11:02 AM Thursday28 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ತಾಪಮಾನ ಏರಿಕೆ, ಹವಾಮಾನ ವೈಪರೀತ್ಯ: ಶಾಂತವಾಗಿದ್ದ ಅರಬ್ಬೀ ಸಮುದ್ರದಲ್ಲೂ ಭಾರೀ ತಲ್ಲಣ!

11/06/2023, 20:48

ಅಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com

ಬಂಗಾಳ ಕೊಲ್ಲಿಯಲ್ಲಿ ಮಾತ್ರ ಆಗಾಗ ಕಾಣಿಸುತ್ತಿದ್ದ ವಾಯುಭಾರ ಕುಸಿತ, ಚಂಡಮಾರುತ ಇದೀಗ ಅರಬ್ಬೀ ಸಮುದ್ರದಲ್ಲಿಯೂ ಕಾಣಿಸಲಾರಂಭಿಸಿದೆ. ಸಾಮಾನ್ಯವಾಗಿ ಇಂತಹ ತಲ್ಲಣ ಬಂಗಾಳ ಕೊಲ್ಲಿಯಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಶತಮಾನಗಳಿಂದ ಶಾಂತವಾಗಿದ್ದ ಅರಬ್ಬೀ ಸಮುದ್ರದಲ್ಲಿಯೂ ಆಗಾಗ ಇಂತಹ ತಲ್ಲಣಗಳು ಕಾಣಿಸಲಾರಂಭಿಸಿವೆ. ವಾಯುಭಾರ ಕುಸಿತ, ಚಂಡಮಾರುತ ಹುಟ್ಟಲಾರಂಭಿದೆ. ಹಾಗಾದರೆ ಇದಕ್ಕೆಲ್ಲ ಕಾರಣ ಏನು? ವಿಜ್ಞಾನಿಗಳು ಏನು ಹೇಳುತ್ತಾರೆ? ಇದನ್ನೆಲ್ಲ ನೋಡೋಣ ಬನ್ನಿ...


ಚಂಡಮಾರುತವೇ ಸೃಷ್ಟಿಯಾಗದ ಅರಬ್ಬೀ ಸಮುದ್ರದಲ್ಲಿ 2018 ಏಪ್ರಿಲ್ ತಿಂಗಳಿನಲ್ಲಿ ಓಖಿ ಚಂಡಮಾರುತ ಕಾಣಿಸಿಕೊಂಡಿತ್ತು. ಓಖಿ ಹೊಡೆತಕ್ಕೆ ಕೇರಳ, ತಮಿಳುನಾಡು, ಲಕ್ಷದ್ವೀಪ ತತ್ತರಿಸಿ ಹೋಗಿತ್ತು. ಪ್ರಾಣ ಹಾನಿ, ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಲಕ್ಷ ದ್ವೀಪಕ್ಕೆ ಹೊರಟ್ಟಿದ್ದ 3 ಸರಕು ಹಡಗುಗಳು ಮುಳುಗಿದ್ದವು. ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಸುಮಾರು 10 ದಿನಗಳ ಕಾಲ ಸಂಪರ್ಕ ಕಡಿದು ಹೋಗಿತ್ತು. ಇದೆಲ್ಲ ಮುಗಿದು ಸಮುದ್ರ ಶಾಂತವಾಗುವಷ್ಟರಲ್ಲಿ ಮತ್ತೆ ಅರಬ್ಬೀಯಲ್ಲಿ ವಾಯುಭಾರ ಕುಸಿತ ಉಂಟಾಗಿತ್ತು. ಇದಾದ ಬಳಿಕ ಮೇಲ್ಮೈ ಸುಳಿಗಾಳಿಗೆ ಅರಬ್ಬೀ ಸಮುದ್ರ ತುತ್ತಾಯಿತು. ನಂತರದ ವರ್ಷಗಳಲ್ಲಿ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ಹಾವಳಿ ಆಗಾಗ ಕಾಣಿಸಲಾರಂಭಿಸಿತು. ಇದೀಗ ಮತ್ತೆ ವಾಯುಭಾರ ಕುಸಿತ ಉಂಟಾಗಿ ಅದು ಚಂಡಮಾರುತವಾಗಿ ರೂಪುಗೊಂಡಿದೆ. ಸೈಕ್ಲೋನ್ ಗೆ ಬಿಪೊರ್ ಜಾಯ್ ಎಂದು ಹೆಸರಿಡಲಾಗಿದೆ. ಮಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸಮುದ್ರ ಪ್ರಕ್ಷುಬ್ದಗೊಂಡಿದೆ. ಮೀನುಗಾರರು, ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಎನ್ ಡಿಆರ್ ಎಫ್ ನ 100 ಮಂದಿ ಸಿಬ್ಬಂದಿಗಳು ಆಗಮಿಸಿದ್ದಾರೆ. ಎಸ್ ಡಿಆರ್ ಎಫ್ ನ ತಂಡ ಸದ್ಯದಲ್ಲೇ ಮಂಗಳೂರಿಗೆ ಆಗಮಿಸಲಿದೆ. ದ.ಕ. ಜಿಲ್ಲಾಡಳಿತ ಸನ್ನದ್ಧ ಸ್ಥಿತಿಯಲ್ಲಿದೆ.

ಇದಕ್ಕೆಲ್ಲ ಕಾರಣ ಏನು?: ವಿಜ್ಞಾನಿಗಳ ಪ್ರಕಾರ ಜಾಗತಿಕ ತಾಪಮಾನದ ಪ್ರಭಾವ ಅರಬ್ಬೀ ಸಮುದ್ರವನ್ನು ತಟ್ಟಲಾರಂಭಿಸಿದೆ. ತಾಪಮಾನ ಏರಿಕೆಯಿಂದ ಇಷ್ಟರವರೆಗೆ ಶಾಂತವಾಗಿದ್ದ ಅರಬ್ಬೀ ಸಮುದ್ರ ಕೂಡ ಪ್ರಕ್ಷುಬ್ಧಗೊಳ್ಳಲಾರಂಭಿಸಿದೆ ಎಂದು ನಾಸಾ ವಿಜ್ಞಾನಿಗಳು ಹೇಳುತ್ತಾರೆ. 2010ರ ಬಳಿಕದ ಡಾಟಾದ ಆಧಾರದ ಮೇಲೆ ನಾಸಾ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ.
ಕಳೆದ 10 ವರ್ಷಗಳಿಂದ ಚಂಡಮಾರುತ, ಬಿರುಗಾಳಿ, ಭೂಕಂಪ ಮುಂತಾದ ಪ್ರಾಕೃತಿಕ ವಿಕೋಪಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಭೂಮಿಯ ತಾಪಮಾನ ಏರಿಕೆಯಾದಂತೆ ಸಮುದ್ರದಲ್ಲಿ ನೀರಿನ ತಾಪಮಾನ ಕೂಡ ಹೆಚ್ಚಾಗುತ್ತದೆ. ಇದರ ಪರಿಣಾಮ ವಾಯುಭಾರ ಕುಸಿತ ಉಂಟಾಗುತ್ತದೆ. ವಾಯುಭಾರ ಕುಸಿತ ಕೆಲವೊಮ್ಮೆ ಚಂಡಮಾರುತವಾಗಿ ರೂಪುಗೊಳ್ಳುತ್ತದೆ. ಅರಬ್ಬೀ ಸಮುದ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ವಿದ್ಯಮಾನ ಕೂಡ ಇದೇ ಆಗಿದೆ. ಬಂಗಾಳ ಕೊಲ್ಲಿಗೆ ಹೋಲಿಸಿದರೆ ಅರಬ್ಬೀ ಸಮುದ್ರದಲ್ಲಿ ಬಲವಾದ ತಂಗಾಳಿ ಹೆಚ್ಚು ಬೀಸುತ್ತದೆ. ಹಾಗಾಗಿ ಇಲ್ಲಿ ನೀರಿನ ತಾಪಮಾನ ಏರಿಕೆಯಾಗಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಬಹಳ ಕಡಿಮೆ ಇತ್ತು. ಬಂಗಾಳಕೊಲ್ಲಿಯಲ್ಲಿ ನೀರಿನ ತಾಪಮಾನ ಹೆಚ್ಚಾಗುವುದರಿಂದ ಇಲ್ಲಿ ಹೆಚ್ಚು ಹೆಚ್ಚು ಚಂಡಮಾರುತ ಸೃಷ್ಟಿಯಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ಏರಿಕೆಯಿಂದ ಅರಬ್ಬೀ ಸಮುದ್ರದಲ್ಲಿ ಕೂಡ ನೀರಿನ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ವಾಯುಭಾರ ಕುಸಿತ, ಚಂಡಮಾರುತ ರೂಪುಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ತಾಪಮಾನ ಏರಿಕೆಗೆ ಏನು ಕಾರಣ?: ವಿಶ್ವದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಅತೀ ಬಳಕೆಯಿಂದ ವಾತಾವರಣದಲ್ಲಿ ಕಾರ್ಬನ್‌ ಹೆಚ್ಚಿನ ಪ್ರಮಾಣದಲ್ಲಿ ಸೇರಿಕೊಳ್ಳುತ್ತಿದೆ. ಕಾರ್ಬನ್ ಹೆಚ್ಚಳ, ಕಾಡುಗಳ ನಾಶದಿಂದ ಜಾಗತಿಕ ತಾಪಮಾನ ಮತ್ತಷ್ಟು ಹೆಚ್ಚಾಗುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲದ ವಿಶ್ವದ ಬಹುತೇಕ ರಾಷ್ಟ್ರಗಳು ಕಾರಣೀಭೂತವಾಗಿವೆ ಎಂದು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು