ಇತ್ತೀಚಿನ ಸುದ್ದಿ
ಮಂಗಳೂರು: 9 ತಿಂಗಳು ತಲೆ ಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ; ಉರ್ವ ಪೊಲೀಸರ ಕಾರ್ಯಾಚರಣೆ
16/07/2023, 19:30
ಮಂಗಳೂರು(reporterkarnataka.com): ಸುಮಾರು 9 ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ವಾರೆಂಟ್ ಆರೋಪಿಯೊಬ್ಬನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ.
ನಗರದ ಹೊರವಲಯದ ಅಡ್ಯಾರು ಸಮೀಪದ ಕಣ್ಣೂರು ಬಳಿಯ ಕರ್ಮರ್ ನಿವಾಸಿಯಾದ 35ರ ಹರೆಯದ ಸೈಯದ್ ಹಸೈನಾರ್ ಬಂಧಿತ ಆರೋಪಿ. ಪ್ರಕರಣವೊಂದರಲ್ಲಿ ಈತನಿಗೆ ಮಂಗಳೂರಿನ
ಜೆಎಂಎಫ್ ಸಿ 3ನೇ ನ್ಯಾಯಾಲಯ 2014 ಅಕ್ಟೋಬರ್ 18ರಂದು 4 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು1,500 ರೂ. ದಂಡ ವಿಧಿಸಿತ್ತು. ನಂತರ ಆರೋಪಿಯು ಸುಮಾರು 9 ವರ್ಷಗಳಿಂದ ತಲೆಮರಿಸಿಕೊಂಡಿದ್ದು, ಈತನನ್ನು ಜುಲೈ 15ರಂದು ಉರ್ವಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ದಸ್ತಗಿರಿ ಮಾಡಿದ್ದಾರೆ.
ಪೊಲೀಸ್ ಕಮಿಷನರ್ ಕುಲ್ ದೀಪ್ ಕುಮಾರ್ ಆರ್. ಜೈನ್ ಅವರು ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ದಸ್ತಗಿರಿಗೆ ಮಾರ್ಗದರ್ಶನ ನೀಡಿದ್ದು, ಎಸಿಪಿ ಅಂಶು ಕುಮಾರ್,
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ದಿನೇಶ್ ಕುಮಾರ್, ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ನೇತೃತ್ವದಲ್ಲಿ ಉರ್ವಾ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದ್ದಾರೆ.