12:10 PM Monday7 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಚಿಕ್ಕಮಗಳೂರಿನ ಬಾಳೂರು ಪೊಲೀಸ್ ಠಾಣೆ ಗೆ ಹೈಟೆಕ್ ಸ್ಪರ್ಶ: ಮಿನಿ ಪಾರ್ಕ್, ಟೆನ್ನಿಸ್, ಶೆಟಲ್ ಕಾಕ್ ಕೋರ್ಟ್

13/06/2023, 20:06

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಜನರಿಗೆ ಹೊಡೆದಾಟ, ಗಲಾಟೆಗಿಂತ ಪೊಲೀಸ್ಸು, ಪೊಲೀಸ್ ಸ್ಟೇಷನ್ ಅಂದ್ರೆನೆ ಭಯ. ಪೊಲೀಸರು ದುಡ್ಡಿದ್ದೋರ ಕಡೆ ಅನ್ನೋ ಆರೋಪ ಯಾವಾಗ್ಲೂ ಇದ್ದೇ ಇರುತ್ತೆ. ಹಾಗಾಗಿಯೇ, ಬಡಜನರಿಗೆ ಪೊಲೀಸ್ ಅಂದ್ರೆ ಭಯ. ಆದ್ರೆ, ಕಾಫಿನಾಡ ಆ ಪೊಲೀಸ್ ಠಾಣೆ ರಾಜ್ಯಕ್ಕೆ ಮಾದರಿ. ಒಂದು ಕಾಲದಲ್ಲಿ ಈ ಠಾಣೆ ನಕ್ಸಲ್ ಪೀಡಿತ ಪ್ರದೇಶದ ಸ್ಟೇಷನ್. ಹಾಗಾಗಿ, ಸಿಬ್ಬಂದಿಗಳು ವರ್ಗಾವಣೆಯಾಗಲು ಹಿಂದೇಟು ಹಾಕುತ್ತಿದ್ದ ಪೊಲೀಸರೇ ಇದೀಗ ನಾ ಮುಂದು, ತಾ ಮುಂದು ಅಂತ ಆ ಠಾಣೆಯನ್ನೇ ಬಯಸುತ್ತಿದ್ದಾರೆ. ಆ ಠಾಣೆ ಈ ಪರಿ ಫೇಮಸ್ ಆಗಲು ಕಾರಣ ಏನು ಅಂತೀರಾ… ಈ ಸ್ಟೋರಿ ನೋಡಿ…
ಕಾಫಿನಾಡು ಚಿಕ್ಕಮಗಳೂರು ಅಂದ್ರೆ ಥಟ್ ಅಂತ ನೆನಪಾಗೋದೆ ದಟ್ಟಡವಿ. ಮುಗಿಲೆತ್ತರದ ಬೆಟ್ಟಗುಡ್ಡಗಳು. ಅರಣ್ಯವನ್ನು ನಾಚಿಸುವಂತಹ ಕಾಫಿ ತೋಟಗಳು. ಅಪ್ಪಟ ಮಲೆನಾಡ. ಸದಾ ತಣ್ಣನೆಯ ಗಾಳಿ. ಮಳೆಗಾಲದಲ್ಲಿ ಮಲೆನಾಡ ಬದುಕು ನಿಜಕ್ಕೂ ಸಾಹಸ. ಅಲ್ಲಿನ ಪೊಲೀಸ್ ಠಾಣೆಗೆ ಸಿಬ್ಬಂದಿಗಳು ವರ್ಗಾವಣೆ ಆಗೋಕೂ ಪೊಲೀಸರು ಹಿಂದೇಟು ಹಾಕ್ತಿದ್ರು. ಯಾಕಂದ್ರೆ, ಒಂದು ಕಾಲದಲ್ಲಿ ಇದು ನಕ್ಸಲ್ ಪೀಡಿತ ಪ್ರದೇಶದ ಠಾಣೆ ಕೂಡ. ಆದರೆ, ಈಗ. ಆ ಸ್ಟೇಷನ್ ಫುಲ್ ಲಕ-ಲಕ ಅಂತಿದೆ. ಇದೇ ಆ ಠಾಣೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಸ್ಟೇಷನ್. ಸುತ್ತಲೂ ಹಚ್ಚಹಸಿರು.‌ ದಟ್ಟ ಕಾಡು.‌ ಮಧ್ಯದಲ್ಲಿ ಸುಂದರ ಸ್ಟೇಷನ್.‌ ಇದಕ್ಕೆಲ್ಲಾ ಕಾರಣ ಪಿ.ಎಸ್.ಐ. ಪವನ್. ದಾನಿಗಳು ಹಾಗೂ ಸಿಬ್ಬಂದಿಗಳ ನೆರವಿನಿಂದ ಈಗ ಠಾಣೆಗೆ ಹೈಟೆಕ್ ಲುಕ್ ಸಿಕ್ಕಿದೆ. ದೂರು ನೀಡಲು ಬಂದ ದೂರುದಾರರಿಗೆ ವಿಶ್ರಾಂತಿ ಪಡೆಯಲು ಮಿನಿ ಪಾರ್ಕ್.‌ ಠಾಣೆಯ ಒಳಾಂಗಣಕ್ಕೆ ಹೈಟೆಕ್ ಸ್ಪರ್ಶದ ಜೊತೆ ಸಕಲ ವ್ಯವಸ್ಥೆ ಕಲ್ಪಿಸಿದ್ದಾರೆ. ಬಾಳೂರು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಠಾಣಾ ವ್ಯಾಪ್ತಿಯ ಜನರಿಗೆ ಠಾಣೆಯ ಮೇಲಿದ್ದ ಭಯದ ಕಲ್ಪನೆಯನ್ನು ದೂರ ಮಾಡಿ ಮೆಚ್ಚುಗೆ ಕಾರಣವಾಗಿದೆ. ಪೊಲೀಸರ ಈ ಜನಸ್ನೇಹಿ ಪೊಲೀಸ್ ಠಾಣೆ ಕನಸಿಗೆ ಸ್ಥಳೀಯರು ಕೈಜೋಡಿಸಿದ್ದರಿಂದ ನಕ್ಸಲ್ ಪೀಡಿತ ಪ್ರದೇಶದ ಪೊಲೀಸ್ ಠಾಣೆಗೆ ಹೈಟೆಕ್ ಸ್ಪರ್ಶ ಸಿಕ್ಕಿದೆ.


ಇಷ್ಟೇ ಅಲ್ಲ.ಸಿಬ್ಬಂದಿಗಳು ವಿಶ್ರಾಂತಿಯ ವೇಳೆ ಆಟವಾಡಲು ಟೆನಿಸ್ ಹಾಗೂ ಶೆಟಲ್ ಕಾಕ್ ಕೋರ್ಟ್, ಸುಂದರ ಪಾರ್ಕ್, ಸೇರಿದಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಪಡೆದಿರುವುದು ಠಾಣೆಯ ವಿಶೇಷ. ಬಾಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪವನ್ ಕುಮಾರ್ ವಿವಿಧ ದಾನಿಗಳಿಂದ ನೆರವು ಪಡೆದು ಸಹ ಸಿಬ್ಬಂದಿಗಳ ನೆರವನಿಂದ ಠಾಣೆಗೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಆಕರ್ಷಣೀಯ ಕೇಂದ್ರ ಬಿಂದುವಾಗಿಸಿದ್ದಾರೆ. ಪಿ.ಎಸ್.ಐ ಪವನ್ ಕುಮಾರ್ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಮಲ್ಲಂದೂರು ಪೊಲೀಸ್ ಠಾಣೆಗೂ ಕೂಡ ಅಲ್ಲಿನ ಪಿಎಸ್ಐ ರವೀಶ್ ಇದೇ ರೀತಿ ಹೈಟೆಕ್ ಸ್ಪರ್ಶ ನೀಡಿದರು. ಎಸ್.ಪಿ.ಉಮಾ ಪ್ರಶಾಂತ್ ಎರಡು ಠಾಣೆಯ ಪಿ.ಎಸ್.ಐ.ಗಳ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು