12:10 AM Friday3 - May 2024
ಬ್ರೇಕಿಂಗ್ ನ್ಯೂಸ್
ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ…

ಇತ್ತೀಚಿನ ಸುದ್ದಿ

ಉತ್ತರ ಕರ್ನಾಟಕದಲ್ಲಿ ಕಾರಹುಣ್ಣಿಮೆ ಸಂಭ್ರಮ: ಗಡಿ ಭಾಗದಲ್ಲಿ ಮಣ್ಣೆತ್ತಿನ ಖರೀದಿ ಜೋರು; ಹಸುಗಳಿಗೆ ಬಣ್ಣದ ಹಗ್ಗ ಗೊಂಡೆಗೆ ಮುಗಿಬಿದ್ದ ರೈತರು

03/06/2023, 21:14

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ರಾಜ್ಯದಲ್ಲಿ ಕಾರ ಹುಣ್ಣಿಮೆಯನ್ನ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಅದರಲ್ಲು ಉತ್ತರ ಕರ್ನಾಟಕದಲ್ಲಿ ತನ್ನದೇ ವಿಶೇಷತೆಯಿಂದ ಆಚರಿಸಲ್ಪಡುತ್ತದೆ. ಇದರಂಗವಾಗಿ ಮಣ್ಣೆತ್ತಿನ ಖರೀದಿಯು ಜೋರಾಗಿಯೇ ನಡೆಯಿತು.
ಬೆಳಗಾವಿಯ ಕಾಗವಾಡ ವಿಧಾನ ಸಭಾ ಕ್ಷೇತ್ರದ ಸಂಬರಗಿ ಗ್ರಾಮದಲ್ಲಿ ಕಾರಹುಣ್ಣಿಮೆ ನಿಮಿತ್ಯ ಬಣ್ಣ ಬಣ್ಣದ ಹಗ್ಗ ಗೊಂಡೆಗಳನ್ನ ತೆಗೆದುಕೊಳ್ಳಲು ರೈತರು ಅಂಗಡಿ ಮುಂಗ್ಗಟ್ಟಿಗೆ ಮುಗಿ ಬಿದಿದ್ದರು. ಗ್ರಾಮದ ಕುಂಬಾರರ ಮನೆಯಲ್ಲಿನ ಮಣ್ಣೆತ್ತಿನ ಪೂಜೆ ಮಾಡುವುದು ವಾಡಿಕೆ ಇದೆ ಅದರಂತೆ ಮಣ್ಣೆತ್ತಿನ ಖರೀದಿಯು ಜೋರಾಗಿ ಇತ್ತು.

ಸುಮಾರು ಮೂರು ದಿನಗಳ ಕಾಲ ಆಚರಿಸುವ ಕಾರಹುಣ್ಣಿಮೆ ಮಳೆಗಾಲದ ಮೊದಲ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೊದಲನೆ ದಿನ ಹೊನ್ನಹುಗ್ಗಿ, ಎರಡನೆ ದಿನ ಕಾರ ಹುಣ್ಣಿಮೆ ಹಾಗೂ ಮೂರನೇ ದಿನ ಕರಿ ಹರಿಯುವಿಕೆ ಅಂತಾ ಆಚರಿಸಲ್ಪಡುತ್ತದೆ. ಕಾರ ಹುಣ್ಣಿಮೆ ಆಚರಣೆಗೆ ತನ್ನದೇ ಪುರಾತನ ಹಿನ್ನೆಲೆಯು ಇದೆ.
ಒಮ್ಮೆ ಕೈಲಾಸದಲ್ಲಿ ಪಾರ್ವತಿ ದೇವಿಯು ಹುಗ್ಗಿ ( ಪಾಯಸ ) ಮಾಡುವಾಗ ಬೆರಳಲ್ಲಿದ್ದ ಚಿನ್ನದ ಉಂಗುರ ಜಾರಿ ಪಾತ್ರೆಯಲ್ಲಿದ್ದ ಕುದಿಯುವ ಹುಗ್ಗಿ ( ಪಾಯಸ ) ದಲ್ಲಿ ಬಿಳ್ಳುತ್ತದೆ. ಅವಾಗ ಪಾರ್ವತಿ ದೇವಿಯು ಉಂಗುರ ಹೊರತೆಗೆಯಲು ಪ್ರಯತ್ನಿಸುತ್ತಾಳೆ. ಎಷ್ಟೇ ಪ್ರಯತ್ನ ಪಟ್ಟರು ಉಂಗುರ ಹೊರತೆಗೆಯಲು ಆಗದೆ ಇದ್ದಾಗ ಪಾರ್ವತಿ ದೇವಿಯು ಶಿವನ ಮೊರೆ ಹೋಗುತ್ತಾಳೆ. ಅವಾಗ ಶಿವನ ವಾಹನ ನಂದಿಗೆ ಶಿವ ಆದ್ನೇ ನೀಡುತ್ತಾನೆ. ಅವಾಗ ನಂದಿಯು ತನ್ನ ಕೊಂಬಿ ನಿಂದ ಕುದಿಯುತ್ತಿದ್ದ ಹುಗ್ಗಿ ( ಪಾಯಸ ) ದಿಂದ ಚಿನ್ನದ ಉಂಗುರ ಹೊರತೆಗೆದು ಪಾರ್ವತಿ ದೇವಿಗೆ ಕೊಡುತ್ತಾನೆ. ಅವಾಗ ಪಾರ್ವತಿ ದೇವಿಯು ಅಂದಿನಿಂದ ಈ ದಿನವನ್ನ ಕಾರ ಹುಣ್ಣಿಮೆ ಅಂತ ಆಚರಿಸಲಿ ಅಂತ ಆಶೀರ್ವಾದ ಮಾಡಿದಳು. ಕುದಿಯುವ ಪಾತ್ರೆಯಿಂದ ಹೊನ್ನ ಹೊರ ತೆಗೆದ ದಿನವನ್ನ ಹೊನ್ನಹುಗ್ಗಿ ಅಂತ ಆಚರಿಸಲಿ ಎಂದು ಆಶೀರ್ವದಿಸಿದ ದಿನದಿಂದ ಕಾರ ಹುಣ್ಣಿಮೆ ಆಚರಿಸಲಾಗುತ್ತದೆ ಅಂತ ಪ್ರತೀತಿ ಇದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು