ಇತ್ತೀಚಿನ ಸುದ್ದಿ
ಶೃಂಗೇರಿ: ತುಂಗಾ ನದಿಯ ನಡುಗಡ್ಡೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಇಬ್ಬರ ರಕ್ಷಣೆ; ಅಗ್ನಿ ಶಾಮಕ ದಳ ಕಾರ್ಯಾಚರಣೆ
29/09/2023, 23:14
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಶೃಂಗೇರಿ ಪಟ್ಟಣದ ತುಂಗಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ
ಇಬ್ಬರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.
ಸ್ನಾನದ ಬಳಿಕ ಬಟ್ಟೆ ಒಣಗಿಸಲು ಅಲ್ಲೇ ಉಳಿದಿದ್ದ ಇಬ್ಬರು ಪ್ರವಾಹಕ್ಕೆ ಸಿಲುಕಿದ್ದರು. ಮಧ್ಯಾಹ್ನ ತುಂಗಾ ನದಿಯ ಮಧ್ಯ ಭಾಗದ ನಡುಗಡ್ಡೆಗೆ ತೆರಳಿದ್ದರು.
ಕೆರೆಕಟ್ಟೆ ಭಾಗದಲ್ಲಿ ಸುರಿದ ಮಳೆಯಿಂದ ನದಿ ನೀರಿನ ಮಟ್ಟ ಕೊಂಚ ಏರಿಕೆಯಾಗಿದೆ.
ತುಂಗಾ ನದಿಯಲ್ಲಿ ಏಕಾಏಕಿ ನದಿ ನೀರಿನ ಮಟ್ಟ ಹೆಚ್ಚಾಗಿತ್ತು. ಶೃಂಗೇರಿಯಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಇಬ್ಬರ ರಕ್ಷಣೆ ಮಾಡಲಾಗಿದೆ.