4:05 PM Thursday13 - November 2025
ಬ್ರೇಕಿಂಗ್ ನ್ಯೂಸ್
Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ…

ಇತ್ತೀಚಿನ ಸುದ್ದಿ

ಪ್ರಕೃತಿಯ ನಡುವೆ ತೇಜಸ್ವಿ ಓದಿನ ಗಾಜಿನ ಮನೆ: ಇಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮದಿನ

07/09/2023, 23:10

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.ಕಂ

ಕಣ್ಣು ಹಾಯಿಸಿದಷ್ಟು ದೂರವೂ ಹಬ್ಬಿರುವ ಪ್ರಕೃತಿ, ಹಕ್ಕಿಗಳ ಕಲರವ, ಸುತ್ತ ಹೂ ಗಿಡ ಬಳ್ಳಿಗಳ ಮನಮೋಹಕ ದೃಶ್ಯ, ಈ ಅಪೂರ್ವ ದೃಶ್ಯಗಳನ್ನು ನೋಡುತ್ತಾ ಗಾಜಿನ ಮನೆಯಲ್ಲಿ ಕುಳಿತು ಪುಸ್ತಕ ಓದುವ ಅನುಭವ ಅವರ್ಣನೀಯ. ಅಂತಹ ಅನುಭವಕ್ಕೆ ಸಜ್ಜಾಗಿ ಓದುಗರಿಗೆ ಮುಕ್ತವಾಗಿದೆ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಓದಿನ ಗಾಜಿನ ಮನೆ.


ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವೂ ಪ್ರತಿಷ್ಠಾನಕ್ಕೆ ಬರುವ ತೇಜಸ್ವಿ ಅವರ ಓದುಗರಿಗಾಗಿ ಪ್ರಶಾಂತವಾದ ಪರಿಸರದಲ್ಲಿ ಕೆಲಕಾಲ ಕುಳಿತು ಓದುವುದಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಓದಿನ ಗಾಜಿನ ಕೊಠಡಿಯನ್ನು ನಿರ್ಮಾಣ ಮಾಡಿದ್ದು ತೇಜಸ್ವಿ ಅವರ ಎಲ್ಲಾ ಪುಸ್ತಕಗಳನ್ನು ಇಲ್ಲಿ ಓದಬಹುದಾಗಿದೆ. ಯಾವ ಗಲಾಟೆ ಗದ್ದಲಗಳೂ ಇಲ್ಲದೇ ಸುತ್ತ ಗಾಜಿನ ಗೋಡೆಗಳಾಚೆ ಕಾಣುವ ಹಸಿರು ಸೌಂದರ್ಯವನ್ನು ಆಸ್ವಾದಿಸುತ್ತಾ ಹಕ್ಕಿಗಳ ಚಿಲಿಪಿಲಿಗಳನ್ನು ಕೇಳುತ್ತಾ ತೇಜಸ್ವಿ ಅವರ ಕೃತಿಗಳನ್ನು ಓದಬಹುದಾಗಿದೆ. ಪುಸ್ತಕ ಓದಿನ ಜೊತೆಗೆ ಹಬೆಯಾಡುವ ಬಿಸಿಯಾದ ಕಾಫಿಯೂ ಸಿಗಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು