ಇತ್ತೀಚಿನ ಸುದ್ದಿ
ಕದ್ರಿ ಪೊಲೀಸರಿಂದ ವಿನೂತನ ಕಾರ್ಯಕ್ರಮ: ವಾಹನ ಸವಾರರಿಗೆ ಹೆಲ್ಮೆಟ್ ಕುರಿತು ಜಾಗೃತಿ; ಸಂಚಾರಿ ಠಾಣಾಧಿಕಾರಿ ಸಾರಥ್ಯ
13/08/2023, 22:36
ಮಂಗಳೂರು(reporterkarnataka.com):ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸುವ ಅಗತ್ಯದ ಕುರಿತು ಹಾಗೂ ಚಾಲನ ಸಂದರ್ಭದಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮದ ಬಗ್ಗೆ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮ ನಡೆಯಿತು. ಇದು ನಡೆದದ್ದು ನಗರದ ಸರ್ಕ್ಯುಟ್ ಹೌಸ್ ಸಮೀಪದ ಕದ್ರಿ ಠಾಣೆಯ ಎದುರುಗಡೆ.
ಇದರ ಸಾರಥ್ಯ ಕದ್ರಿ ಸಂಚಾರಿ ಠಾಣಾಧಿಕಾರಿ ಗೋಪಾಲಕೃಷ್ಣ ಭಟ್ ಅವರದ್ದು.
ಇತ್ತೀಚಿನ ದಿನಗಳಲ್ಲಿ ಅಜಾಗರೂಕತೆ ವಾಹನ ಚಲಾವಣೆಯಿಂದ ಸಾರ್ವಜನಿಕರು ಮೃತ ಪಟ್ಟಿದ್ದು, ಜಾಗೃತಿ ಮೂಡಿಸುವ ಸಲುವಾಗಿ, ಬೈಕ್ ಸವಾರರು ಫುಲ್ ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದರು. ಟೋಪಿ ತರಹದ ಹೆಲ್ಮೆಟ್ ಕಾನೂನು ಬಾಹಿರವಾಗಿದ್ದು, ಐಎಸ್ ಐ ಮಾರ್ಕ್ ಅಥವಾ ತಲೆಯಿಂದ ಕುತ್ತಿಗೆ ಭಾಗದವರೆಗೂ ಮುಚ್ಚುವ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿಬೇಕೆಂದು ರಸ್ತೆಯಲ್ಲೇ ವಾಹನ ಸವಾರರಿಗೆ ಹೆಲ್ಮೆಟ್ ಡೆಮೋ ನೀಡಿ, ತಮ್ಮ ಮಕ್ಕಳ ಹಾಗೂ ತಮ್ಮ ಜೀವವನ್ನು ಉಳಿಸಲು ಮನವಿ ಮಾಡಿದರು.