ಇತ್ತೀಚಿನ ಸುದ್ದಿ
ಮಲೆನಾಡಲ್ಲಿ ಮಳೆ ಅಬ್ಬರ: ಅಸ್ತವ್ಯಸ್ತಗೊಂಡ ಕಾರ್ಕಳ-ಶೃಂಗೇರಿ ರಸ್ತೆ ಸಂಚಾರ
23/07/2023, 18:33
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಕಾರ್ಕಳ-ಶೃಂಗೇರಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.
ಶೃಂಗೇರಿಯಲ್ಲಿ ಭದ್ರಾ ನದಿ ಅಬ್ಬರದಿಂದ ಹರಿಯುತ್ತಿದೆ. ಶೃಂಗೇರಿ ತಾಲೂಕಿನ ನೆಮ್ಮಾರು ಸಮೀಪ ರಸ್ತೆಗೆ ತುಂಗಾ ನದಿ ನೀರು ನುಗ್ಗಿ ಸಂಚಾರಕ್ಕೆ ತೊಡಕಾಗಿದೆ. ರಸ್ತೆಯಲ್ಲಿ ಹರಿಯೋ ನೀರಿನಲ್ಲಿ ಬೈಕ್ ಸವಾರರ ಹುಚ್ಚಾಟ ನಡೆಸಿರುವುದು ಕಂಡು ಬಂದಿದೆ.
ತುಂಗಾ ನದಿ ಒಳ ಹರಿವಿನಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಾರ್ಕಳ-ಶೃಂಗೇರಿ ರಸ್ತೆಯಲ್ಲಿ ತುಂಗಾ ನದಿ ನೀರು ಹರಿಯುತ್ತಿದೆ. ರಾ.ಹೆ 169 ಎರಡು ಗಂಟೆಯಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ.