9:04 PM Sunday6 - April 2025
ಬ್ರೇಕಿಂಗ್ ನ್ಯೂಸ್
ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:… Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್… HDK | ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ಸರಕಾರದಿಂದ ದ್ವಿಮುಖ ನೀತಿ: ಕೇಂದ್ರ ಸಚಿವ… HDK | ವಿಧಾನ ಸೌಧ 3ನೇ ಮಹಡಿಯಲ್ಲಿ ಘಜ್ನಿ , ಘೋರಿ, ಮಲ್ಲಿಕ್… FKCCI Udyog Mela | ಉದ್ಯೋಗ ನೀಡುವ ಜತೆಗೆ ಉತ್ತಮ ಸಂಬಳ ನೀಡಿ:… Bangalore | ಮೋಸ ಹೋಗಬೇಡಿ; ಇಲಾಖೆಯಲ್ಲಿ ಯಾವುದೇ ನೇಮಕಾತಿ ಇಲ್ಲ: ಸಚಿವೆ ಲಕ್ಷ್ಮೀ… Bangaluru | ಚಿಲಿ ಅಧ್ಯಕ್ಷ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಬೆಂಗಳೂರಿಗೆ ಭೇಟಿ: 2… Mangaluru | ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ: ಮಂಗಳೂರಿನ ಸಿಯೆಲ್‌… Bangaluru | ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿಯಿಂದ ವಿನೂತನ ಯೋಜನೆ:… Good News | ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ…

ಇತ್ತೀಚಿನ ಸುದ್ದಿ

Maravoor | ಸೇತುವೆ ಮೇಲೆತ್ತುವ ಕಾರ್ಯ ಬಹುತೇಕ ಪೂರ್ಣ : ಜುಲೈ 30 ರಿಂದ ಮರವೂರು ಸೇತುವೆ ಓಪನ್ ?

27/07/2021, 15:06

ಮಂಗಳೂರು (ReporterKarnataka.com)

ಮಂಗಳೂರಿನ ಪ್ರಮುಖ ಸಂಪರ್ಕ ಕೊಂಡಿಯಾದ ಮರವೂರು ಸೇತುವೆ ಕುಸಿದ್ದು ಬಿದ್ದಿದ್ದು ಸಂಚಾರಕ್ಕೆ ಬಹಳಷ್ಟು ತೊಂದರೆ ಉಂಟಾಗಿತ್ತು. ಈಗ ಸೇತುವೆಯನ್ನು ಮತ್ತೆ ಎತ್ತರಿಸುವ ಕೆಲಸ ಮಾಡಲಾಗಿದ್ದು, ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ.

ಮಂಗಳೂರಿನಿಂದ ಬಜ್ಜೆ ಏರ್ಪೋರ್ಟ್ ಮತ್ತು ಕಟೀಲು ಕಡೆಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ತಿಂಗಳ ಹಿಂದೆ ಕುಸಿದಿತ್ತು. ಇನ್ನೊಂದು ಹೊಸ ಸೇತುವೆ ನಿರ್ಮಾಣ ಸಂದರ್ಭದಲ್ಲಿ ನದಿಗೆ ಮಣ್ಣು ಹಾಕಿದ್ದರಿಂದ ಒಂದು ಭಾಗದಲ್ಲಿ ಮಾತ್ರ ನೀರು ರಭಸವಾಗಿ ಹರಿದ ಪರಿಣಾಮ ಅಲ್ಲಿನ ಹಳೆ ಸೇತುವೆಯ ಪಿಲ್ಲರ್ ಕುಸಿದು ನಿಂತಿತ್ತು. ಹೀಗಾಗಿ ಸೇತುವೆ ಎರಡು ಪಿಲ್ಲರ್ ಗಳ ನಡುವೆ ಒಂದೂವರೆ ಅಡಿಯಷ್ಟು ಸ್ಲಾಬ್ ಕುಸಿದಿತ್ತು.

ಇದೀಗ ಸೇತುವೆಯನ್ನು ಪರ್ಯಾಯ ವ್ಯವಸ್ಥೆಯ ಮೂಲಕ ಎತ್ತರಿಸಲಾಗಿದ್ದು, ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅನುವಾಗುವಂತೆ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡಿದ್ದು, ಜುಲೈ 30ರಿಂದ ಲಘು ವಾಹನಗಳ ಸಂಚಾರಕ್ಕೆ ಮುಕ್ತ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು