ಇತ್ತೀಚಿನ ಸುದ್ದಿ
ಮಂಗಳೂರು: ಖಾಸಗಿ ಇನ್ಸೂರೆನ್ಸ್ ಕಂಪನಿಯ ಕಚೇರಿಯಲ್ಲಿ ಅಗ್ನಿ ಅನಾಹುತ; ಎಸಿ, ಕಂಪ್ಯೂಟರ್, ಕಡತ ನಾಶ
26/07/2023, 18:31
ಮಂಗಳೂರು(reporterkarnataka.com): ನಗರದ ಹಂಪನಕಟ್ಟೆಯ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಇನ್ಸೂರೆನ್ಸ್ ಕಂಪನಿಯ ಕಚೇರಿಯಲ್ಲಿ ಬುಧವಾರ ಬೆಂಕಿ ಅವಘಢ ಸಂಭವಿಸಿದೆ.
ಹಂಪನಕಟ್ಟೆಯ ಲೈಟ್ ಹೌಸ್ ಹಿಲ್ ರಸ್ತೆಯ ಮ್ಯಾಕ್ಸಿಮಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನ 3ನೇ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಿಲಯನ್ಸ್ ನಿಪ್ಪೋನ್ ಲೈಫ್ ಇನ್ಸೂರೆನ್ಸ್ ಕಚೇರಿಯಲ್ಲಿ ಬೆಂಕಿ ದುರಂತ ಸಂಭವಿಸಿದ್ದು, ಕಚೇರಿಯ ಎಸಿ, ಕಂಪ್ಯೂಟರ್ ಮತ್ತು ಕೆಲವು ಕಡತಗಳು ಸುಟ್ಟು ಹೋಗಿವೆ. ಬೆಳಗ್ಗೆ ಸುಮಾರು 6.30 ರ ವೇಳೆಗೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಪಾಂಡೇಶ್ವರದ ಅಗ್ನಿ ಶಾಮಕ ಠಾಣೆಯ ಆಧಿಕಾರಿಗಳು ಮತ್ತು ಸಿಬಂದಿ ಆಗಮಿಸಿ ಬೆಂಕಿ ನಂದಿಸಿದರು.