6:59 PM Monday15 - June 2026
ಬ್ರೇಕಿಂಗ್ ನ್ಯೂಸ್
ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ ಗಿಂತ ಕಡಿಮೆ ಪ್ರಮಾಣದ ಕುಡಿಯುವ… ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ 15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ… ಹಾಸನ | ಸಕಲೇಶಪುರ ಬಳಿ ಕರುಗಳ ಬೆನ್ನಟ್ಟಿದ ಕಾಡಾನೆ ಮರಿ ಚಿಕ್ಕಮಗಳೂರು: ಗುಂಡು ಹಾರಿಸಿಕೊಂಡು ಗೃಹಿಣಿ ಅನುಮಾನಾಸ್ಪದ ಸಾವು ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ:…

ಇತ್ತೀಚಿನ ಸುದ್ದಿ

ಕೂರಾಡಿ: ಮಾನವತಾವಾದಿ ಪಟ್ಟಾಭಿರಾಮ ಸೋಮಯಾಜಿ‌ ಅಂತ್ಯಕ್ರಿಯೆ; ಒಡನಾಡಿಗಳಿಂದ ಅಂತಿಮ ನಮನ

02/07/2023, 20:58

ಬ್ರಹ್ಮಾವರ(reporterkarnataka.com): ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನಲ್ಲಿ ನಿಧನರಾಗಿದ್ದ ಮಂಗಳೂರು ವಿವಿ ಕಾಲೇಜು ನಿವೃತ್ತ ಪ್ರಾಧ್ಯಾಪಕ, ಚಿಂತಕ, ಸಾಹಿತ್ಯ ವಿಮರ್ಶಕ, ಮಾನವತಾವಾದಿ ಪಟ್ಟಾಭಿರಾಮ ಸೋಮಯಾಜಿ ಅವರ ಅಂತ್ಯಕ್ರಿಯೆ ಬ್ರಹ್ಮಾವರ ಸಮೀಪದ ಕೂರಾಡಿಯಲ್ಲಿ ನಡೆಯಿತು.

ಪಟ್ಟಾಭಿರಾಮ ಸೋಮಯಾಜಿ ಅವರ ಸಹೋದರಿ ಅನಸೂಯ ಕಲ್ಕೂರ ಅವರ ಮನೆಯ‌ ವಠಾರದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಪಟ್ಟಾಭಿಯವರ ಒಡನಾಡಿಗಳಾದ ಪ್ರೊ. ಕೆ. ಪಣಿರಾಜ್, ಕೆ.ಎಲ್. ಅಶೋಕ್, ಉಮರ್ ಯು.ಹೆಚ್., ಕಲ್ಕುಳಿ ವಿಠಲ ಹೆಗಡೆ, ರಾಘವೇಂದ್ರ ಚಾರ್ವಾಕ, ಇದ್ರೀಸ್ ಹೂಡೆ, ಹುಸೈನ್ ಕೋಡಿಬೆಂಗ್ರೆ, ಇರ್ಶಾದುಲ್ಲಾಹ್ ಆದಿಲ್, ಡಾ. ಹಯವದನ ಉಪಾಧ್ಯಾಯ, ಶಾಮರಾಜ್ ಬಿರ್ತಿ, ಶಾರದಾ ಮೂಡುಸಗ್ರಿ, ಜಿ. ವಿಷ್ಣು, ಹಸೀನಾ ಬಾನು, ಶಿವಕುಮಾರ್ ಗುಳಘಟ್ಟ, ಬಾಬು ರಾಜ್, ವಿನ್ಸೆಂಟ್ ಆಳ್ವ, ವಿಕ್ಟರ್ ವಾಝ್, ಲಕ್ಷ್ಮಣ್ ಮತ್ತಿತರರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ಪಟ್ಟಾಭಿರಾಮ ಸೋಮಯಾಜಿ ಸಹೋದರಿ ಅನಸೂಯ ಕಲ್ಕೂರ, ಸಹೋದರಿ ಪುತ್ರ ಅಂಬರೀಷ್ ಕಲ್ಕೂರ, ಅಣ್ಣ ರಂಗನಾಥ್ ಸೋಮಯಾಜಿ, ಅತ್ತೆ ನಿವೇದಿತಾ ಹಾಗೂ ಕುಟುಂಬದ ಸದಸ್ಯರು ಮತ್ತು ನೆರೆಮನೆಯವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು