ಇತ್ತೀಚಿನ ಸುದ್ದಿ
ಸಾರ್ವಜನಿಕ ಸ್ಥಳದಲ್ಲಿ ಜೂಜಾಟನಿರತ 5 ಮಂದಿಯ ಬಂಧನ: ನಗದು, ಮೊಬೈಲ್ ವಶ
22/07/2023, 23:24
ಮಂಗಳೂರು(reporter Karnataka.com): ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬೆರ್ಮನ್ನೂರು ಗ್ರಾಮದ ತೊಕ್ಕೊಟು ಒಳಪೇಟೆಯ ಹಮ್ಮ ಬಿರಿಯಾನಿ ರೈಸ್ ಹೊಟೇಲಿನ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಆರೋಪದ ಮೇಲೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಆಯುಕ್ತರ ನಿರ್ದೇಶನದಂತೆ ಉಳ್ಳಾಲ ಠಾಣೆ ಪೊಲೀಸ್ ನಿರೀಕ್ಷಕರಾದ ಸಂದೀಪ್.ಜಿ.ಎಸ್. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪ-ನಿರೀಕ್ಷಕರಾದ ಸಂತೋಷ್ ಕುಮಾರ್ ಡಿ. ಹಾಗೂ ಸಿಬ್ಬಂದಿಯವರಾದ ಹೆಚ್. ಆನಂದ, ಪಿಸಿ ಆಶೋಕ್, ಮತ್ತು ಪಿಸಿ ರಿಯಾಝ್ ಜೊತೆಯಲ್ಲಿ ಶನಿವಾರ ಸಂಜೆ 3-45 ಗಂಟೆಗೆ
ಉಳ್ಳಾಲ ಪೊಲೀಸ್ ಠಾಣಾ ಸರಹದ್ದಿನ ಬೆರ್ಮನ್ನೂರು ಗ್ರಾಮದ ತೊಕ್ಕೊಟು ಒಳಪೇಟೆಯ ಹಮ್ಮ ಬಿರಿಯಾನಿ ರೈಸ್ ಹೊಟೇಲಿನ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ
ಲ್ಯಾನ್ಸಿ ವೇಗಸ್, ನವಾಝ್,
ಸತೀಶ ಗಟ್ಟಿ, ನಾಸೀರ್ ಹಾಗೂ ಮಧು – ಮನು ಎಂಬವರನ್ನು
ವಶಕ್ಕೆ ತೆಗೆದುಕೊಂಡು
ಜೂಜಾಟಕ್ಕೆ ಉಪಯೋಗಿಸಿದ ನಗದು 7,040 ರೂ., 5 ಮೊಬೈಲ್ ಪೋನ್ ಮತ್ತು ಜೂಜಾಟಕ್ಕೆ ಉಪಯೋಗಿಸಿದ ಕೆಲವೊಂದು ಚೀಟಿಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.