್ಲಿ ನೇರವಾಗಿ ಮುಖ್ಯಮಂತ್ರಿ ಅವರನ್ನು ಕೇಳಬೇಕೆ? ವಾಸ್ತವದಲ್ಲಿ ಸರಕಾರದಿಂದ ಈ ಬಗ್ಗೆ ಯಾವುದೇ ಆದೇಶವೂ ಬಂದೇ ಇಲ್ಲ. ಆದರೂ ಜನಸಾಮಾನ್ಯರಿಗೆ ಈ ರೀತಿ ತೊಂದರೆ ಕೊಡುತ್ತಿರುವುದು ಅಕ್ಷಮ್ಯ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು