4:59 PM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಜಪ್ಪು ಸಂತ ಅಂತೋನಿ ಆಶ್ರಮದ ವಾರ್ಷಿಕ ಹಬ್ಬ ಮತ್ತು ಶತಮಾನೋತ್ತರ ಬೆಳ್ಳಿ ಹಬ್ಬದ ಸಮಾರೋಪ

14/06/2023, 10:39

ಮಂಗಳೂರು(reporterlarnataka.com): ನಗರದ ಜಪ್ಪು ಸಂತ ಅಂತೋನಿ ಆಶ್ರಮದ ವಾರ್ಷಿಕ ಹಬ್ಬ ಮತ್ತು ಶತಮಾನೋತ್ತರ ಬೆಳ್ಳಿಹಬ್ಬ ಆಚರಣೆಯ ಸಮಾರೋಪ ಮಂಗಳವಾರ ನಡೆಯಿತು. ಇದರ ಅಂಗವಾಗಿ ಸಂಜೆ 6 ಗಂಟೆಗೆ ಸಂಭ್ರಮದ ಬಲಿ ಪೂಜೆಯನ್ನು ಮಂಗಳೂರಿನ ಬಿಷಪ್ ರೈ.ರೆ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಮಿಲಾಗ್ರಿಸ್ ಚರ್ಚ್ ನಲ್ಲಿ ನಡೆಸಿಕೊಟ್ಟರು.
ವಿಕಾರ್ ಜನರಲ್ ಮೊ. ಮ್ಯಾಕ್ಸಿಮ್ ಎಲ್. ನೋರೋನ್ಹಾ, ಸಂತ ಅಂತೋನಿ ಆಶ್ರಮದ ನಿರ್ದೇಶಕ ಫಾ. ಜೆ. ಬಿ. ಕ್ರಾಸ್ತಾ, ಮಿಲಾಗ್ರಿಸ್ ಚರ್ಚ್ ನ ಪ್ರಧಾನ ಗುರು ಫಾ. ಬೊನವೆಂಚರ್ ನಜರೆತ್ ಮತ್ತು ಮಂಗಳೂರು ನಗರ ಸುತ್ತಮುತ್ತಲ ವಿವಿಧ ಚರ್ಚ್ ಗಳ ಧರ್ಮಗುರುಗಳು ಉಪಸ್ಥಿತರಿದ್ದರು.
ಬಲಿ ಪೂಜೆ ಸಂದರ್ಭದಲ್ಲಿ ಪ್ರವಚನ ನೀಡಿದ ಬಿಷಪ್ ರೈ.ರೆ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು, ಸಂತ ಅಂತೋನಿ ಅವರದು ಆಕರ್ಷಕ ವ್ಯಕ್ತಿತ್ವ. ಅವರ ಪವಿತ್ರ ಸ್ಮರಣಿಕೆಯು ಅವರ ಸಮಗ್ರ ಬದುಕಿನ ಪ್ರತಿಬಿಂಬ. ಅವರು ಮರಣ ಹೊಂದಿ ಹಲವು ವರ್ಷ ಕಳೆದರೂ ಇಂದಿಗೂ ಅವರನ್ನು ಸ್ಮರಿಸುತ್ತಾರೆ. ಅವರಲ್ಲಿ ಪ್ರಾರ್ಥಿಸುವ ಮೂಲಕ ದೇವರ ಸಾಮಿಪ್ಯ ಪಡೆಯುತ್ತಾರೆ. ಅವರ ಬದುಕು ನಮಗೆಲ್ಲರಿಗೂ ಆದರ್ಶ ಹಾಗೂ ಪ್ರೇರಣೆಯಾಗಿದೆ. ಮಂಗಳೂರಿನಲ್ಲಿ 125 ವರ್ಷಗಳ ಹಿಂದೆ ಆರಂಭವಾದ ಸಂತ ಅಂತೋನಿ ಅವರ ಭಕ್ತಿಯ ಆಚರಣೆ ನೂರಾರು ಜನರ ಉತ್ತಮ ಬದುಕಿಗೆ ಸಹಾಯಕ ವಾಗಿದೆ. ದೇವರ ವಾಕ್ಯದ ಪ್ರಕಾರ ಜೀವಿಸಿದರೆ ಶಕ್ತಿಯುತರಾಗ ಬಹುದೆಂಬುದಕ್ಕೆ ಸಂತ ಅಂತೋನಿ ಅವರು ಸಾಕ್ಷಿ ಎಂದರು.
ಸಂತ ಅಂತೋನಿ ಆಶ್ರಮದ ನಿರ್ದೇಶಕ ಫಾ. ಜೆ. ಬಿ. ಕ್ರಾಸ್ತಾ ಅವರು ವಂದನಾರ್ಪಣೆ ಸಲ್ಲಿಸಿದರು.
ಆಶ್ರಮದ 125 ನೇ ವರ್ಷಾಚರಣೆ ಅಂಗವಾಗಿ 12 ತಿಂಗಳು ಕಾಲ ವಿವಿಧ ಕಾರ್ಯಕ್ರಮಗಳು ಜರಗಿದ್ದು, ಇಂದು ಇವೆಲ್ಲವುಗಳ ಸಮಾರೋಪದ ಪ್ರಯುಕ್ತ ಶತಮಾನೋತ್ತರ ಬೆಳ್ಳಿಹಬ್ಬದ ಲಾಂಚನಕ್ಕೆ ಬೆಳಗಿಸಿದ್ದ ದೀಪಗಳನ್ನು ಆರಿಸಲಾಯಿತು.
ಹಬ್ಬದ ಪ್ರಯುಕ್ತ ಇಂದು ಬೆಳಗ್ಗೆ 6 ಗಂಟೆಗೆ ವಿಕಾರ್ ಜನರಲ್ ಮೊ. ಮ್ಯಾಕ್ಸಿಮ್ ಎಲ್. ನೋರೋನ್ಹಾ ಅವರು ಜಪ್ಪು ಆಶ್ರಮದಲ್ಲಿ ಬಲಿಪೂಜೆ ಮತ್ತು ಆರಾಧನೆ, 8.15ಕ್ಕೆ ಎಪಿಸ್ಕೋಪಲ್ ವಲಯ ಮುಖ್ಯಸ್ಥ ಫಾ. ವಿನ್ಸೆಂಟ್ ಮೊಂತೇರೊ ಅವರಿಂದ ಮಿಲಾಗ್ರಿಸ್ ಚರ್ಚ್ ನಲ್ಲಿ ಬಲಿ ಪೂಜೆ, 11 ಗಂಟೆಗೆ ಬರೇಲಿ ಧರ್ಮ ಪ್ರಾಂತ್ಯದ ಬಿಷಪ್ ರೈ.ರೆ. ಇಗ್ನೇಷಿಯಸ್ ಡಿ ಸೋಜಾ ಅವರು ಜಪ್ಪು ಆಶ್ರಮದಲ್ಲಿ ಬಲಿ ಪೂಜೆ ನೇವೇರಿಸಿದರು. ಮಧ್ಯಾಹ್ನ 12.30 ಗಂಟೆಗೆ ಸಹ ಮಿಲನ ಕಾರ್ಯಕ್ರಮ ನಡೆಯಿತು.
ಮಿಲಾಗ್ರಿಸ್ ಚರ್ಚ್ ನ ಪ್ರಧಾನ ಗುರು ಫಾ. ಬೊನವೆಂಚರ್ ನಜರೆತ್ ಮತ್ತು ಮಂಗಳೂರು ನಗರ ಸುತ್ತಮುತ್ತಲ ವಿವಿಧ ಚರ್ಚ್ ಗಳ ಧರ್ಮಗುರುಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು