2:12 PM Friday2 - January 2026
ಬ್ರೇಕಿಂಗ್ ನ್ಯೂಸ್
6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ… ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಶಾಸಕರು, ಸಂಸದರು ಹಾಗೂ ಅವರ ಪರಿವಾರಕ್ಕೆ ಲಸಿಕೆ ಹಾಕಿ ಆಗಿದೆ: ಜನಸಾಮಾನ್ಯರಿಗೆ ಮಾತ್ರ ಇಲ್ಲ!

16/05/2021, 11:35

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka@gmail.com

ಒಂದು ಕಡೆ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದರೆ, ಇನ್ನೊಂದು ಕಡೆ ಜೀವರಕ್ಷಕ ಎಂದೇ ಪರಿಗಣಿಸಲಾದ ಕೊರೊನಾ ಲಸಿಕೆ ಸಿಗುತ್ತಿಲ್ಲ. ಈ ಕುರಿತು ಕೇಳಿದರೆ ಮಂತ್ರಿ-ಮಾಗಧರು ತಲೆಬುಡ ಇಲ್ಲದ ಉತ್ತರ ನೀಡುತ್ತಿದ್ದಾರೆ. ವಿಶೇಷವೆಂದರೆ ಶಾಸಕರು, ಸಂಸದರು, ಮಂತ್ರಿ ಮಹೋದಯರು ಎಲ್ಲ ಎರಡು ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರ ಹೆಂಡ್ತಿ, ಮಕ್ಕಳು,  ಅಪ್ಪ-ಅಮ್ಮ,  ಮಾವ-ಅತ್ತೆ, ಭಾವ, ಅತ್ತಿಗೆ, ನಾದಿನಿ ಎಲ್ಲರಿಗೂ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಇದೀಗ ಜನರು ತಮ್ಮ ಹಕ್ಕಿನ ಲಸಿಕೆ ಕೇಳಿದರೆ, ಶಾಸಕರು, ಮಂತ್ರಿ ಮಹೋದಯರು ಉರಿದು ಬೀಳುತ್ತಾರೆ. ಯಾಕೆಂದರೆ ಅವರೆಲ್ಲ ಹಾಕಿಸಿಕೊಂಡು ಆಗಿದೆ. ಯಾವ ಶಾಸಕ ಕೂಡ ತನ್ನ ಕ್ಷೇತ್ರದ ಎಲ್ಲ ಜನರಿಗೆ ಲಸಿಕೆ ಲಭಿಸಿದ ಬಳಿಕವೇ ತಾನು ಹಾಕಿಸಿಕೊಳ್ಳುವುದು ಎಂದು ಪ್ರತಿಜ್ಞೆ ಮಾಡಿಲ್ಲ. ಬದಲಿಗೆ ಲಸಿಕೆಗೆ ರಟ್ಟೆಯೊಡುವ ಫೋಟೋ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಇದೀಗ ಜನಸಾಮಾನ್ಯರಿಗೆ ಮಾತ್ರ ಲಸಿಕೆ ಲಭ್ಯವಿಲ್ಲ. ಮೊದಲ ಡೋಸ್ ಹಾಕಿಸಿಕೊಂಡವರು ತಮ್ಮ ಹಕ್ಕಿನ ಎರಡನೇ ಡೋಸ್ ಗೆ ಕಾಯುತ್ತಿದ್ದಾರೆ. ಹಾಗೆ ಲಕ್ಷಾಂತರ ಮಂದಿ ಮೊದಲ ಡೋಸ್ ಗೆ ಕಾಯುತ್ತಿದ್ದಾರೆ. ಲಸಿಕೆ ಅಲಭ್ಯತೆಯ ಬಗ್ಗೆ ಕೇಂದ್ರ ಸಚಿವ, ಕರಾವಳಿಯವರೇ ಆದ ಡಿ.ವಿ. ಸದಾನಂದ ಗೌಡ ಅವರು ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದಾರೆ. ಲಸಿಕೆ ಇಲ್ಲದಿದ್ದರೆ ಹಗ್ಗ ಹಾಕಿಕೊಳ್ಳಲಾಗುತ್ತದೆಯೇ? ಎಂದು ನೊಂದ ಜನರನ್ನು ಪ್ರಶ್ನಿಸುತ್ತಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಅವರು ಹೈಕೋರ್ಟ್ ನ್ಯಾಯಾಧೀಶರೇನು ಸರ್ವಜ್ಞರಲ್ಲ ಎಂದು ಹೇಳಿಕೆ ನೀಡುತ್ತಾರೆ. ಜನಸಾಮಾನ್ಯ ಎಲ್ಲದರು ಈ ರೀತಿ ಹೇಳಿಕೆ ನೀಡಿದರೆ ಖಂಡಿತವಾಗಿಯೂ ನ್ಯಾಯಾಂಗ ನಿಂದನೆಯಾಗುತ್ತದೆ. 

ವಾಸ್ತವದಲ್ಲಿ ಮೊದಲ ಡೋಸ್ ಪಡೆದು ಇಂತಿಷ್ಟು ಸಮಯದೊಳಗೆ ಎರಡನೇ ಡೋಸ್ ಪಡೆದರೆ ಮಾತ್ರ ಅದು ಪರಿಣಾಮಕಾರಿಯಾಗಿರುತ್ತದೆ. ಆದರೆ ಮೊದಲ ಡೋಸ್ ಪಡೆದು ಅವಧಿ ಮೀರಿ ಎರಡನೇ ಡೋಸ್ ಪಡೆದರೆ ಅದು ವ್ಯರ್ಥವಾಗುತ್ತದೆ ಎಂದು ವೈದ್ಯರೇ ಹೇಳುತ್ತಾರೆ. ಆದರೆ ರಾಜ್ಯ ಸರಕಾರದ ಮುಖ್ಯಮಂತ್ರಿಯಿಂದ ಆರಂಭಗೊಂಡು ಸಚಿವರುಗಳು 4 ವಾರ, 6 ವಾರ, 8 ವಾರ ಬಿಟ್ಟು ಎರಡನೇ ಡೋಸ್ ಪಡೆದರೂ ಏನಾಗುವುದಿಲ್ಲ ಅಂತ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಬ್ಬ ಸಚಿವರು ಇನ್ನೂ ಮುಂದೆ ಹೋಗಿ 6 ತಿಂಗಳ ಬಳಿಕವೂ ಪಡೆಯಬಹುದು ಎಂದು ಹೇಳುತ್ತಾರೆ. ಸಚಿವರೆಲ್ಲ ವೈದ್ಯರ ಹಾಗೆ ವರ್ತಿಸುತ್ತಿದ್ದಾರೆ. ಯಾಕೆಂದರೆ ಲಸಿಕೆ ಸ್ಟಾಕ್ ಇಟ್ಟುಕೊಳ್ಳುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಇದೇ ಕಾರಣಕ್ಕೆ ಸರಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಪ್ರತಿಯಾಗಿ ಸಚಿವ ಆರ್. ಅಶೋಕ್ ಅವರು ನ್ಯಾಯಾಧೀಶರು ಸರ್ವಜ್ಞರಲ್ಲ ಎಂದು ಹೇಳಿಕೆ ನೀಡಿ, ಸರಕಾರದ ವೈಫಲ್ಯವನ್ನು ಸಮರ್ಥಿಸಿಕೊಂಡಿದ್ದರು.

ವಾಸ್ತವದಲ್ಲಿ ರಾಜ್ಯದ ಬೆಂಗಳೂರು ಮಾತ್ರವಲ್ಲದೆ ಚಿಕ್ಕಬಳ್ಳಾಪುರ, ಕೋಲಾರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕಲಬುರ್ಗಿ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಜಾಸ್ತಿಯಾಗಿದೆ. ಗ್ರಾಮೀಣ ಪ್ರದೇಶದ ಕಡೆಗೂ ಸೋಂಕು ಹಬ್ಬುತ್ತಿದೆ.

ಜನರಿಗೆ ಅಗತ್ಯ ಆಕ್ಸಿಜನ್ ಸಿಗುತ್ತಿಲ್ಲ. ಐಸಿಯು ಬೆಡ್ ಲಭ್ಯವಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳೇ ಹೇಳಿಕೆ ನೀಡುತ್ತಿದ್ದಾರೆ. ಸರಕಾರ ಕೈ ಎತ್ತುವ ಹಂತಕ್ಕೆ ಬಂದು ನಿಂತಿದೆ.

ಹಾಗಾದರೆ…..ನಿಮ್ಗೆ ಪಂಚ ರಾಜ್ಯಗಳಲ್ಲಿ ಚುನಾವಣೆ ಮಾಡಲು ಗೊತ್ತಿದೆ, ಸಭೆ- ಸಮಾರಂಭ, ರೋಡ್ ಶೋ ಮಾಡಲು ಗೊತ್ತಿದೆ. ಆದರೆ ಜನಸಾಮಾನ್ಯರಿಗೆ ಜೀವ ಹೇಗೆ ರಕ್ಷಿಸಬೇಕು ಎನ್ನುವುದು ಗೊತ್ತಿಲ್ಲವೇ?

ಇತ್ತೀಚಿನ ಸುದ್ದಿ

ಜಾಹೀರಾತು