12:42 PM Monday14 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಪ್ರಸಿದ್ಧ ರಂಗ ಕಲಾವಿದೆ, ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಶಿವಕುಮಾರಿ ಇನ್ನಿಲ್ಲ: ಗಣ್ಯರ ಸಂತಾಪ

13/08/2023, 13:43

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ರಾಜ್ಯೋತ್ಸವ ಪ್ರಶಸ್ತಿ ರಂಗಕಲಾವಿದೆ, ವಾಲ್ಮೀಕಿ ಸಮುದಾಯದ ರಾಜ್ಯಮಟ್ಟದ ಹಿರಿಯ ಕಲಾವಿದೆ ಕೂಡ್ಲಗಿಯ ಬಿ.ಶಿವಕುಮಾರಿ(55)
ಹೃದಯಘಾತದಿಂದ ನಿಧನರಾಗಿದ್ದಾರೆ.
ಅವರು ಓರ್ವ ಪುತ್ರ, ಸಹೋದರರು ಸಹೋದರಿಯರು, ಅಮ್ಮ, ಚಿಕ್ಕಮ್ಮಂದಿರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ.ಅವರು ತಮ್ಮ ಚಿಕ್ಕ ವಯಸ್ಸಿನಿಂದಲೇ ರಂಗಕಲಾ ಕ್ಷೇತ್ರಕ್ಕೆ, ಪಾದಾರ್ಪಣೆ ಮಾಡಿದವರು. ಅವರು ತಮ್ಮ ಸುಮಾರು ಮೂರ್ನಾಲ್ಕು ದಶಕಗಳ ಕಾಲ, ನಿರಂತರವಾಗಿ ರಂಗ ಕಲೆಯಲ್ಲಿ ತಮ್ಮನ್ನ ಅರ್ಪಿಸಿಕೊಂಡವರಾಗಿದ್ದಾರೆ. ರಾಜ್ಯದೆಲ್ಲೆಡೆ ತಮ್ಮ ಮನೋಜ್ಞವಾದ ಹಾಡುಗಾರಿಕೆ ಹಾಗೂ ಅಭಿನಯದ ಕಲೆಯಿಂದ ಹೆಸರು ಮಾಡಿ, ರಾಜ್ಯದೆಲ್ಲೆಡೆ ಅಭಿಜಾತ ರಂಗ ಕಲಾವಿದೆ ಎಂಬ ಕೀರ್ತಿ ಹೊಂದಿದ್ದರು. ಅವರ ಕಲಾ ಸೇವೆಗೆ ಕರ್ನಾಟಕ ರಾಜ್ಯೋತ್ಸವ , ರಾಜ್ಯ ರಂಗಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ. ಹತ್ತಾರು ರಾಜ್ಯ ಮಟ್ಟದ ಪ್ರಶಸ್ತಿಗಳು ಹಾಗೂ ಅಂಖ್ಯಾತ ವೇದಿಕೆಗಳಲ್ಲಿ, ಸನ್ಮಾನ ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೆ ಹೊಂದಿದ್ದವರು.

ಸಂತಾಪ: ರಂಗಕಲಾವಿದೆ ಬಿ.ಶಿವಕುಮಾರಿ ರವರ ಅಗಲಿಕೆಗೆ, ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಜಿಲ್ಲೆಯ ರಾಜ್ಯದ ಸಮಸ್ತ ವಾಲ್ಮೀಕಿ ಸಮುದಾಯವರು. ವಿವಿದ ಸಮುದಾಯದವರು.ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಸದಸ್ಯರು. ಜಿಲ್ಲಾ ಪಂಚಾಯ್ತಿ ಹಾಗೂ ವಿವಿದ ಜನ ಪ್ರತಿನಿಧಿಗಳು. ಶ್ರೀಪೇಟೆಬಸವೇಶ್ವರ ಭಜನೆ ಹಾಗೂ ರಂಗ ಕಲಾವಿದರ ಸಂಘ ಹಾಗೂ ಶ್ರಿರಾಮಲಿಂಗೇಶ್ವರ ರಂಗ ಕಲಾವಿದರ ಹಾಗೂ ಭಜನೆ ಮತ್ತು ಡೊಳ್ಳು ಕುಣಿತ ಕಲಾವಿದರ ಸಂಘ. ವಿವಿದ ಕಲಾವಿದರ ಸಂಘಟನೆಗಳು, ವಿವಿದ ಕನ್ನಡ ಪರ ಸಂಘಟನೆಗಳು, ವಿಬಿದ ಮಹಿಳಾ ಸಘಟನೆಗಳುಕೂಡ್ಲಿಗ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಮಿಕ, ದಲಿತ, ರೈತ ಸಂಘಟನೆಗಳು. ವಿವಿದ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು.ವಿವಿದ ಪಕ್ಷಗಳ ಮುಖಂಡರು ಹಾಗೂ ಕಾರ್ಯಕಕರ್ತರು. ಪತ್ರಕರ್ತರು, ಸಮಾಜ ಸೇವಕರು, ಗಣ್ಯಮಾನ್ಯರು, ಹಿರಿಯ ರಂಗಕಲಾವಿದರು. ಯುವ ಕಲಾವಿದರು. ಹೋರಾಟಗಾರರು. ಸಂಗೀತ ಕಲಾವಿದರು. ರಂಗ ನಿರ್ಧೇಶಕರು. ಸಾಹಿತಿಗಳು, ನಾಡಿನ ಗಣ್ಯರು ರಂಗ ಕಲಾವಿದೆ ಬಿ.ಶಿವಕುಮಾರಿಯವ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು