ಇತ್ತೀಚಿನ ಸುದ್ದಿ
ವೈರಲ್ ಮದುವೆ ಪ್ರಕರಣಕ್ಕೆ ಟ್ವಿಸ್ಟ್ : ಇಬ್ಬರೂ ಸೋದರಿಯರ ಮುದ್ದಿನ ಗಂಡನಾಗಲು ಹೊರಟವನಿಗೆ ಬಿತ್ತು ಕೇಸ್
16/05/2021, 20:38

ಕೋಲಾರ(Reporter Karnataka News)
ಅಕ್ಕ ತಂಗಿ ಇಬ್ಬರನ್ನೂ ಮದುವೆಯಾದ ಯುವಕನೊಬ್ಬನ ಫೋಟೊ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಬ್ಬರು ಹೆಂಡತಿಯರ ಮುದ್ದಿನ ಗಂಡನಾಗಿ ವೈರಲ್ ಆಗಿದ್ದ ಯುವಕನ ಪರಿಣಯ ಪ್ರಸಂಗಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಮದುವೆಯಾದ ಸಹೋದರಿಯರಲ್ಲಿ ತಂಗಿ ಅಪ್ರಾಪ್ತೆಯಾಗಿದ್ದು, ಆಕೆಯನ್ನು ಮದುವೆ ಆಗಿದ್ದಕ್ಕಾಗಿ ವರನನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ.
ಕೋಲಾರದಲ್ಲಿ ತಂಗಿ ಜೊತೆ ಮಾತು ಬಾರದ ಅಕ್ಕನನ್ನು ಮದುವೆ ಆಗಿ ಹೀರೋ ಎನಿಸಿಕೊಂಡಿದ್ದ ಮುಳಬಾಗಿಲಿನ ಯುವಕ ಉಮಾಪತಿ ಅವರನ್ನು ಚೈಲ್ಡ್ ಮ್ಯಾರೇಜ್ ಆಕ್ಟ್ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಮದುವೆ ಪ್ರಕರಣದಲ್ಲಿ ಉಮಾಪತಿ, ಉಮಾಪತಿ ತಾಯಿ- ತಂದೆ, ಹುಡುಗಿ ತಾಯಿ-ತಂದೆ ಹಾಗೂ ಮದುವೆ ಮಾಡಿಸಿದ ಪೂಜಾರಿ ವಿರುದ್ಧವೂ ಮುಳಬಾಗಿಲು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.