ಇತ್ತೀಚಿನ ಸುದ್ದಿ
ಸಿಮ್ರಾನ್ ಇನ್ ಸ್ಟಿಟ್ಯೂಟ್ ಫ್ಯಾಶನ್ ಡಿಸೈನಿಂಗ್ ಮತ್ತು ಬ್ಯೂಟಿಕ್ ಬ್ಯಾಚ್ ಪದವಿ ಪ್ರದಾನ ಸಮಾರಂಭ
03/07/2023, 22:05
ಮಂಗಳೂರು(reporterkarntaka.com): ಸಿಮ್ರಾನ್ ಇನ್ ಸ್ಟಿಟ್ಯೂಟ್ ಫ್ಯಾಶನ್ ಡಿಸೈನಿಂಗ್ ಮತ್ತು ಬ್ಯೂಟಿಕ್ ಬ್ಯಾಚ್ 2022-23ನೇ ಸಾಲಿನ
ಪದವಿ ಸಮಾರಂಭ ಸಿಮ್ರಾನ್ ಇನ್ಸ್ಟಿಟ್ಯೂಟ್ ನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ನಿರೂಪಕ ಐಕ್ಬಾಲ್ ಬಾಳಿಲ ಅವರ ಸ್ವಾಗತದೊಂದಿಗೆ ಸಮಾರಂಭವು ಪ್ರಾರಂಭವಾಯಿತು. ಮುಖ್ಯ ಅತಿಥಿಯಾಗಿ ಮಹಮ್ಮದ್ ನಾಗಮಾನ್ ಲತೀಫ್, ಗೌರವ ಅತಿಥಿಗಳಾಗಿ ವಕೀಲ ಮೋಹನ್ ದಾಸ್ ರೈ ಕೆ, ಅರೆನಾ ಅನಿಮೇಷನ್‌ನ ಕೇಂದ್ರದ ಮುಖ್ಯಸ್ಥೆ ಸಿಲ್ವಿಯಾ ಡೆಸಾ, ಪ್ರಾಂಶುಪಾಲರಾದ ಸಜೀಲಾ ಕೋಲಾ ಉಪಸ್ಥಿತರಿದ್ದರು.
ಸಿಮ್ರಾನ್ ಸಂಸ್ಥೆಯ ಪದವಿ ಪಡೆದ ಬ್ಯಾಚ್‌ನ ಬೆಳವಣಿಗೆ ಮತ್ತು ಸಾಧನೆಗಳ ಕುರಿತು ಪ್ರಾಂಶುಪಾಲರು ಹೆಮ್ಮೆ ವ್ಯಕ್ತಪಡಿಸಿದರು. ಸಿಮ್ರಾನ್ ಸಂಸ್ಥೆಯ ಹನೀಫ್ ಪಜಪಳ್ಳ ಅವರು ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸುವಲ್ಲಿ ಮತ್ತು ಸಂಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ವಿದ್ಯಾರ್ಥಿಗಳಿಗೆ ಉದ್ಯಮದಲ್ಲಿ ಯಶಸ್ಸನ್ನು ಸಂಸ್ಥೆಯ ವತಿಯಿಂದ ಶುಭ ಹಾರೈಸಲಾಯಿತು.