ಇತ್ತೀಚಿನ ಸುದ್ದಿ
ಮಂಗಳೂರು ಉತ್ತರ ಠಾಣೆ ಪೊಲೀಸರ ಭಾರೀ ಕಾರ್ಯಾಚರಣೆ: 1.67 ಲಕ್ಷ ರೂ. ಮೌಲ್ಯದ ಗಾಂಜಾ ವಶ; ಇಬ್ಬರ ಬಂಧನ
27/07/2023, 21:11
ಮಂಗಳೂರು(reporterkarnataka.com): ನಗರದ ಬಂದರು ಉತ್ತರ ಧಕ್ಕೆಯಲ್ಲಿರುವ ಹಳೆಯ ಸಾರ್ವಜನಿಕ ಶೌಚಾಲಯದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 1.67 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ ಇತರ ಸೊತ್ತು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಅಬ್ದುಲ್ ರಹೀಂ ಮತ್ತು ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಹೋಂಡಾ ಆಕ್ಟಿವಾ ಸ್ಕೂಟರೊಂದರಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿಯನುಸಾರ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಶದಲ್ಲಿದ್ದ ಅಂದಾಜು 1.67 ಲಕ್ಷ ರೂ. ಮೌಲ್ಯದ ಒಟ್ಟು 3 ಕೆಜಿ 378 ಗ್ರಾಂ ತೂಕದ ಗಾಂಜಾ, ತೂಕಮಾಪನ, ನಗದು ಹಣ 4,940 ರೂ. ಹಾಗೂ 50 ಸಾವಿರ ರೂ. ಮೌಲ್ಯದ KA-19HJ-5808 ನೇ ನಂಬ್ರದ ಅಕ್ಟಿವ ಹೋಂಡಾ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.