5:40 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಕೃಷ್ಣಾ ನದಿ ತೀರದ ಸಮಾಜ ಸೇವಕಿಗೆ ಒಲಿದು ಬಂದ ಗೌರವ ಡಾಕ್ಟರೇಟ್: ಶ್ರೀದೇವಿ ನಾಯಕ್  ಮುಡಿಗೆ ಮತ್ತೊಂದು ಗರಿ!

25/07/2021, 09:28

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com 

ರಾಯಚೂರು ಜಿಲ್ಲೆಯ  ದೇವದುರ್ಗದ ಅಮ್ಮ ಎಂದೇ ಖ್ಯಾತಿ ಪಡೆದಿರುವ ಶ್ರೀದೇವಿ ರಾಜಶೇಖರ ನಾಯಕ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಬೆಂಗಳೂರಿನಲ್ಲಿ ಅತಿಥಿ ಗೌರವಗಳೊಂದಿಗೆ ಗೌರವಿಸಲಾಯಿತು.

ದಿ.ಎ. ವೆಂಕಟೇಶ ನಾಯಕ ಹಾದಿಯಲ್ಲಿ ನಡೆಯುತ್ತಿರುವ ಮೊಮ್ಮಗಳು ಶ್ರೀದೇವಿ ನಾಯಕ್ ಇದೀಗ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರು ಬಡವರ, ಸಂಕಷ್ಟಕ್ಕೀಡಾದವರ ಧ್ವನಿಯಾಗಿ, ಆಸರೆಯಾಗಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ದಕ್ಷಿಣ ಭಾರತದ ಪ್ರತಿಷ್ಠಿತ ಸಂಸ್ಥೆಯಿಂದ ಸಾಮಾಜಿಕ ಸೇವೆಗಾಗಿ ಗುರುತಿಸಿ ಇಂದು ಜನಪ್ರತಿನಿಧಿಗಳು ಮಾಡಲಾಗದಂತಹ. ಕೆಲಸಗಳನ್ನು ಶ್ರೀದೇವಿ ನಾಯಕರು ಮಾಡಿ ತೋರಿಸಿದ್ದಾರೆ.

ಹೌದು,ಶ್ರೀದೇವಿ ನಾಯಕ್ ಅವರು ಸಮಾಜ ಸೇವೆ ಎಂದರೆ ದೇವರ ಸೇವೆ ಎಂದು ನಂಬಿರುವ ಕುಟುಂಬದಿಂದ ಬಂದವರು. ಜನರ ಸೇವೆ ಜನಾರ್ಧನ ಸೇವೆ ಎಂದು ಕಾಲನು ಕಾಲದಿಂದ ನಂಬಿರುವ ಕುಟುಂಬದ ಹೆಣ್ಣು ಮಗಳು. ಕಷ್ಟ ಎಂದು ಬರುವ ಜನರನ್ನು ಬರಿಗೈಯಲ್ಲಿ ಎಂದೂ ಕಳಿಸದ ಮನೆತನದವರು.

ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾದಾಗ ಜನರಿಂದ ಆಯ್ಕೆಯಾದ ಜನ ಪ್ರತಿನಿಧಿಗಳು ಊರು ಬಿಟ್ಟಾಗ ನದಿ ತೀರದ ಜನರ ಜತೆ ಜೀವದ ಹಂಗು ತೊರೆದು ಆ ಜನರ ರಕ್ಷಣೆ, ಊಟ -ವಸತಿಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು.ಲಾಕ್ ಡೌನ್ ಪದವನ್ನು ಕೇಳದೆ ಇರುವ ಜನರಿಗೆ ಆಹಾರ ಕಿಟ್ ವಿತರಿಸಿದ್ದರು. ವಾಹನ ಸಂಪರ್ಕ ಸಹ ಸಾಧ್ಯವಾಗದ ಸ್ಥಿತಿಯಲ್ಲಿದ್ದ 40-50 ಹಳ್ಳಿಗಳಿಗೆ ನಿರಂತರವಾಗಿ ಆಹಾರ ಕಿಟ್ ವಿತರಣೆ, ಮಾಸ್ಕ್ ಸ್ಯಾನಿಟೈಸರ್, ವಿತರಣೆಯ ಸಂಪೂರ್ಣ ಜವಾಬ್ದಾರಿಯನ್ನು ಇದೇ ಶ್ರೀದೇವಿ ನಾಯಕರು ಹೊತ್ತಿದ್ದರು.

ಅಂದು ಕೊರೊನಾ ಸಂಕಷ್ಟ ಸಮಯದಲ್ಲಿ ಪ್ರಾರಂಭವಾದ ಈ ಸೇವಾ ಕಾರ್ಯ ಇಂದಿಗೂ ಸಹ ನಿಂತಿಲ್ಲ. ಈ ಸೇವೆ ದೇವರ ಸೇವೆ ಎಂದು ಪರಿಗಣಿಸಿ ಯಾವುದೇ ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಹಂತಗಳಲ್ಲಿ ಕೊವಿಡ್ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಪಿಪಿಇ ಕೀಟ್,  ತಿಂಗಳ‌ಗೆ ಆಗುವಷ್ಟು ಆಹಾರ ಕಿಟ್, ಅಕ್ಕಿ ಬೇಳೆ ಎಲ್ಲವನ್ನೂ ಅವರ ಮನೆ-ಮನೆಗೆ ಮುಟ್ಟಿಸಿದ್ದಾರೆ. ಇದು ನಿರಂತರವಾಗಿ ಎರಡು ವರ್ಷಗಳಿಂದ ಮುಂದುವರಿದಿದೆ.

ರಾಯಚೂರು ಜಿಲ್ಲೆಯ ಸಹಕಾರಿ ರತ್ನ ಎಂದು ಬಿರುದನ್ನು  ಶ್ರೀದೇವಿ ನಾಯಕರು ಪಡೆದಿದ್ದಾರೆ.

ಭಾಗ್ಯವಂತಿ ಮಹಿಳಾ ಸಹಕಾರಿ ಬ್ಯಾಂಕ್ ಎಂದು ನಾಲ್ಕು ಬ್ಯಾಂಕುಗಳನ್ನು ಹೊಂದಿರುವ ಶ್ರೀದೇವಿ ನಾಯಕರು ಈ ಬ್ಯಾಂಕುಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ್ದಾರೆ. ಮಹಿಳೆಯರ ಅಗತ್ಯ ಕಿರು ಸಾಲ, ವಿವಿಧ ರೀತಿಯ ನೇರ ಸಾಲ, ಅಗತ್ಯ ನೆರವು ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಹೆಣ್ಣು ತನ್ನ ಕಾಲ ಮೇಲೆ ತಾನು ನಿಲ್ಲಲು ಪ್ರೋತ್ಸಾಹ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು