ಇತ್ತೀಚಿನ ಸುದ್ದಿ
ಪ್ರತಿಪಕ್ಷ ನಾಯಕರ ಆಯ್ಕೆ ವಿಳಂಬ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಗೆ ಲೀಗಲ್ ನೋಟಿಸ್; ಪ್ರತಿ ನಳಿನ್ ಕುಮಾರ್ ಕಟೀಲಿಗೆ
10/09/2023, 22:54
ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕನ ಆಯ್ಕೆಯಲ್ಲಿ ವಿಳಂಬ ನೀತಿ ಅನುಸರಿಸಿರುವುದಕ್ಕೆ
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾರಿಗೆ ವಕೀಲ ಎನ್.ಪಿ. ಅಮೃತೇಶ್ ಲೀಗಲ್ ನೋಟಿಸ್ ನೀಡಿದ್ದಾರೆ.
ರಾಜ್ಯದಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆಯಾಗದಿರುವುದರಿಂದ ಹಲವು ನೇಮಕ ವಿಳಂಬವಾಗಿವೆ. ಮಾನವ ಹಕ್ಕುಗಳ ಆಯೋಗ, ಉಪಲೋಕಾಯುಕ್ತ, ಕೆಪಿಎಸ್ ಸಿ ಸೇರಿದಂತೆ ಹಲವು ನೇಮಕಗಳಾಗುತ್ತಿಲ್ಲ. ಕಾನೂನಿನಂತೆ ಕೆಲ ಮಹತ್ವದ ಹುದ್ದೆಗಳಿಗೆ ನೇಮಕ ಮಾಡಲು ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ, ಮುಖ್ಯ ನ್ಯಾಯಮೂರ್ತಿಗಳ ಸಮಾಲೋಚನೆಯ ಅಗತ್ಯವಿದೆ ಎಂದಿದ್ದಾರೆ.
ಸರಕಾರ ಎಡವಿದಾಗ ಎಚ್ಚರಿಸಲು, ಜನರ ಪರವಾಗಿ ಸಮರ್ಥವಾಗಿ ಧ್ವನಿ ಎತ್ತಲು ಪ್ರತಿ ಪಕ್ಷದ ನಾಯಕನ ಅಗತ್ಯವಿದೆ. ಭಾರತದ ಪ್ರಜೆಯಾಗಿ, ಮತದಾರನಾಗಿ, ಪ್ರತಿಪಕ್ಷದ ನಾಯಕನನ್ನು ನೇಮಿಸುವಂತೆ ಕೋರಿಕೊಳ್ಳುವ ಹಕ್ಕು ನನಗಿದೆ. ಹೀಗಾಗಿ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ. ನೋಟಿಸ್ ಪ್ರತಿಯನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸ್ಪೀಕರ್ ಹಾಗೂ ರಾಜ್ಯಪಾಲರಿಗೂ ಕಳುಹಿಸಲಾಗಿದೆ.