10:28 AM Tuesday2 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ತರೀಕೆರೆ ಶಾಲೆಯಲ್ಲಿ 23 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಲಕ್ಷ್ಮಣ ಮೇಷ್ಟ್ರಿಗೆ ಭರ್ಜರಿ ಬೀಳ್ಕೊಡುಗೆ: ಊರು ತುಂಬಾ ಎತ್ತಿನ ಗಾಡಿಯಲ್ಲಿ ಮೆರವಣಿಗೆ

04/07/2023, 11:26

ಸಂತೋಷ್ ಅತ್ರಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಸುಮಾರು 23 ವರ್ಷ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕರಿಗೆ ಭರ್ಜರಿ ಬೀಳ್ಕೊಡುಗೆ ಮಾಡಿದ ಘಟನೆ ತರೀಕೆರೆ ತಾಲೂಕಿನ ಹಳಿಯೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಲಕ್ಷ್ಮಣ್ ಎನ್.ವಿ. ಅವರು ಕಳೆದ 23 ವರ್ಷಗಳಿಂದ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ವಯೋ ನಿವೃತ್ತರಾಗಿದ್ದು, ಶಿಕ್ಷಕರಿಗೆ ಮಕ್ಕಳಿಂದ ಹೂಮಳೆಗರೆಯಲಾಯಿತು. ಶಿಕ್ಷಕ ನಡೆಯುವ ದಾರಿಯಲ್ಲಿ ಹೂ ಚೆಲ್ಲಿ ಮಕ್ಕಳು ಕೃತಜ್ಞತೆ ಪ್ರದರ್ಶಿಸಿದರು.
ಹಳ್ಳಿಗರು ಸೇರಿ ಮೇಷ್ಟ್ರನ್ನು ಎತ್ತಿಗಾಡಿಯಲ್ಲಿ ಮೆರವಣಿಗೆ ಮಾಡಿದರು. ಸುರಿಯೋ ಮಳೆಯಲ್ಲೇ ಊರಿನ ತುಂಬಾ ಮೆರವಣಿಗೆ ಮಾಡಲಾಯಿತು.


ಪುಟ್ಟ-ಪುಟ್ಟ ಮಕ್ಕಳೇ ವಾದ್ಯ ನುಡಿಸುತ್ತಾ, ಬ್ಯಾಂಡ್ ಬಡಿದುಕೊಂಡು ಶಿಕ್ಷಕರ ಮೆರವಣಿಗೆ ಮಾಡಿದರು.
ಇದಕ್ಕೆ ಮುನ್ನ ವೀರಗಾಸೆ ಮೂಲಕ ಶಿಕ್ಷಕರನ್ನು ಶಾಲೆಗೆ ಹೆಣ್ಣುಮಕ್ಕಳು ಕರೆದು ತಂದರು.
ಇಡೀ ಊರು ತುಂಬಾ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶಿಕ್ಷಕ ವೃತ್ತಿಯ ಕೊನೇ ದಿನವಾದ ನಿನ್ನೆ ಶಿಕ್ಷಕ ದಂಪತಿಗೆ ಹಳ್ಳಿಗರು ಸನ್ಮಾನ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು