ಇತ್ತೀಚಿನ ಸುದ್ದಿ
ಹಾವೇರಿ ಮತ್ತು ಹರಿಹರ: ಎರಡು ಪ್ರತ್ಯೇಕ ಘಟನೆಯಲ್ಲಿ ಗೋಡೆ ಬಿದ್ದು ಇಬ್ಬರು ಮಕ್ಕಳ ದಾರುಣ ಸಾವು
27/07/2023, 00:02
ಹಾವೇರಿ(reporterkarnataka.com): ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಾವೇರಿಯಲ್ಲಿ ಮನೆಗೋಡೆ ಬಿದ್ದು 2 ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿರುವ ನಡೆದಿದೆ.
ಹಾವೇರಿ ತಾಲ್ಲೂಕಿನ ಮಾಳಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ 3 ವರ್ಷದ ಹೆಣ್ಣು ಮಗು ಮೃತಪಟ್ಟಿದೆ.
ಮೃತ ಬಾಲಕಿ ಭಾಗ್ಯ ಚಲಮರದ್ (3) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ. ಘಟನೆಯಲ್ಲಿ ಇನ್ನೊಂದು ಮಗುವಿಗೆ ಕೂಡ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಮನೆಗೋಡೆ ಕುಸಿದು ಬಿದ್ದ ಪರಿಣಾಮ ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ. ಸೋಮವಾರ ರಾತ್ರಿ ವೇಳೆ ಮಲಗಿದ್ದ ವೇಳೆ ಈ ಘಟನೆ ನಡೆದಿದೆ.
ಗ್ರಾಮದ ಕೆಂಚಪ್ಪ ಹಾಗೂ ಲಕ್ಷ್ಮಿದೇವಿ ಅವರ ಪುತ್ರಿ ಸ್ಫೂರ್ತಿ ಮೃತಪಟ್ಟಿರುವ ಮಗು ಎಂದು ತಿಳಿದು ಬಂದಿದೆ. ತಂದೆ ಕೆಂಚಪ್ಪ ಅವರಿಗೂ ಕೂಡ ಗಾಯಗಳಾಗಿವೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ. ನಿರಂತರ ಮಳೆಯಿಂದಾಗಿ ಮನೆಯ ಗೋಡೆ ಶಿಥಿಲಗೊಂಡಿತ್ತು ಎಂದು ಹೇಳಲಾಗಿದೆ.