ಇತ್ತೀಚಿನ ಸುದ್ದಿ
ಕೌಲಾಲಂಪುರದಲ್ಲಿ ನಡೆದ ವಿಶ್ವ ಟೇಕ್ವಾಂಡೊ ಚಾಂಪಿಯನ್ ಶಿಪ್: ಕುಡ್ಲದ ಕುವರಿ ಸಂಹಿತಾಗೆ ಚಿನ್ನ
20/08/2023, 11:15
ಕೌಲಾಲಂಪುರ(reporterkarnataka.com): ಮಲೇಶಿಯಾ ಕೌಲಾಲಂಪುರದ ಜುರಾ ಸ್ಟೇಡಿಯಂನಲ್ಲಿ ಆ.18-20 ವರೆಗೆ ನಡೆದ ಅಂತಾರಾಷ್ಟ್ರೀಯ ಟೇಕ್ವಾಂಡೊ ಚಾಂಪಿಯನ್ ಶಿಪ್ ನ ಸಿ.ಕೆ. ಕ್ಲಾಸಿಕ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ ಸಂಹಿತಾ ಅಲೆವೂರಾಯ ಕೆ.ವಿ. ಚಿನ್ನ ಮತ್ತು ಕಂಚಿನ ಪದಕ ಪಡೆದಿದ್ದಾರೆ.
2022ರಲ್ಲಿ ನಡೆದ ವಿಶ್ವ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದಿದ್ದರು.
ಸಂಹಿತಾ ಅವರು ಕದ್ರಿಯ ಕುಂಜತ್ತೋಡಿ ವಾಸುದೇವ ಭಟ್ ಮತ್ರು ದೀಪಾ ಕೆ.ಎಸ್. ದಂಪತಿ ಪುತ್ರಿ. ಶಾರದಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಡಾ.ಗುರುರಾಜ ಇಟಗಿ ಮತ್ತು ನಿಖಿಲ್ ಶೆಟ್ಟಿ ತರಬೇತಿ ನಿಡುತ್ತಿದ್ದಾರೆ.