12:19 PM Monday23 - December 2024
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು…

ಇತ್ತೀಚಿನ ಸುದ್ದಿ

ಒಂದೇ ಮಳೆಗೆ ಮಂಗಳೂರು ‘ಗೇಟ್ ವೇ’ ಪಂಪ್ ವೆಲ್ ಜಲಾವೃತ್ತ!!: ಕಡಲನಗರಿ ಎಲ್ಲೆಡೆ ಭಾರೀ ಟ್ರಾಫಿಕ್ ಜಾಮ್!!

03/07/2023, 21:13

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com
ಮುಂಗಾರು ಆರಂಭವಾಗಿ ಸುಮಾರು 33 ದಿನಗಳ ಬಳಿಕ ಕಡಲನಗರಿ ಮಂಗಳೂರಿನಲ್ಲಿ ಸೋಮವಾರ ಭಾರಿ ಮಳೆ ಸುರಿದಿದ್ದು, ಒಂದೇ ದಿನದ ಮಳಗೆ ನಗರದ ಉತ್ತರ ದಿಕ್ಕಿನ ಹೆಬ್ಬಾಗಿಲು ಎಂದೇ ಪರಿಗಣಿಸಲಾದ ಪಂಪ್ ವೆಲ್ ಪ್ರದೇಶ ಜಲಾವೃತವಾಗಿದೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ನರಕಯಾತನೆ ಅನುಭವಿಸಿದ್ದಲ್ಲದೆ ಇಡೀ ನಗರವೇ ಟ್ರಾಫಿಕ್ ಜಾಮ್ ಗೆ ಗುರಿಯಾಗಬೇಕಾಯಿತು.



ರಾಜ್ಯದಲ್ಲಿ ಮುಂಗಾರು ಆರಂಭದಿಂದಲೇ ದುರ್ಬಲವಾಗಿತ್ತು. ಜೂನ್ ತಿಂಗಳು ಇಡೀ ಮಳೆ ಇಲ್ಲದೆ ಕಳೆದು ಹೋಯಿತು. ಇದೀಗ ಜುಲೈ ಮೊದಲ ವಾರದಲ್ಲಿ ಇಂದು ಕಡಲನಗರಿ ಮಂಗಳೂರಿನಲ್ಲಿ ಭಾರಿ ಮಳೆಯಾಯಿತು. ಸೆಕೆಗೆ ಒದ್ದಾಡುತ್ತಿದ್ದ ನಗರದ ಜನತೆಗೆ ಮಳೆ ಸ್ವಲ್ಪ ಮಟ್ಟಿಗೆ ನೆಮ್ಮದಿ ಉಂಟು ಮಾಡಿತು. ಆದರೆ ಆ ನೆಮ್ಮದಿ ಹೆಚ್ಚು ಸಮಯ ಉಳಿಯಲಿಲ್ಲ.ಅಲ್ಲಲ್ಲಿ ರಸ್ತೆಯ ಮೇಲೆ ತೋಡಿನಂತೆ ನೀರು ಹರಿದು ಹೋಗುತ್ತಿತ್ತು.ಮಳೆ ನೀರಿನ ತೋಡು ಇದ್ದರೂ ಮಳೆ ನೀರು ಮಾತ್ರ ನಾಚಿಕೊಂಡು ರಸ್ತೆ ಮೇಲೆ ಹರಿಯುತ್ತಿತ್ತು. ಇತ್ತ ಮಂಗಳೂರಿನ ಗೇಟ್ ವೇ ಎಂದೇ ಪರಿಗಣಿಸಲಾದ ಪಂಪ್ ವೆಲ್ ನ ರಸ್ತೆಯಲ್ಲಿ ದೊಡ್ಡ ಕೊಳವೇ ನಿರ್ಮಾಣವಾಗಿತ್ತು. ಮೊದಲೇ ತಗ್ಗು ಪ್ರದೇಶವಾದ ಪಂಪ್ ವೆಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ನಮ್ಮ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಪಾಲಿಕೆಯ ಎಂಜಿನಿಯರ್ ಗಳು ಸೇರಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ವಾಹನಗಳ ಟಯರ್ ಮುಳುಗುವಷ್ಟು ನೀರು ಫ್ಲೈ ಓವರ್ ತಳಭಾಗದ ರಸ್ತೆಯಲ್ಲಿ ಶೇಖರಿಸಲ್ಪಟ್ಟಿದೆ. ಇದು ಮೊದಲ ಬಾರಿ ಏನೂ ಅಲ್ಲ, ಕಳೆದ ವರ್ಷ ಮಳೆಗಾಲದಲ್ಲಿ ಇಂತಹದ್ದೇ ಪರಿಸ್ಥಿತಿ ಏರ್ಪಟ್ಟಿತ್ತು. ಆದರೆ ಜಿಲ್ಲಾಡಳಿತವಾಗಲಿ, ಪಾಲಿಕೆಯಾಗಲಿ, ಶಾಸಕರಾಗಲಿ, ಸಂಸದರಾಗಲಿ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಪಂಪ್ ವೆಲ್ ನಲ್ಲಿ ರಸ್ತೆಗೆ ನೀರು ಬಂದಿರುವುದು ಇಡೀ ನಗರದ ಟ್ರಾಫಿಕ್ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಿದೆ. ನಂತೂರು ಫ್ಲೈ ಓವರ್, ಕದ್ರಿ, ಹಂಪನಕಟ್ಟೆ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇಷ್ಟೇ ಅಲ್ಲದೆ, ಜಪ್ಪು ಬಪ್ಪಲ್, ಪಾಂಡೇಶ್ವರ, ಕೊಟ್ಟಾರ ಚೌಕಿ ಪ್ರದೇಶದ ರಸ್ತೆಗಳಲ್ಲಿ ನೀರು ನಿಂತು ಸುಗಮ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು