ಇತ್ತೀಚಿನ ಸುದ್ದಿ
ಕಡಲನಗರಿಯಲ್ಲಿ ಭಾರೀ ವರ್ಷಧಾರೆ: ಬಜಾಲ್ ನಲ್ಲಿ ಹೋಟೆಲ್, ವಿದ್ಯುತ್ ತಂತಿ ಮೇಲೆ ಬಿದ್ದ ಮರ; ಮಳೆಯಲ್ಲೂ ಲೈನ್ ಮ್ಯಾನ್ ದುರಸ್ತಿ ಕಾರ್ಯ
24/07/2023, 20:25
ಮಂಗಳೂರು(reporterkarnataka.com): ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮಂಗಳೂರು ನಗರದಲ್ಲೂ ತಗ್ಗು ಪ್ರದೇಶ ಜಲಾವೃತವಾಗಿದೆ. ಬಜಾಲ್ ನಲ್ಲಿ ಹೊಟೇಲ್ ವೊಂದರ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ತಂತಿ ಕಡಿದು ಹೋಗಿದೆ. ಮಳೆಯನ್ನು ಲೆಕ್ಕಿಸದೆ ಮೆಸ್ಕಾಂ ಸಿಬ್ಬಂದಿ ಲೈನ್ ಮ್ಯಾನ್ ದುರಸ್ತಿ ಕಾರ್ಯ ನಡೆಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಗಾಳಿ ಮಳೆಗೆ ಕಳೆದ ಎರಡು ದಿನಗಳಿಂದ ಹಲವು ಮರಗಳು ಧರಾಶಾಹಿಯಾಗಿವೆ. ಲಾಲ್ ಬಾಗ್ ಬಳಿ ಫ್ಲೆಕ್ಸ್ ಮುರಿದು ಬಿದ್ದಿದೆ. ಲೇಡಿಹಿಲ್ ನಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿದೆ. ದ್ವಿಚಕ್ರ ವಾಹನವೊಂದರ ಸವಾರರು ಪವಾಡಸದೃಶ ಪಾರಾಗಿದ್ದಾರೆ. ನಗರದ ಹೊರವಲಯದ ಬಜಾಲ್ ಸಮೀಪ ಗಾಳಿ ಮಳೆಗೆ ಹೋಟೆಲ್ ಮೇಲೆ ಸೋಮವಾರ ಬೆಳಗ್ಗೆ ಮರ ಬಿದ್ದು ವಿದ್ಯುತ್ ಕಂಬಗಳ ತಂತಿಗೆ ಹಾನಿಯಾಗಿದ್ದು, ಸುತ್ತ ಮುತ್ತ ವಿದ್ಯುತ್ ಸಂಪರ್ಕ ಬೆಳಗ್ಗಿನಿಂದ ಕಡಿತಗೊಂಡಿತು. ಮಳೆಯನ್ನು ಲೆಕ್ಕಿಸದೆ ಮೆಸ್ಕಾಂ
ಲೈನ್ ಮ್ಯಾನ್ ಕಂಬ ಹತ್ತಿ ದುರಸ್ತಿ ಕಾರ್ಯ ನಡೆಸಿದ್ದಾರೆ. ಅಗ್ನಿಶಾಮಕ ಸಿಬಂದಿ ಕೂಡ ಸ್ಥಳಕ್ಕಾಗಮಿಸಿ ಹೋಟೆಲ್ ಮೇಲೆ ಬಿದ್ದ ಮರವನ್ನು ತುಂಡರಿಸಿ ಕಾರ್ಯಾಚರಣೆ ನಡೆಸಿ. ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.