5:38 PM Sunday16 - November 2025
ಬ್ರೇಕಿಂಗ್ ನ್ಯೂಸ್
ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ…

ಇತ್ತೀಚಿನ ಸುದ್ದಿ

ತೆಲಂಗಾಣ ರಸ್ತೆ ಅಪಘಾತ: ಅಥಣಿ ಕುಟುಂಬದ ಮತ್ತೊಬ್ಬ ಗಾಯಾಳು ಸಾವು; ಮೃತರ ಸಂಖ್ಯೆ 7ಕ್ಕೇರಿಕೆ

26/09/2023, 19:53

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ತೆಲಂಗಾಣದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇನ್ನೊರ್ವ ಗಾಯಾಳು ಸಾವನ್ನಪ್ಪುದರೊಂದಿಗೆ ಮೃತರ ಸಂಖ್ಯೆ 7ಕ್ಕೇರಿದೆ.


ಸೆಪ್ಟಂಬರ್ 15 ರಂದು ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಮಟ್ಟಮ್ ಪಲ್ಲಿ ಕಡಪಾ- ಚಿತ್ತೂರು ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಅಥಣಿ ತಾಲೂಕಿನ ಬಡಚಿ ಗ್ರಾಮದ 5 ಮಂದಿ ಸಾವನ್ನಪ್ಪಿದ್ದರು. ತಿರುಪತಿ ಪ್ರವಾಸಕ್ಕೆ ತೆರಳಿದ ಆಜೂರ್ ಕುಟುಂಬದ 14 ಜನರಲ್ಲಿ ನಾಲ್ವರು ಹಾಗೂ ವಾಹನ ಚಾಲಕ ಒಟ್ಟು ಐದು ಜನ ಸ್ಥಳದಲ್ಲೇ ಮೃತ ಪಟ್ಟಿದ್ದರು ಕಸ್ತೂರಿ ಆಜೂರ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಿಂದ – ಬೆಳಗಾವಿಗೆ ತರುವಾಗ ರಸ್ತೆ ಮದ್ಯದಲ್ಲೇ ಕೊನೆವುಸಿರೆಳೆದಿದ್ದರು.. ಇನ್ನುಳಿದ 7 ಜನರಲ್ಲಿ ಇಂದು ನಸುಕಿನ ಜಾವ ಮತ್ತೊರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೆಡಾಗಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸವರಾಜ್ ಗಿರಿಮಲ್ಲ ಆಜೂರ್ (32) ಮಹಾರಾಷ್ಟ್ರ ದ ಮಿರಜ್ ಆಸ್ಪತ್ರೆಗೆ ತರುವಾಗ ರಸ್ತೆ ಮದ್ಯ ಸಾವು ಸಂಭವಿಸಿದೆ.
ಬಸವರಾಜ ಸಾವಿನಿಂದ ಆಜೂರ ಕುಟುಂಬದ ಸಾವಿನ ಸಂಖ್ಯೆ 7ಕ್ಕೆ ಏರಿದೆ. ಇನ್ನುಳಿದ ತಿರುಪತಿ ತಿಮ್ಮಪ್ಪನ ಪ್ರವಾಸದಲ್ಲಿ ಕುಟುಂಬ ಕಳೆದುಕೊಂಡ ಆಜೂರ ಮನೆತನದಲ್ಲಿ ನೀರವ ಮೌನ ಅವರಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು