6:31 PM Friday19 - December 2025
ಬ್ರೇಕಿಂಗ್ ನ್ಯೂಸ್
Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ

ಇತ್ತೀಚಿನ ಸುದ್ದಿ

ತುಲು ಭಾಷೆಗಾಗಿ ಕೈ ಎತ್ತಿದ ಅಸ್ಸಾಂ ಮುಖ್ಯಮಂತ್ರಿ!: ಭಾರತ ಹಲವು ಭಾಷೆಗಳ ತವರು ಎಂದು ಕೊಂಡಾಡಿದ ಹಿಮಂತ ಬಿಸ್ವಾ ಶರ್ಮ

10/08/2023, 13:44

ಮಂಗಳೂರು(reporterkarnataka.com): ಎತ್ತಣ ಮಾಮರ..ಎತ್ತಣ ಕೋಗಿಲೆ ಎನ್ನುವಂತೆ ಕರಾವಳಿಯ ತುಲುನಾಡಿಗೂ ದೂರದ ಅಸ್ಸಾಂಮಿಗೂ ಎತ್ತಣದ ಸಂಬಂಧವಯ್ಯ ಎಂದು ನೀವು ಕೇಳಬಹುದು. ಆದರೆ ಈಗ ಸಂಬಂಧ ಬೆಸೆಯಲಾರಂಭಿದೆ. ತುಲು ಭಾಷೆಗೆ ಅಸ್ಸಾಂ ಮುಖ್ಯಮಂತ್ರಿ ಧ್ವನಿಗೂಡಿಸುವ ಮೂಲಕ ತುಲುನಾಡಿಗರಿಗೆ ಅಸ್ಸಾಂ ಪ್ರಿಯವೆನಿಸಿದೆ.
ಜೈ ತುಲುನಾಡ್(ರಿ.) ಸಂಘಟನೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ ‘ತುಲುಪುರ್ಪ’ ಕವನ ಸಂಕಲನ ಕೃತಿಯನ್ನು ಶ್ಲಾಘಿಸಿ ಅಸ್ಸಾಂ ಮುಖ್ಯಮಂತ್ರಿ ಡಿ.ಹಿಮಂತ ಬಿಸ್ವಾ ಶರ್ಮಾ ಅವರು ಸಂಘಟನೆಯ ಅಧ್ಯಕ್ಷರಿಗೆ ಪತ್ರವನ್ನು ಬರೆದಿದ್ದಾರೆ. ದೇಶದಾದ್ಯಂತ ತುಲು ಭಾಷೆಯನ್ನು ಪರಿಚಯಿಸುವ ಹಾಗೂ ಭಾಷೆಗೆ ಮಾನ್ಯತೆಯನ್ನು ದೊರಕಿಸಿಕೊಡುವಲ್ಲಿ ಸಹಕಾರವನ್ನು ಬಯಸುತ್ತಾ ಈ ಕೃತಿಯನ್ನು ನಮ್ಮ ಪ್ರಧಾನಿಯವರಿಗೆ, ರಾಷ್ಟ್ರಪತಿಗಳಿಗೆ ಹಾಗೂ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಲಾಗಿದ್ದು, ಇದೀಗ ಕೃತಿ ಸ್ವೀಕರಿಸಿದ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಗಳಿಂದ ಪ್ರತಿಕ್ರಿಯೆಯು ಬಂದಿರುವುದು ಸಂತಸವನ್ನು ತಂದಿದೆ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಹಲವು ಭಾಷೆಗಳಿವೆ, ಪಂಚ ಮಹಾದ್ರಾವಿಡ ಭಾಷೆಗಳಲ್ಲಿ ತುಲುಭಾಷೆಯೂ ಒಂದು, ನಮ್ಮ ಐಕ್ಯತೆಯನ್ನು ಸಧೃಡಗೊಳಿಸುವಲ್ಲಿ ಭಾಷೆಗಳು ಆಧಾರ ಸ್ತಂಭಗಳಾಗಿವೆ. ತುಲು ಭಾಷೆಗೆ ಮಾನ್ಯತೆ ದೊರೆಯಬೇಕು. ಈ ನಿಟ್ಟಿನಲ್ಲಿ ಜೈ ತುಲುನಾಡ್ (ರಿ)ನ ಕಾರ್ಯ ಶ್ಲಾಘನೀಯವೆಂದು ಪ್ರತಿಕ್ರಿಯಿಸಿದ್ದಾರೆ ಎಂದು ಸಂಘಟನೆಯು ತಿಳಿಸಿರುತ್ತದೆ.
ಸಂಘಟನೆಯು ಕಳೆದ ಹಲವಾರು ವರ್ಷಗಳಿಂದ ತುಲು ಭಾಷೆ, ತುಲು ಸಂಸ್ಕೃತಿ, ತುಲು ಲಿಪಿಯ ಉಳಿವಿಗಾಗಿ ಹತ್ತು ಹಲವಾರು ಕೆಲಸಗಳನ್ನು ಮಾಡುತ್ತಾ ಬಂದಿದೆ. ಪಂಚ ಮಹಾ ದ್ರಾವಿಡ ಭಾಷೆಗಳಲ್ಲಿ ಹಿರಿಯ ಭಾಷೆಯೆನಿಸಿದ ತುಲುಭಾಷೆಯು ತುಲುನಾಡಿನಲ್ಲಿ ಅಧಿಕೃತ ಪ್ರಾದೇಶಿಕ ಭಾಷೆಯಾಗಬೇಕು, ತುಲುನಾಡಿನಲ್ಲಿನ ತುಲುವರು ತಮ್ಮ ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮಾಡುವಂತಾಗಬೇಕು, ತುಲು ಭಾಷೆಗೆ ನಮ್ಮ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನಮಾನವು ಲಭಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಜೈ ತುಲುನಾಡ್ (ರಿ) ಸಂಘಟನೆಯು ನಿರಂತರವಾಗಿ ಹೋರಾಟವನ್ನು ಮಾಡುತ್ತಾ ಬಂದಿದ್ದು, ಈ ಪ್ರಯತ್ನದ ಅಂಗವಾಗಿ ನಮ್ಮ ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಮಯದಲ್ಲಿ ತುಲುನಾಡಿನ 111ಕವಿಗಳು ಬರೆದ ತುಲು ದೇಶಭಕ್ತಿ ಗೀತೆ, ತುಲುನಾಡ ಗೀತೆಗಳನ್ನು ಸಂಗ್ರಹಿಸಿ ಅದನ್ನು ತುಲುಲಿಪಿಯಲ್ಲಿ ಮುದ್ರಿಸಿ, ‘ತುಲು ಪುರ್ಪ’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿತು.
ಈ ಕೃತಿಗೆ ತುಲುನಾಡಿನ ಅಲುಪ ವಂಶಸ್ಥ ಡಾ.ಆಕಾಶ್ ರಾಜ್ ಜೈನ್ (ಮಾಜಿ ಸದಸ್ಯರು ಕರ್ನಾಟಕ ತುಲು ಸಾಹಿತ್ಯ ಅಕಾಡೆಮಿ) ಅವರು ಮುನ್ನುಡಿ ಬರೆದಿದ್ದು, ಬೆನ್ನುಡಿಯನ್ನು
ಹರಿಕೃಷ್ಣ ಪುನರೂರು ಬರೆದಿದ್ದು ಈ ಕೃತಿಯಲ್ಲಿ ಇಂಗ್ಲಿಷ್,ಹಿಂದಿ,ಕನ್ನಡ,ತುಲು ಭಾಷೆಗಳಲ್ಲಿ ಮುದ್ರಣಗೊಂಡಿದೆ. ಕೃತಿಯ ತಿರುಳನ್ನು ದೇಶದಾದ್ಯಂತ ಎಲ್ಲರಿಗೂ ತಿಳಿದುಕೊಳ್ಳಲು ಸಹಕಾರಿಯಾಗುವಂತೆ ಮುದ್ರಿಸಿರುವುದು ಇದರ ವಿಶೇಷತೆಯಾಗಿದೆ. ತುಲು ಪುರ್ಪದ ಕೆಲಸವನ್ನು ಶ್ಲಾಘಿಸಿರುವ ಅಸ್ಸಾಂ ಮುಖ್ಯಮಂತ್ರಿಗಳಿಗೆ ಜೈ ತುಲುನಾಡ್ (ರಿ.) ಸಂಘಟನೆಯು ಕೃತಜ್ಞತೆಯನ್ನು ಸಲ್ಲಿಸಿದೆ.
ತುಲು ಪುರ್ಪ ಕೃತಿಯ ಸಂಪಾದಕೀಯ ಬಳಗದಲ್ಲಿ ಸಂಘಟನೆಯ 2022-23ನೇ ಸಾಲಿನ ಸಮಿತಿಯ ಅಧ್ಯಕ್ಷರಾದ ಅಶ್ವಥ್ ತುಲುವೆ, ಪ್ರಧಾನ ಕಾರ್ಯದರ್ಶಿ ಅವಿನಾಶ್ ಮುಕ್ಕ,2022 -23 ನೇ ಸಾಲಿನ ತುಲು ಸಾಹಿತ್ಯ ಸಮಿತಿಯ ಮೇಲ್ವಿಚಾರಕರಾದ ಕುಶಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ, ಸಹ ಮೇಲ್ವಿಚಾರಕರಾದ ಗೀತಾ ಲಕ್ಷ್ಮೀಶ್, ಸಂಘಟನಾ ಕಾರ್ಯದರ್ಶಿ ಸದಾಶಿವ ಮುದ್ರಾಡಿ, ಕಿರಣ್ ತುಲುವ, ನಿಶ್ಚಿತ್.ಜಿ ರಾಮಕುಂಜ, ಜಗದೀಶ್ ಗೌಡ ಕಲ್ಕಲ, ಯತೀಶ್ ಕುಮಾರ್,ಪ್ರಚಾರ ಸಮಿತಿಯ ಮೇಲ್ವಿಚಾರಕರಾದ ವಿನಯ್ ರೈ, ಸುಮಂತ್ ಹೆಬ್ರಿ, ಸಂಜನಾ ಪೂಜಾರಿ, ಪೃಥ್ವಿ ತುಲುವೆ,ರಂಜನ್ ಎಸ್ ವೈ .ಬೆಳ್ತಂಗಡಿ, ಶರತ್ ಕೊಡವೂರು, ಶಶಿಕಲಾ, ಪ್ರಜ್ಞಾ, ಪ್ರಹ್ಲಾದ್ ತಂತ್ರಿ ಹಾಗೂ ಇನ್ನಿತರರು ಈ ಕೃತಿಯನ್ನು ಬೆಳಕಿಗೆ ತರುವಲ್ಲಿ ಶ್ರಮಿಸಿರುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು