4:20 PM Sunday28 - April 2024
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ… ಸುಪ್ರೀಂ ಕೋರ್ಟ್ ಸೂಚಿಸಿದ ಬಳಿಕ ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ… ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು ನಂಜನಗೂಡಿನಲ್ಲಿ ಶಾಂತಿಯುತ ಚುನಾವಣೆ: ಸಂಜೆ 4ಕ್ಕೆ ಸುಮಾರು ಶೇ.65 ಮತದಾನ ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ

ಇತ್ತೀಚಿನ ಸುದ್ದಿ

ನಾಗಮಂಗಲ: ಸಾಮೂಹಿಕ ಅಗ್ನಿ ಹೋತ್ರದ ಮೂಲಕ ಯೋಗ ಶಿಬಿರಕ್ಕೆ ಚಾಲನೆ

16/04/2021, 10:46

ಮಂಡ್ಯ( reporterkarnataka news): ಯೋಗ ಫಾರ್‌ ಇಮ್ಯುನಿಟಿ ಎಂಬ ಪರಿಕಲ್ಪನೆಯೊಂದಿಗೆ ಕೊರೊನಾ ಜಾಗೃತಿ ಅಂಗವಾಗಿ ಹಮ್ಮಿಕೊಳ್ಳಲಾಗಿರುವ  ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರಕ್ಕೆ ವಿಶೇಷವಾಗಿ ಸಾಮೂಹಿಕ ಅಗ್ನಿಹೋತ್ರ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಬಸವ ಪತಂಜಲಿ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರ ಕಪ್ಪದಗುಡ್ಡ  ಹಾಗೂ ಬಸವ ಪತಂಜಲಿ ಯೋಗ ಸಮಿತಿ ನಾಗಮಂಗಲ ಇವರ ಸಹಯೋಗದಲ್ಲಿ ಆಯೋಜಿಸಿರುವ 15 ದಿನಗಳ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರವನ್ನು ನಾಗಮಂಗಲ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಸೂರ್ಯೋದಯ ಕಾಲದಲ್ಲಿ ಸಾಮೂಹಿಕ ಅಗ್ನಿಹೋತ್ರದ ಮೂಲಕ ಪ್ರಾರಂಭಿಸಲಾಯಿತು.

ಅಗ್ನಿಹೋತ್ರದ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಸಪ್ತಗಿರಿ ಕ್ಲಿನಿಕ್  ನ  ವೈದ್ಯರಾದ ಡಾ. ವೆಂಕಟೇಶ್ ಕೆ.ಕೆ. ಅವರು ಅಗ್ನಿಹೋತ್ರದ ವೈಜ್ಞಾನಿಕ ಮಹತ್ವವನ್ನು ತಿಳಿಸಿದರು.

ಆಧುನಿಕ ಯುಗದಲ್ಲಿ ಮನುಷ್ಯ ತನ್ನ ಶ್ರಮವನ್ನು ಮಿತಿಗೊಳಿಸಿಕೊಳ್ಳಲು ಹೆಚ್ಚು ಹೆಚ್ಚು ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನದ ಮೋರೆ ಹೋಗುತ್ತಿರುವುದರ ಪರಿಣಾಮವಾಗಿ  ವಾತಾವರಣ  ಕಲುಷಿತಗೊಂಡು ಅನೇಕ  ದುಷ್ಪರಿಣಾಮಗಳನ್ನು ಇಂದು ಎದುರಿಸುವಂತಾಗಿದೆ. ಅಗ್ನಿಹೋತ್ರವನ್ನು ಮಾಡುವುದರಿಂದ ವಾತಾವರಣ ಶುದ್ದಿಗೋಳ್ಳುವುದರ ಜೊತೆಗೆ ಉಸಿರಾಟ ತೊಂದರೆ, ಚರ್ಮದ ರೋಗ,  ಮಾನಸಿಕ ಒತ್ತಡ ನಿವಾರಣೆಯಾಗುವುದಲ್ಲದೆ ರೋಗನಿರೋಧಕ ಶಕ್ತಿ ವೃದ್ದಿಯಾಗುತ್ತದೆ. ಜೊತೆಗೆ ಕೌಟುಂಬಿಕ ಸಾಮರಸ್ಯ ವೃದ್ಧಿಯಾಗಿ ಸ್ವಸ್ಥ ಸಾಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.

ಪ್ರತಿ ದಿನ  ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅಗ್ನಿಹೋತ್ರ ಮಾಡುವುದು ಸೂಕ್ತ.ಅತ್ಯಂತ ಉಪಯುಕ್ತವಾದ ಹಾಗೂ ಆರೋಗ್ಯಕರವಾದ ಇಂತಹ ಸನಾತನ ಆಚರಣೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಪ್ರತಿ ಮನೆ ಮನೆಯಲ್ಲೂ ಅಗ್ನಿಹೋತ್ರ ಮಾಡುವಂತೆ ಆಗಬೇಕು, ಅದು ಪ್ರಸ್ತುತ ಕಾಲಘಟ್ಟದಲ್ಲಿ ಅನಿವಾರ್ಯ ವಾಗಿದೆ ಎಂದರು.

ನಂತರ ಮಾತನಾಡಿದ ಆಯುರ್ವೇದ ವೈದ್ಯ ರಾದ ಡಾ. ವಿಶ್ವನಾಥ್  ಅವರು ದೇಹದ ಅಂತರಂಗದಲ್ಲೂ ಅಗ್ನಿ ತತ್ವ ಪ್ರಧಾನವಾಗಿರುವುದರಿಂದ ಅಗ್ನಿಹೋತ್ರದ ಆಚರಣೆ ಆರೋಗ್ಯದ ಮೇಲೆ ಸಾಕಷ್ಟು ಸಕಾರಾತ್ಮಕ ಪರಿಣಾಮಗಳನ್ನು ಬೀರುವುದು. ಇತ್ತೀಚಿನ ಸಂಶೋಧನೆಗಳಿಂದ ದೃಢಪಟ್ಟಿದೆ. ಅಲ್ಲದೆ ಅಗ್ನಿಹೋತ್ರದ ಭಸ್ಮವನ್ನು ಚರ್ಮದ ಸಮಸ್ಯೆ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಬಳಸಲಾಗುತ್ತಿದೆ ಎಂದರು.

ಬಸವ ಪತಂಜಲಿ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕರಾದ ವಿರೇಶ್ ಗುರೂಜೀ ಯೋಗ ಶಿಬಿರ ನಿರ್ವಹಣೆ ಮಾಡಿದರು.

ನಾಗಮಂಗಲದ ಹಿರಿಯ ಯೋಗಾಚಾರ್ಯರಾದ  ನಾರಾಯಣಸ್ವಾಮಿ,  ಯೋಗ ಶಿಕ್ಷಕರಾದ ಲಕ್ಷ್ಮಣ್ ಜೀ, ಸತೀಶ್, ಮೂರ್ತಿ, ರಾಜಣ್ಣ, ಸ್ವಾಮಿ, ಚೇತನ ಗೌರೀಶ್, ಆಶಾ, ಶಿಕ್ಷಕಿ ಉಮಾ,  ಗೀತಾ, ಪ್ರೇಮ, ಸುರೇಖಾ, ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು