12:58 AM Friday29 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಬಗ್ಗಸಗೋಡು ಗ್ರಾಮದಲ್ಲಿ ನಾಯಿ ದಾಳಿಯಿಂದ 5ರ ಹರೆಯದ ಬಾಲಕಿಗೆ ಗಾಯ ಹೆಚ್ಚುತ್ತಿರುವ ಗರ್ಭಿಣಿಯರ, ಬಾಣಂತಿಯರ ಸಾವು ಪ್ರಕರಣ: ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಸರಕಾರದಿಂದ ಸರ್ಜರಿ!! ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ

ಇತ್ತೀಚಿನ ಸುದ್ದಿ

ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದು ಬಾಹ್ಯ ಗೂಂಡಾವೇ? ಅಲ್ಲ, ಸ್ವತಃ ಕಾಲೇಜಿನ ಡೀನೇ?: ಇದು ಯಾವ ಸಂಸ್ಥೆಯಲ್ಲಿ ನಡೆದದ್ದು? ಪೊಲೀಸರೇ ಉತ್ತರಿಸಿ

16/06/2023, 22:28

ಮಂಗಳೂರು(reporterkarnataka.com):
ಕಾಲೇಜೊಂದರ ವಿದ್ಯಾರ್ಥಿಯ ಮೇಲೆ ತರಗತಿಯಲ್ಲೇ ಗಟ್ಟಿಮುಟ್ಟಾದ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಸಿಸಿ ಟಿವಿ ಫೂಟೇಜ್ ಇದೀಗ ವೈರಲ್ ಆಗುತ್ತಿದೆ. ಹಲ್ಲೆ ನಡೆಸಿದ ವ್ಯಕ್ತಿ ಹೊರಗಿನಿಂದ ಬಂದ ಗೂಂಡಾವೇ? ಅಲ್ಲ ಅದೇ ಕಾಲೇಜಿನ ಉಪನ್ಯಾಸಕ/ಸಿಬ್ಬಂದಿ ವರ್ಗದವರೇ? ಹಾಗಾದರೆ ಇದು ಯಾವ ಕಾಲೇಜಿನಲ್ಲಿ ನಡೆದದ್ದು?

ಪೊಲೀಸ್ ಇಲಾಖೆ ಸ್ವಯಂ ನೆಲೆಯಲ್ಲಿ ಕೇಸು ದಾಖಲಿಸಿ ತಕ್ಷಣ ತನಿಖೆ ನಡೆಸುವ ಅಗತ್ಯವಿದೆ.
ಇದು ಮೂಡುಬಿದರೆ ಪರಿಸರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಹೊರಗಿನಿಂದ ಬಂದ ಗೂಂಡಾ ಅಲ್ಲ, ಬದಲಿಗೆ ಕಾಲೇಜಿನ ಡೀನ್ ಎಂಬ ಮಾಹಿತಿಯೂ ರಿಪೋರ್ಟರ್ ಕರ್ನಾಟಕಕ್ಕೆ ಲಭ್ಯವಾಗಿದೆ. ಆದರೆ ಅಧಿಕೃತ ಸ್ಪಷ್ಟನೆ ಎಲ್ಲಿಂದಲೂ ಹೊರಬಂದಿಲ್ಲ.
ವಿದ್ಯಾರ್ಥಿ ಚಪ್ಪಲಿ ಧರಿಸಿದ್ದಾನೆ ಎಂಬ ಕಾರಣಕ್ಕೆ ಕಾಲೇಜಿನ ಡೀನ್ ವಿದ್ಯಾರ್ಥಿಯ ಕಾಲೆಳೆದು ಆತನನ್ನು ನೆಲಕ್ಕೆ ಕೆಡಹಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸುಮಾರು 18ರಿಂದ 20 ವರ್ಷದೊಳಗಿನ ಕೃಶ ಕಾಯದ ವಿದ್ಯಾರ್ಥಿಯ ಕಾಲನ್ನು ಅಮಾನುಷವಾಗಿ ಆ ಗಟ್ಟಿ ಶರೀರದ ವ್ಯಕ್ತಿ
ಎಳೆದು ಹಾಕಿ ನೆಲಕ್ಕೆ ಕೆಡಹಿ ಹಲ್ಲೆ ನಡೆಸಿರುವುದು ಸಿಸಿ ಕ್ಯಾಮೆರಾ ತುಣುಕಿನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ಘಟನೆ ನಡೆದಾಗ ತರಗತಿಯಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿರುವುದು ಕಂಡು ಬರುತ್ತದೆ. ಆದರೆ ಅವರು ಭಯದಿಂದ ಯಾವುದೇ ವಿರೋಧ ವ್ಯಕ್ತಪಡಿಸದೆ ಮೂಕ ಸಾಕ್ಷಿಯಾಗಿರುವುದು ಕಂಡು ಬರುತ್ತದೆ. ಹಲ್ಲೆಗೊಳಗಾದ ವಿದ್ಯಾರ್ಥಿ ಮೂಳೆ ಮುರಿತಕ್ಕೊಳಗಾಗಿದ್ದಾನೆ ಎನ್ನಲಾಗಿದೆ.
ಪ್ರಸಕ್ತ ಶಿಕ್ಷಣ ನೀತಿ ಪ್ರಕಾರ ಎಲ್ ಕೆಜಿಯಿಂದ ಆರಂಭಗೊಂಡು ಪಿಜಿ ವರೆಗಿನ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೆ ಹೊಡೆಯುವಂತಿಲ್ಲ. ಅಪ್ಪ- ಅಮ್ಮ ಕೂಡ ಹೊಡೆಯುವಂತಿಲ್ಲ. ಕಾನೂನು ಈ ರೀತಿ ಇರುವಾಗ ಹರೆಯಕ್ಕೆ ಕಾಲಿಟ್ಟ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲು ಡೀನ್ ಎನ್ನಲಾದ ಈ ವ್ಯಕ್ತಿಗೆ ಹಕ್ಕು ಕೊಟ್ಟವರು ಯಾರು? ಈ ಹಿನ್ನೆಲೆಯಲ್ಲಿ ಮೂಡುಬಿದ್ರೆ ಸುತ್ತಮುತ್ತ ನಡೆದ ಘಟನೆ ಇದಾದರೆ ಮೂಡುಬಿದ್ರೆ ಪೊಲೀಸರು ಸ್ವಯಂ ನೆಲೆಯಲ್ಲಿ ಕೇಸು ದಾಖಲಿಸಿ ಇದು ಯಾವ ಕಾಲೇಜಿನಲ್ಲಿ ಆದ ಘಟನೆ ಎನ್ನುವುದನ್ನು ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು