ಇತ್ತೀಚಿನ ಸುದ್ದಿ
ಹೊರನಾಡಿಗೆ ಬಾರದ ಸರಕಾರಿ ಬಸ್!: ಕಾದು ಕಾದು ಸುಸ್ತಾಗಿ ರಾತ್ರಿ ವೇಳೆ ಪಿಕ್ ಅಪ್ ವಾಹನವೇರಿದ ಮಹಿಳೆಯರು ಸೇರಿದಂತೆ ಭಕ್ತರು!!
12/08/2023, 17:45
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.ಕಂ
ಸರ್ಕಾರಿ ಬಸ್ ಇಲ್ಲದೆ ಮಹಿಳೆಯರು ಮಕ್ಕಳು ಸೇರಿದಂತೆ ಪ್ರಯಾಣಿಕರು ಪಿಕ್ ಅಪ್ ವಾಹನದಲ್ಲಿ ಯಾನ ಮಾಡಿದ ಘಟನೆ ಕಾಫಿನಾಡಲ್ಲಿ ನಡೆದಿದೆ.
ಕಳಸ ಸಮೀಪದ ಹೊರನಾಡಿನಲ್ಲಿ ಬಸ್ಸಿಗಾಗಿ ಭಕ್ತರು, ಪ್ರವಾಸಿಗರು ಕಾದು ಕುಳಿತ್ತಿದ್ದರು.
ಶುಕ್ರವಾರ ಸಂಜೆಯಿಂದ ರಾತ್ರಿವರೆಗೂ ಬಸ್ಸಿಗಾಗಿ ಕಾದ ಪ್ರವಾಸಿಗರು ಸುಸ್ತಾಗಿದ್ದರು. ನಂತರ ಬಸ್ ಇಲ್ಲದೆ ರಾತ್ರಿ ಪಿಕಪ್ ವಾಹನದಲ್ಲಿ ಮೂಡಿಗೆರೆಗೆ ಪ್ರಯಾಣ ಮಾಡಬೇಕಾಯಿತು.
ಪಿಕಪ್ ವಾಹನ ಹತ್ತಿದವರಲ್ಲಿ 80ಕ್ಕೂ ಹೆಚ್ಚು ಮಹಿಳೆಯರು ಇದ್ದರು. ಶಕ್ತಿ ಯೋಜನೆ ಬಳಿಕ ಬಸ್ ಗಳ ಸಂಖ್ಯೆ ಇಳಿಮುಖವಾಗಿದೆ ಎಂಬ ದೂರು ಕೇಳಿ ಬರುತ್ತಿದೆ. ದಾವಣಗೆರೆ, ಚಿತ್ರದುರ್ಗ, ಹಾಸನ, ತುಮಕೂರು, ಕಡೂರು ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಸಂಕಷ್ಟ ಎದುರಿಸಬೇಕಾಯಿತು.
ದುಬಾರಿ ಹಣ ನೀಡಿ ಪಿಕ್ ಅಪ್ ವಾಹನದಲ್ಲಿ ಸಂಚಾರ ಮಾಡಬೇಕಾಯಿತು. ಹೊರ ಜಿಲ್ಲೆಗಳಿಂದ ಬಂದ ಪ್ರವಾಸಿಗರು ಬಸ್ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.