6:29 AM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

ಪ್ರೇಮಿ ಜತೆ ಸೇರಲು ತಾಳಿ ಕಟ್ಟಿದ ಪತಿಗೇ ಮುಹೂರ್ತ ಇಟ್ಟ ಪತ್ನಿ: ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟು ಕೆರೆಗೆ ಎಸೆದು ಕೊಲೆ

14/08/2023, 10:29

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಪ್ರೇಮಿ ಜೊತೆ ಸೇರಲು ತಾಳಿ ಕಟ್ಟಿ ಸಪ್ತಪದಿ ತುಳಿದ ಪತಿಯನ್ನೇ ಪತ್ನಿಯೊಬ್ಬಳು ಪ್ರಿಯಕರನ ಸಹಾಯದಿಂದ ಕೊಲೆ ಮಾಡಿದ ಅಮಾನವೀಯ ಘಟನೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ಸಾಕ್ಷಿಯಾಗಿದೆ.
ನವೀನ್ (28) ಎಂಬಾತ ಪತ್ನಿಯ ಕಣ್ಣಾಮುಚ್ಚಾಲೆ ಆಟಕ್ಕೆ ಬಲಿಯಾದ ನತದೃಷ್ಟ ಪತಿ. ಪಾವನ ಅಂತ ಹೆಸರಿಟ್ಕೊಂಡ ಗೃಹಿಣಿ ಈ ಪಾಪದ ಕೆಲಸ ಮಾಡಿದ್ದಾಳೆ. ಈಕೆ ಪ್ರಿಯಕರ ಸಂಜಯ್ ಎಂಬಾತನ ಜತೆ ಸೇರಿಕೊಂಡು ಪತಿಗೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಜ್ಞಾನ ತಪ್ಪಿಸಿದ್ದಳು. ನಂತರ ಪ್ರಜ್ಞೆ ತಪ್ಪಿದ ಪತಿಯನ್ನು ಪ್ರೇಮಿ ಜೊತೆ ಬೈಕಲ್ಲಿ ತಂದು ಕೆರೆಗೆ ಎಸೆದು ಹೋಗಿದ್ದಳು. ಆಗಸ್ಟ್ 6ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿತ್ತು. ಇದು ಸಹಜ ಸಾವಲ್ಲ, ಕೊಲೆ ಎಂದು ನವೀನ್ ಪೋಷಕರು ದೂರು ನೀಡಿದ್ದಾರೆ.


ಪ್ರೇಮಿ ಸಂಜಯ್ ಜೊತೆ ಇರಲು ಅಡ್ಡಗಾಲಾಗುತ್ತಿದ್ದ ಪತಿ ನವೀನ್ ಅವರನ್ನು ಪ್ರೇಮಿ ಸಂಜಯ್ ಜೊತೆ ಸೇರಿ ಪತಿ ನವೀನ್ ಗೆ ಮಂಗಳ ಹಾಡಿದ್ದಳು. ತನಿಖೆಯ ವೇಳೆ ಎಲ್ಲಾ ಸತ್ಯವನ್ನು ಪಾವನ-ಸಂಜಯ್ ಬಾಯಿ ಬಿಟ್ಟಿದ್ದಾರೆ. ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು