ಇತ್ತೀಚಿನ ಸುದ್ದಿ
ವೀರರಾಣಿ ಅಬ್ಬಕ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯ 2ನೇ ತಂಡದ ಸಮಾರೋಪ ಸಮಾರಂಭ
04/07/2023, 22:57
ಮಂಗಳೂರು(reporterkarnataka.com): ವೀರರಾಣಿ ಅಬ್ಬಕ್ಕ ಸೇನಾ ಆಯ್ಕೆ, ಪೂರ್ವ ತರಬೇತಿ ಶಾಲೆಯ 2ನೇ ತಂಡದ ಸಮಾರೋಪ ಸಮಾರಂಭ ಸೋಮವಾರ ನಗರದ ಕದ್ರಿಯ ಸಿಒಡಿಪಿ ಸಭಾಂಗಣದಲ್ಲಿ ಜರುಗಿತು.
ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ ಕೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸೇನೆಗೆ ಸೇರಬೇಕಾದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರಬೇಕು. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ನಿಮಗೆಲ್ಲರಿಗೂ ಉಜ್ವಲ ಭವಿಷ್ಯವಿದೆ. ಸರಕಾರದ ಕಾರ್ಯಕ್ರಮವನ್ನು ತಾವೆಲ್ಲರೂ ಸದುಪಯೋಗ ಪಡೆದುಕೊಳ್ಳಿರಿ ಎಂದು ಕಿವಿಮಾತು ಹೇಳಿದರು.
ಇಂದಿನ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಕರ್ನಲ್ ನಿಟ್ಟೆಗುತ್ತು ಶರತ ಭಂಡಾರಿ ಮಾತನಾಡಿ, ವಿದ್ಯಾರ್ಥಿಗಳನ್ನು ಕುರಿತು ಛಲಕ್ಕೆ ಭಾಷೆ, ಬಡತನ, ಸಿರಿತನದ ಹಂಗಿಲ್ಲ. ನಮ್ಮ ಬಗ್ಗೆ ನಮಗೆ ವಿಶ್ವಾಸವಿರಬೇಕು. ಹಾಗೆ ಅಗ್ನಿರಥದ ವಿಶೇಷತೆಯನ್ನು ಹೇಳುತ್ತಾ ನೀವೆಲ್ಲರು ಸೇನೆಗೆ ಸೇರುವದರ ಮೂಲಕ ದೇಶಸೇವೆಗೆ ಸನ್ನದ್ಧರಾಗಿ ಎಂದು ಹುರಿದುಂಬಿಸಿ ಮಾತನ್ನಾಡಿದರು ಮತ್ತು ಸರಕಾರ ಸೈನಿಕ ಶಾಲೆಯನ್ನು ತೆರೆಯುದರ ಮೂಲಕ ನಿಮ್ಮ ಅದೃಷ್ಟದ ಬಾಗಿಲು ತೆರೆದಿದೆ ಎಂದು ಕಿವಿಮಾತು ಹೇಳಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗು ಕರ್ನಲ್ ಶರತ ಭಂಡಾರಿ ಅವರು ಜಂಟಿಯಾಗಿ ಶಿಬಿರಾರ್ಥಿಗಳಿಗೆ ಕೋರ್ಸಿನ ಪಮಾಣ ಪತ್ರ ಹಾಗೂ ಆಟ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರದೀಪ್ ಡಿ’ ಸೋಜ ಅವರು ಸಮಾರೋಪ ಸಮಾರಂಭದ ಆರಂಭದಲ್ಲಿ ಸ್ವಾಗತಿಸಿದರು. ವೀರರಾಣಿ ಅಬ್ಬಕ್ಕ ಸೇನಾ ಶಾಲೆಯ ಮುಖ್ಯ ತರಬೇತುದಾರರಾದ ದಾಸಪ್ಪ ಪೂಜಾರಿ ವಂದಿಸಿದರು. ಕಾರ್ಯಕ್ರಮವನ್ನು ನಿಲಯದ ಮೇಲುಸ್ತುವಾರಿಗಳಾದ ರಾಧೇಶ ನಿರೂಪಿಸಿದರು.