9:54 AM Friday9 - May 2025
ಬ್ರೇಕಿಂಗ್ ನ್ಯೂಸ್
Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ… ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ 35 ಲಕ್ಷ ರೂ. ವಂಚನೆ: ಎಫ್… Doddaballapura | ಘಾಟಿ ಸುಬ್ರಹ್ಮಣ್ಯ ಕ್ಷೇತ್ರ: ಸರಳ ಸಾಮೂಹಿಕ ವಿವಾಹದಲ್ಲಿ 66 ಜೋಡಿಗಳಿಗೆ… Ex CM | ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಪ್ರತೀಕಾರ: ಮಾಜಿ ಮುಖ್ಯಮಂತ್ರಿ… Chikkamagaluru | ಮಲೆನಾಡಿನಲ್ಲಿ ಮಿತಿಮೀರಿದ ಕಾಡುಪ್ರಾಣಿಗಳ ಉಪಟಳ: ಮೂಡಿಗೆರೆ ಸಮೀಪ ಹಸುವನ್ನು ಕೊಂದ… ಮಾಜಿ ಮುಖ್ಯಮಂತ್ರಿ, ದಿವಂಗತ ಕೆ.ಸಿ.ರೆಡ್ಡಿ ಅವರ ಜನ್ಮದಿನ: ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾವಿನ ರಾಜಧಾನಿ ಶ್ರೀನಿವಾಸಪುರ ಮತ್ತೆ ಸಜ್ಜು: ಮೇ 15ರಿಂದ ಮಾರಾಟ ಭರ್ಜರಿ ಆರಂಭ Chikkamagaluru | ಕಾಶ್ಮೀರದಲ್ಲಿ ಉಗ್ರರ ದಾಳಿ: ಕೊಟ್ಟಿಗೆಹಾರ ಬಂದ್; ಅಂಗಡಿ-ಮುಂಗಟ್ಟು ಸ್ತಬ್ದ Murder | ನಾರಾಯಣಪುರ: ಗೌಡಪ್ಪ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಪ್ರಾಪ್ತ ವಯಸ್ಸಿನ…

ಇತ್ತೀಚಿನ ಸುದ್ದಿ

ಜೆಡಿಎಸ್- ಬಿಜೆಪಿ ಸಖ್ಯ: ಕೇಸರಿ ಪಾಳಯ ತೊರೆದು ದಳ ಸೇರಿದ್ದ ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ ಮತ್ತೆ ಪೇಚಿಗೆ; ಸೇರ್ತಾರಾ ಕಾಂಗ್ರೆಸ್ಸಿಗೆ?

01/10/2023, 11:50

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com
ಕಳೆದ ವಿಧಾನಸಭೆ ಚುನಾವಣೆಯ ವೇಳೆ ಬಿಜೆಪಿ ತೊರೆದು ಜನತಾ ದಳ ಸೇರಿದ್ದ ಮೂಡಿಗೆರೆಯ ಮಾಜಿ ಶಾಸಕ ಕುಮಾರಸ್ವಾಮಿ ಮತ್ತೆ ಪೇಚಿಗೆ ಸಿಲುಕಿದ್ದಾರೆ. ಅವರು ಸೇರಿದ್ದ ಜಾತ್ಯತೀತ ಜನತಾ ದಳವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಜತೆ ಮೈತ್ರಿ ಮಾಡಿಸಿಕೊಂಡಿದ್ದಾರೆ.
ಮೂಡಿಗೆರೆ ಕುಮಾರಸ್ವಾಮಿ ಜನತಾ ದಳದಲ್ಲಿ ಉಳಿದರೆ ಮತ್ತೆ ಅವರು ಸಿ.ಟಿ. ರವಿ, ಶೋಭಾ ಕರಂದ್ಲಾಜೆ ಮುಂತಾದ ಬಿಜೆಪಿ ನಾಯಕರಿಗೆ ಮುಖಾಮುಖಿಯಾಗಬೇಕಾಗುತ್ತದೆ. ಬಿಜೆಪಿ ಸಂಗ ಬೇಡವೆಂದು ಜನತಾದಳ ಸೇರಿದ ಕುಮಾರಸ್ವಾಮಿ ಅವರಿಗೆ ‘ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ’ ಎನ್ನುವ ಸನ್ನಿವೇಶ ಎದುರಾಗಿದೆ.
ಕುಮಾರಸ್ವಾಮಿ ಅವರು ಬಿಜೆಪಿ ಶಾಸಕರಾಗಿರುವಾಗಲೇ ಬಿಜೆಪಿಯ ಒಂದು ಗುಂಪು ಅವರ ವಿರುದ್ದ ಹಲ್ಲು ಮಸೆಯುತ್ತಿತ್ತು. ಕುಮಾರಸ್ವಾಮಿ ಕಮುನಿಸ್ಟ್ ಎಂಬ ಪುಕಾರು ಎಬ್ಬಿಸಿದ್ದರು. ಹಲ್ಲೆ ಕೂಡ ನಡೆದಿತ್ತು. ಇಷ್ಟೆಲ್ಲ ನಡೆದ ಮೇಲೆ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಯಿತು. ಕಾಂಗ್ರೆಸ್ ಗೆ ಹೋಗೋಣ ಅಂದ್ರೆ ಅಲ್ಲಿ ನಯನಾ ಮೋಟಮ್ಮ ಅವರಿಗೆ ಟಿಕೆಟ್ ಫೈನಲ್ ಆಗಿತ್ತು. ನಂತರ ಉಳಿದಿರುವ ರಾಜಕೀಯ ಆಸರೆ ಎಂದರೆ ಜಾತ್ಯತೀತ ಜನತಾ ದಳ ಮಾತ್ರ. ಹಾಗೆ ಕುಮಾರಸ್ವಾಮಿ ಅವರು ಮತ್ತೊಬ್ಬ ಕುಮಾರಸ್ವಾಮಿಯ ಜನತಾ ದಳ ಬಸ್ಸನ್ನು ಏರಿಯೇ ಬಿಟ್ಟರು. ಈಗ ವಿಧಾನಸಭೆ ಚುನಾವಣೆ ಮುಗಿದು 4 ತಿಂಗಳು ಕಳೆದಿವೆ. ರಾಜಕೀಯ ಸ್ಥಿತ್ಯಂತರ ಮತ್ತೆ ರಾಜ್ಯದಲ್ಲಿ ಪ್ರಾರಂಭವಾಗಿದೆ. ಜನತಾ ದಳ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ವಿಧಾನಸಭೆ ಚುನಾವಣೆಯಲ್ಲಿ 40+ ಸೀಟುಗಳ ಕನಸು ಕಂಡಿದ್ದ ಜನತಾ ದಳಕ್ಕೆ ಸಿಕ್ಕಿದ್ದು ಬರೇ 19 ಸೀಟು. ಅದಲ್ಲದೆ ತಮ್ಮ ರಾಜಕೀಯ ವಿರೋಧಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಇವೆಲ್ಲದರ ಫಲಶೃತಿ ಜನತಾ ದಳ ಮತ್ತು ಬಿಜೆಪಿಯ ಮೈತ್ರಿ ಆಗಿದೆ.
ಕುಮಾರಸ್ವಾಮಿ ಮತ್ತು ಜೆ.ಪಿ. ನಡ್ಡಾ ಅವರ ನಡುವೆ ಒಡಂಬಡಿಕೆ ಏನೋ ನಡೆದು ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ಬಿಜೆಪಿ ಸಂಗ ಬೇಡವೆಂದು ಜನತಾ ದಳ ಸೇರಿದ ಮೂಡಿಗೆರೆಯ ಕುಮಾರಸ್ವಾಮಿ ಪಾಡೇನು? ಇವೆಲ್ಲದಕ್ಕೆ ಉತ್ತರ ಕಾಂಗ್ರೆಸ್ ಸೇರ್ಪಡೆ ಆಗಿದೆ. ಸದ್ಯದಲ್ಲೇ ಕುಮಾರಸ್ವಾಮಿ ಅವರು ಕೈ ಪಾಳಯ ಸೇರುವುದು ಬಹುತೇಕ ಗ್ಯಾರಂಟಿಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು