1:29 PM Saturday18 - January 2025
ಬ್ರೇಕಿಂಗ್ ನ್ಯೂಸ್
ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಗ್ರಾಪಂ ಮಾಜಿ ಅಧ್ಯಕ್ಷರಿಂದ ಅಂತ್ಯ ಸಂಸ್ಕಾರ: ರಾತ್ರಿ… ಜಾತಿಗಣತಿ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ… ಸಂಭ್ರಮ- ಸಡಗರಕ್ಕೆ ಸಾಕ್ಷಿಯಾದ ಕಡಲನಗರಿಯ ಮಂಗಳಾ ಕ್ರೀಡಾಂಗಣ: 4500 ಕ್ರೀಡಾಪಟುಗಳ ಪಾದಸ್ಪರ್ಶ ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ, ಆದರೆ ಒಲಂಪಿಕ್ ಮೆಡಲ್ ತನ್ನಿ: ಮಂಗಳೂರಿನಲ್ಲಿ ಸಿಎಂ… ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಸಿಎಂ ಸಿದ್ದರಾಮಯ್ಯ… ಮಂಗಳೂರಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ: ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ…

ಇತ್ತೀಚಿನ ಸುದ್ದಿ

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದರೆ ಬಿಇಓ ವಿರುದ್ಧ ಕಾನೂನು ಸಮರ: ಬೃಹತ್ ಪ್ರತಿಭಟನೆಯಲ್ಲಿ ಎಚ್ಚರಿಕೆ

22/06/2023, 11:04

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ದಾಖಲಾತಿಗಳಲ್ಲಿ ಆಗುವ ಲೋಪದೋಷಗಳಿಂದಾಗಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಅನಗತ್ಯ ಕಿರಿ ಕಿರಿ ಅನುಭವುಸುವಂತಾಗುವುದು.
ಕೆಲವು ಭಾರೀ ಪ್ರಮಾಣದ ಲೋಪದೋಷಗಳಿಂದಾಗಿ, ವಿದ್ಯಾರ್ಥಿಗಳ ಭವಿಷ್ಯವೇ ಹಾಳಾಗುವ ಸಂಭವ ಇರುತ್ತದೆ. ಇಂತಹ ಅವಘಡಗಳು ಸಂಭವಿಸಿದ್ದು ತಿಳಿದು ಬಂದಲ್ಲಿ, ಶಿಕ್ಷಣ ಇಲಾಖಾಧಿಕಾರಿಯನ್ನೇ ನೇರ ಹೊಣೆಯನ್ನಾಗಿ ಮಾಡಲಾಗುವುದು. ಅಂತಹ ಸಿಬ್ಬಂದಿ ಹಾಗೂ ಬಿಇಓ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಕಾನೂನು ಹೋರಾಟ ಮಾಡಲಾಗುವುದೆಂದು ಎಸ್ಡಿಎಮ್ಸಿ ಮೇಲುಸ್ತುವಾರಿ ಸಮತಿ ತಾಲೂಕು ಅಧ್ಯಕ್ಷೆ ಭಾಗ್ಯಮ್ಮ ಸೋಮುರವರು ಎಚ್ಚರಿಸಿದ್ದಾರೆ.
ಅವರು ಜೂ19ರಂದು ಬಿಇಓರವರ ಕಚೇರಿ ಆವರಣದಲ್ಲಿ, ಎಸ್ಡಿ ಎಮ್ಸಿ ಶಾಲಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಶಿಕ್ಷಣ ಇಲಾಖೆ ಹಾಗೂ ಶಾಲಾ ಸಿಬ್ಬಂದಿಯರು ಎಸಗುವ ಲೋಪದಿಂದಾಗಿ, ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಯಾಗುತ್ತದೆ. ಲಕ್ಷಗಟ್ಟಲೆ ಸಂಬಳ ಪಡೆದು ಕೆಲ ತಾಸು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸದ, ಶಿಕ್ಷಣ ಇಲ‍ಾಖೆಯ ಕೆಲ ಹೊಣೆಗೇಡಿ ಅಧಿಕಾರಿಗಳ ಹಾಗೂ ಹೊಣೆಗೇಡಿ ಸಿಬ್ಬಂದಿಯ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ದಪ್ಪ ಚರ್ಮದ ಹೊಣೆಗೇಡಿ ಅಧಿಕಾರಿಗೆ ಹಾಗೂ ಸಿಬ್ಬಂದಿಯವರಿಗೆ ದಿಕ್ಕಾರ: ಸೂಕ್ಷ್ಮ ಮತಿಯ ಸ್ವಭಾವದರಿರಬೇಕಾದ ಶಿಕ್ಷಣ ಇಲಾಖೆಯಲ್ಲಿ, ಬಹುತೇಕರು ಭಾರೀ ದಪ್ಪ ಚರ್ಮ

ಸ್ವಭಾವದವರಿದ್ದಾರೆ. ಅವರ ನಿರ್ಲಕ್ಷ್ಯದಿಂದಾಗಿ ಅಮಾಯಕ ವಿದ್ಯಾರ್ಥಿಗಳು ,ಹಾಗೂ ಪೋಷಕರು ಭಾರೀ ವೇದನೆ ಅನುಭವಿಸುವಂತಾಗಿದೆ. ಕಾರಣ ಸರ್ಕಾರಿ ಸಂಬಳ ತಿಂದು ಸಾರ್ವಜನಿಕರ ಸೇವೆಯಲ್ಲಿದ್ದು, ಸೇವೆಗಿಂತ ಕಿರಿ ಕಿರಿ ಉಂಟುಮಾಡಿರುವ. ಕೆಲ ಹೊಣೆಗೇಡಿಗಳಿಗೆ ಅಧಿಕಾರಿಗಳಿಗೆ ಹಾಗೂ ಕೆಲ ಸಿಬ್ಬಂದಿಯವರಿಗೆ ದಿಕ್ಕ‍ಾರ…ಎಂದು ರಾಜ್ಯ ಮುಖಂಡ ಗುನ್ನಳ್ಳಿ ರಾಘವೇಂದ್ರ ಘೋಷಣೆ ಕೂಗಿದರು. ಸೂಕ್ಷ್ಮ ಮತಿಯನ್ನ ಹೊಂದಿರಬೇಕಾದ ಶಿಕ್ಷಣ ಇಲ‍ಾಖೆಯಲ್ಲಿ, ಕೆಲ ಅಧಿಕಾರಿಗಳು ಹ‍ಗೂ ಕೆಲ ಸಿಬ್ಬಂದಿ ದಪ್ಪ ಚರ್ಮದ ಮನೋಭಾವ ಹೊಂದಿದ್ದಾರೆ. ಇದು ನಮ್ಮ ಕ್ಷೇತ್ರದ ಶಿಕ್ಷಣ ಪ್ರೇಮಿಗಳ, ವಿದ್ಯಾರ್ಥಿಗಳ ಹಾಗೂ ಪೋಷಕರಿಗೆ ಶಾಪವಾಗಿ ಪರಿಣಮಿಸಿದೆ.

ಕ್ಷೇತ್ರದಲ್ಲಿನ ಒಟ್ಟು ಶೇ50ಕ್ಕೂ ಹೆಚ್ಚು ದಾಖಲ‍ಾತಿಗಳಲ್ಲಿ ದೋಷಗಳು ಕಂಡು ಬರುತ್ತಿವೆ, ಅಕ್ಷರ ಜ್ಞಾನ ನೀಡುವ ಇಲ‍ಾಖೆಯಲ್ಲಿ ಭಾರೀ ಹೊಣೆಗೇಡಿತನ ಕಾಣುತ್ತಿದ್ದು ನಾಚಿಕೆ ಗೇಡಿತನಕ್ಕೆ ಸಾಕ್ಷಿಯ‍‍ಾಗಿದೆ.
ಶಿಕ್ಷಕರು ಶಿಕ್ಷಣ ಇಲಾಖೆಯ ಸಿಬ್ಬಂದಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿರ್ಲಜ್ಯ ನಿರ್ಲಕ್ಷ್ಯಕ್ಕೆ, ನಿಜಕ್ಕೂ ನಾಗರೀಕ ಸಮಾಜ ಹಾಗೂ ಪ್ರಜ್ಞ‍ಾವಂತರು ತಲೆ ತಗ್ಗಿಸುವ ಸಂಗತಿಯಾಗಿದೆ. ಇಂತಹ ಗಂಭೀರ ಲೋಪದೋಷಗಳನ್ನು ಶಿಕ್ಷಣ ಇಲ‍ಾಖೆಯೇ ಹೊಣೆಹೊತ್ತು, ಲೋಪ ದೋಷಗಳು ಕಂಡುಬಂದಾಗ ಕೂಡಲೇ ಸ್ಪಂದಿಸಿ ಸರಿಪಡಿಸಬೇಕು. ಇನ್ನು ಮುಂದೆ ‍ಅಂತಹ ಅವಘಡಗಳು ಜರುಗರಂತೆ, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಬೇಕಿದೆ. ಈಗಾಗಲೆ ಆಗಿರುವ ಶಾಲಾ ದಾಖಲಾತಿಗಳಲ್ಲಾದ ಲೋಪದೋಷಗಳನ್ನು, ಸರಿಪಡಿಸುವಂತೆ ಕೋರಿ ಕಛೇರಿಗೆ ದಾವಿಸುವ ವಿದ್ಯಾರ್ಥಿಗಳನ್ನು ಪೋಷಕರನ್ನು. ನಿರ್ಲಕ್ಷ್ಯಿಸಬಾರದು ಮತ್ತು ವಿನಾಃ ಕಾರಣ ಶಾಲೆಗಳಿಗೆ ಅಥವಾ ಕಛೇರಿಗೆ ಅಲೆದಾಡಿಸಬ‍ಾರದು. ಹಾಗೊಮ್ಮೆ ಅಲೆದಾಡಿಸಿದ್ದಲ್ಲಿ ಅಂಥವರ ವಿರುದ್ಧ, ಕಾನೂನು ಸಮರ ಸಾರಿ ಆದ ನಷ್ಟಕ್ಕೆ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಮನವಿ ಮಾಡಲಾಗುವುದು ಎಂದರು. ಸಂಬಂಧಿಸಿದಂತೆ ಕ್ರಮಕ್ಕ‍ಾಗಿ ಎಸ್ಡಿ ಎಮ್ಸಿ ಶಾಲಾಭಿವೃದ್ಧಿ ಸಮಿತಿಯ ಜಿಲ್ಲಾ ಹಾಗೂ ತಾಲೂಕು ಮುಖಂಡರ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ, ತಹಶಿಲ್ದಾರರಿಗೆ, ಪ್ರ‍ಾಥಮಿಕ ಶಾಲಾ ಜಿಲ್ಲಾ ನಿರ್ಧೇಶಕರಿಗೆ, ಶಿಕ್ಷಣ ಸಚಿವರಿಗೆ, ಉಸ್ಥುವಾರಿ ಸಚಿವರಿಗೆ ತಮ್ಮ ಹಕ್ಕೋತ್ತಾಯದ ಪತ್ರ ತಲುಪಿಸುವಂತೆ ತಹಶಿಲ್ದಾರರಾದ ಟಿ.ಜಗದೀಶರವರಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣ ಸೇರಿದಂತೆ, ತಾಲೂಕಿನ ಶಾಲೆಗಳ ಎಸ್ಡಿ ಎಮ್ಸಿ ಶಾಲಾ ಭಿವೃದ್ಧಿ ಹಾಗೂ ಮೇಲುಸ್ಥುವಾರಿ ಸಮಿತಿಯ ಸದಸ್ಯರು. ಮುಖಂಡರಾದ ಕೊಟ್ಟೂರು ಹರೀಶ. ಸೋವೇನಹಳ್ಳಿ ಈಶ್ವರಪ್ಪ, ಹೂಡೇಂ ಮಂಜುನಾಥ, ಸಿದ್ದಾಪುರ ಈಶ್ವರಪ್ಪ ಸೇರಿದಂತೆ. ನೊಂದ ವಿದ್ಯಾರ್ಥಿಗಳ ಪೋಷಕರು, ಹಾಗೂ ನೊಂದ ಮಹಿಳೆಯರು. ತಾಲೂಕಿನ ಬಹುತೇಕ ಶಾಲೆಗಳ ಎಸ್ಡಿ ಎಮ್ಸಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ವಿವಿದ ಸಂಘಟನೆಗಳ ಪದಾಧಿಕಾರಿಗಳು ಹೋರಾಟಗಾರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು