ಇತ್ತೀಚಿನ ಸುದ್ದಿ
ವಿಧಾನಸಭೆ ಆವರಣದಲ್ಲೂ ಔಷಧೀಯ ಸಸ್ಯಗಳಿಗೆ ಅವಕಾಶ: ಹರೇಕಳದಲ್ಲಿ ಸ್ಪೀಕರ್ ಯು.ಟಿ. ಖಾದರ್
24/07/2023, 21:34
ಉಳ್ಳಾಲ(reporterkarnataka.com): ಸಚಿವರುಗಳು 24 ಗಂಟೆಯೂ ಎಸಿಯೊಳಗೆ ಕುಳಿತು ಆರೋಗ್ಯದತ್ತ ಗಮನಹರಿಸುವುದು ಕಡಿಮೆ. ಹಾಗಾಗಿ ವಿಧಾನಸಭೆ ಆವರಣದೊಳಗಡೆ ಆರೋಗ್ಯಕ್ಕೆ ಪೂರಕವಾಗುವಂತಹ ಔಷಧೀಯ ಗುಣಗಳ ಸಸ್ಯಗಳನ್ನು ನೆಡಲು ತೀರ್ಮಾನಿಸಲಾಗಿದೆ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು.
ಅವರು ಯೆನೆಪೋಯ ಪರಿಗಣಿಸಲ್ಪಟ್ಟ ವಿವಿ, ಯೆನೆಪೋಯ ವೈದ್ಯಕೀಯ ಕಾಲೇಜು, ಸಮುದಾಯ ಆರೋಗ್ಯ ವಿಭಾಗ ಹಾಗೂ ಹರೇಕಳ ಗ್ರಾಪಂ ಸಹಭಾಗಿತ್ವದಲ್ಲಿ ಗ್ರಾಮೀಣ ಆರೋಗ್ಯ ಮತ್ತು ತರಬೇತಿ ಕೇಂದ್ರ ಹರೇಕಳದಲ್ಲಿ ಆರೋಗ್ಯ ಸೇವೆಯ ಆರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಯಾರು ಹಸ್ತ ಕ್ಷೇಪ ಮಾಡಬಾರದು. ವೈದ್ಯರಿಗೆ ಮುಕ್ತ ವಾಗಿ ಕಾರ್ಯ ನಿರ್ವಹಿಸಲು ಬಿಡಿ.ಏನೆ ಕುಂದು ಕೊರತೆ ಇದ್ದಲ್ಲಿ ಪಂಚಾಯತ್ ಕಛೇರಿ ಗೆ ಹೋಗಿ ದೂರು ದಾಖಲಿಸಿ,ಕುಂದು ಕೊರತೆ ನೀವಾರಿಸಲು ಆ ಮೂಲಕ ಸಹಕರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ರೋಗ ಬಂದು ಮದ್ದು ಮಾಡುವ ಬದಲು ರೋಗ ಬರುವ ಮುಂಚೆ ಜಾಗೃತಿ ವಹಿಸಿ ಎಂದು ವೈದ್ಯರಿಗೆ ಕಿವಿ ಮಾತು ಹೇಳಿದರು.
ಇಲ್ಲಿ ಆಯುಷ್ ಹಾಗೂ ಡೆಂಟಲ್ ಚಿಕಿತ್ಸೆ ದೊರೆಯುತ್ತದೆ. ಸದುಪಯೋಗ ಪಡೆದುಕೊಳ್ಳಿ ಎಂದರು.
ಪ್ರಕೃತಿಯಿಂದ ದೊರಕುವಂತಹ ಔಷಧೀಯ ಗಿಡಗಳಿಂದ ಹೊರಬರುವ ಆಮ್ಲಜನಕವನ್ನು ಆಸ್ವಾದಿಸುವ ಮೂಲಕ ಆರೋಗ್ಯಪೂರ್ಣವಾಗಿ ಬಾಳಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಹರೇಕಳದಲ್ಲಿ ಆರಂಭವಾದ ಆರೋಗ್ಯ ಸೇವೆಯಲ್ಲಿ
ಆಯುಷ್ ಸಂಬಂಧಪಟ್ಟ ವಿಚಾರಗಳು ಹೆಚ್ಚಾಗಿ ಉಪಯೋಗಕ್ಕೆ ಬರಲಿ. ಗಿಡಮೂಲಿಕೆಗಳ ಔಷಧೀಯ ಗುಣಗಳ ಹೆಚ್ಚಾಗಿ ಜನರಿಗೆ ತಲುಪುವಂತಹ ವಿಚಾರವಾಗಲಿ. ಔಷಧೀಯ ಸಸ್ಯಗಳ ಮರಗಳ ಮೌಲ್ಯಗಳನ್ನು ಜನರಿಗೆ ತಿಳಿಸುವ ಕಾರ್ಯ ಆಯುಷ್ ವಿಭಾಗದಿಂದ ಆಗಲಿ. ಹರೇಕಳದಲ್ಲಿ ಶೀಘ್ರದಲ್ಲಿ ಡಯಾಲಿಸಿಸ್ ಕೇಂದ್ರವೂ ಸ್ಥಾಪನೆಯಾಗಬೇಕಿದೆ. ಇದಕ್ಕೆ ಪೂರಕವಾದ ವಾತಾವರಣ ಆಸ್ಪತ್ರೆಯಿಂದ ಆಗಬೇಕಿದೆ ಎಂದು ಸ್ಪೀಕರ್,ಶಾಸಕ ಯು.ಟಿ ಖಾದರ್ ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಆನಂದ್ ಮಾತನಾಡಿ ಶುಭ ಹಾರೈಸಿದರು.
ಹರೇಕಳ ಗ್ರಾಪಂ ಅಧ್ಯಕ್ಷ ಬದ್ರುದ್ದೀನ್, ಯೆನೆಪೋಯ ಪರಿಗಣಿತ ವಿವಿಯ ಕುಲಪತಿ ಡಾ.ಎಂ.ವಿಜಯಕುಮಾರ್,ಸಹಕುಲಪತಿ ಡಾ.ಬಿ.ಎಚ್. ಶ್ರೀಪತಿ ರಾವ್, ವೈದ್ಯಕೀಯ ಅಧೀಕ್ಷಕ ಡಾ.ಹಬೀಬ್ ರೆಹಮಾನ್ ಎ.ಎ., ಹರೇಕಳ ಉಪಾಧ್ಯಕ್ಷೆ ಕಲ್ಯಾಣಿ, ಡಾ. ಎಂ.ಎಸ್. ಮೂಸಬ್ಬ, ಡಾ.ಪೂನಮ್ ಪಿ.ನಾಯಕ್, ಡಾ.ಬಿ.ಟಿ. ನಂದೀಶ್, ಮುತ್ತಪ್ಪ ಉಪಸ್ಥಿತರಿದ್ದರು.