ಇತ್ತೀಚಿನ ಸುದ್ದಿ
ಕದ್ರಿಕಂಬಳ: ವೃದ್ಧ ಸಹೋದರಿಯರು ನೇಣು ಬಿಗಿದು ಆತ್ಮಹತ್ಯೆ
04/10/2023, 18:18

ಮಂಗಳೂರು(reporterkarnataka.com): ಕದ್ರಿಕಂಬಳ ಬಳಿ ಮನೆಯೊಂದರಲ್ಲಿ ಇಬ್ಬರು ವೃದ್ಧ ಮಹಿಳೆಯರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.
ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ವಾಸವಿರುವ ಜಗನ್ನಾಥ್ ಭಂಡಾರಿ(78) ಎಂಬವರ ಪತ್ನಿ ಲತಾ ಭಂಡಾರಿ (70) ಹಾಗೂ ಲತಾ ಭಂಡಾರಿ ಅವರ ಅಕ್ಕ ಸುಂದರಿ ಶೆಟ್ಟಿ (80) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು ಎಂದು ತಿಳಿದು ಬಂದಿದೆ.
ಜಗನ್ನಾಥ್ ಭಂಡಾರಿ ಅವರು ಎಂದಿನಂತೆ ಮಂಗಳೂರಿನ ಯಶ್ ರಾಜ್ ಬಾರಿಗೆ ಕೆಲಸಕ್ಕೆ ಹೋದವರು ಸಂಜೆ 4:30ರ ವೇಳೆ ಮನೆಗೆ ಬಂದಾಗ ಮನೆಯ ಬಾಗಿಲು ಬಂದ್ ಆಗಿತ್ತು. ಕಿಟಕಿಯಿಂದ ಒಳಗೆ ನೋಡಿದಾಗ ಲತಾ ಭಂಡಾರಿ ಹಾಗೂ ಸುಂದರಿ ಭಂಡಾರಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು ಎಂದು ತಿಳಿದು ಬಂದಿದೆ.
ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎನ್ನಲಾಗಿದೆ.