9:08 PM Saturday13 - September 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ

ಇತ್ತೀಚಿನ ಸುದ್ದಿ

ಬ್ಯಾಂಕ್ ಆಫ್ ಬರೋಡದಿಂದ ಭರ್ಜರಿ ಫೆಸ್ಟಿವ್ ಆಫರ್: ‘BOB ಕೆ ಸಂಗ್ ತ್ಯೋಹಾರ್ ಕಿ ಉಮಂಗ್’

14/09/2023, 16:33

ಮಂಗಳೂರು(reporterkarnataka.com):ಬ್ಯಾoಕ್ ಆಫ್ ಬರೋಡ ಈ ಬಾರಿಯ ಹಬ್ಬದ ಸೀಸನ್​ಗೆ ಒಳ್ಳೆಯ ಆಫರ್​ಗಳನ್ನು ಗ್ರಾಹಕರ ಮುಂದಿಟ್ಟಿದೆ. ಡಿಸ್ಕೌಂಟ್ ಬಡ್ಡಿ ದರದಲ್ಲಿ ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ ಮತ್ತು ವೈಯಕ್ತಿಕ ಸಾಲಗಳನ್ನು ಆಫರ್ ಮಾಡಿದೆ. ಹಾಗೆಯೇ, ನಾಲ್ಕು ವಿಶೇಷ ಸೇವಿಂಗ್ಸ್ ಅಕೌಂಟ್​ಗಳನ್ನೂ ಚಾಲನೆಗೊಳಿಸಿದೆ. ಇವುಗಳ ಜೊತೆಗೆ ಈಗಿರುವ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್​ಗಳಿಗೂ ವಿವಿಧ ಡಿಸ್ಕೌಂಟ್​ಗಳನ್ನು ನೀಡಲಾಗುತ್ತಿದೆ. ಡಿಸೆಂಬರ್ 31, 2023ರವರೆಗೂ ಈ ಆಫರ್​ಗಳು ಇರಲಿವೆ.
ಬ್ಯಾಂಕ್ ಆಫ್ ಬರೋಡ ಬಹಳ ಕಡಿಮೆ ಬಡ್ಡಿದರಗಳಿಗೆ ಸಾಲಗಳ ಆಫರ್ ಮಾಡುತ್ತಿದೆ. ಶೇ. 8.40ರಿಂದ ಅದರ ಸಾಲದ ದರ ಆರಂಭವಾಗುತ್ತದೆ. ಈ ಬಾರಿಯ ಹಬ್ಬಕ್ಕೆ ಬ್ಯಾಂಕ್ ಆಫರ್ ಬರೋಡ ತನ್ನ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ನೀಡಿದೆ. ‘ಬಾಬ್ ಕೆ ಸಂಗ್, ತ್ಯೋಹಾರ್ ಕೀ ಉಮಂಗ್’ ಎಂಬ ಅಭಿಯಾನ ಆರಂಭಿಸಿರುವ ಬ್ಯಾಂಕ್ ಆಫ್ ಬರೋಡ, ಡಿಸೆಂಬರ್ 31ರವರೆಗೂ ಕಡಿಮೆ ಬೆಲೆ ಗೃಹಸಾಲ, ವಾಹನ ಸಾಲ ಮತ್ತು ಶಿಕ್ಷಣ ಸಾಲಗಳನ್ನು ನೀಡುತ್ತಿದೆ. ಇದರ ಜೊತೆಗೆ ತನ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳಿಗೂ ಭರ್ಜರಿ ಡಿಸ್ಕೌಂಟ್​ಗಳನ್ನೂ ಕೊಡುತ್ತಿದೆ. ಹಾಗೆಯೇ, ನಾಲ್ಕು ಹೊಸ ಸೇವಿಂಗ್ಸ್ ಖಾತೆಗಳನ್ನೂ ಬಿಡುಗಡೆ ಮಾಡಿದೆ.
ಹಬ್ಬದ ಕೊಡುಗೆಯಾಗಿ ಬ್ಯಾಂಕ್ ಆಫ್ ಬರೋಡಾ ಮಾಡುತ್ತಿರುವ ಆಫರ್​ನಲ್ಲಿ ಸಾಲದ ಬಡ್ಡಿದರ ಬಹಳ ಕಡಿಮೆ ಮಾಡಲಾಗಿದೆ. ಅದರ ಗೃಹಸಾಲ ಶೇ. 8.40ಯಿಂದ ಆರಂಭವಾಗುತ್ತದೆ. ಇನ್ನು, ಕಾರ್ ಲೋನ್ ದರ ಶೇ. 8.70ಯಿಂದ ಆರಂಭವಾಗುತ್ತದೆ. ವಿಶೇಷ ಎಂದರೆ ಗೃಹಸಾಲ ಮತ್ತು ವಾಹನ ಸಾಲಗಳಿಗೆ ಪ್ರೋಸಸಿಂಗ್ ಫೀಯಿಂದ ವಿನಾಯಿತಿ ನೀಡಲಾಗಿದೆ. ಬಾಬ್ ನೀಡುವ ಶಿಕ್ಷಣ ಸಾಲಕ್ಕೆ ಬಡ್ಡಿದರ ಶೇ. 8.55ರಿಂದ ಶುರುವಾಗುತ್ತದೆ. ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ಅಡಮಾನ ಇಲ್ಲದೇ ಇನ್ನೂ ಕಡಿಮೆ ಬಡ್ಡಿದರಕ್ಕೆ ಶಿಕ್ಷಣ ಸಾಲವನ್ನು ಬ್ಯಾಂಕ್ ಆಫ್ ಬರೋಡಾ ಆಫರ್ ಮಾಡಿದೆ. ಈ ಬ್ಯಾಂಕ್​ನ ವೈಯಕ್ತಿಕ ಸಾಲಕ್ಕೆ ಬಡ್ಡಿದರ ಶೇ. 10.10ರಿಂದ ಶುರುವಾಗುತ್ತದೆ. ಗರಿಷ್ಠ 20 ಲಕ್ಷ ರೂವರೆಗೂ ಸಾಲ ಪಡೆಯಬಹುದು. ಪ್ರೋಸಸಿಂಗ್ ಶುಲ್ಕ ಇರುವುದಿಲ್ಲ. ಫ್ಲೋಟಿಂಗ್ ರೇಟ್ ಜೊತೆಗೆ ಫಿಕ್ಸೆಡ್ ರೇಟ್ ಆಯ್ಕೆಯನ್ನೂ ಗ್ರಾಹಕರಿಗೆ ನೀಡಲಾಗಿದೆ. ಇದು ವೈಯಕ್ತಿಕ ಸಾಲ ಪಡೆಯುವವರಿಗೆ ಮಾತ್ರವಲ್ಲ, ವಾಹನ ಸಾಲ ಪಡೆಯುವವರಿಗೂ ಅನ್ವಯ ಆಗುತ್ತದೆ.
ಫೆಸ್ಟಿವ್ ಆಫರ್ ಆಗಿ ಬ್ಯಾಂಕ್ ಆಫರ್ ಬರೋಡಾ ಲೈಟ್ ಸೇವಿಂಗ್ಸ್ ಅಕೌಂಟ್, ಬ್ರೋ ಸೇವಿಂಗ್ಸ್ ಅಕೌಂಟ್, ಪರಿವಾರ್ ಅಕೌಂಟ್ ಮತ್ತು ಎನ್​ಆರ್​ಐ ಪವರ್​ಪ್ಯಾಕ್ ಅಕೌಂಟ್, ಹೀಗೆ ನಾಲ್ಕು ಉಳಿತಾಯ ಖಾತೆಗಳನ್ನು ಬಿಒಬಿ ಆರಂಭಿಸಿದೆ. ಇದರಲ್ಲಿ ಬಿಒಬಿ ಲೈಟ್ ಮತ್ತು ಬ್ರೋ ಸೇವಿಂಗ್ಸ್ ಅಕೌಂಟ್​ಗಳಲ್ಲಿ ಮಿನಿಮಮ್ ಬ್ಯಾಲನ್ಸ್ ಎಂಬುದು ಇರುವುದಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು