7:30 AM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಗಾಂಧಿ ಎಂಬುವನ ಸುತ್ತ ಅಹಿಂಸೆ ಮತ್ತು ಸತ್ಯದ ಹುಡುಕಾಟ

18/07/2021, 13:11

ಆಧುನಿಕತೆಯು ಬದುಕಿನೊಂದಿಗೆ ಪ್ರವೇಶ ಪಡೆದ ಮೇಲೆ ನಮ್ಮ ಚಿಂತನೆಯ ದಾರಿಗಳು, ಆದರ್ಶದ ಪ್ರತಿಬಿಂಬಗಳು ಬದಲಾಗುತ್ತ ನಡೆದವು. ಈ ಸಂದರ್ಭದಲ್ಲಿ ಗಾಂಧಿ ಮತ್ತು ಗಾಂಧಿಯ ಸಿದ್ಧಾಂತವು ಮೌಲ್ಯವನ್ನು ಪಡೆದುಕೊಳ್ಳುತ್ತ, ಕಳೆದುಕೊಳ್ಳುತ್ತ, ಬದಲಾವಣೆಯ ಮೈಯನ್ನು ಪಡೆದುಕೊಂಡು ನಡೆಯುತ್ತಿದೆ. ಭಾರತದಲ್ಲಿ ಗಾಂಧೀಜಿ ೧೯೨೦ ರಿಂದ ೧೯೪೭ರವರೆಗೆ ಅಹಿಂಸೆ, ಸತ್ಯ, ಶಾಂತಿ, ಸ್ವದೇಶೀಯತ್ವನ್ನು ಬಂಡವಾಳಶಾಹಿಗೆ ಮುಖಾಮುಖಿಯಾಗಿಸುವ ಮೂಲಕ ಭಾರತೀಯತೆಯನ್ನು ಹುಟ್ಟು ಹಾಕಿದರು. ಗಾಂಧೀಜಿ ಸ್ವಾತಂತ್ರö್ಯ ಹೋರಾಟದ ನೆಲೆಯಿಂದ ಜನರ ಸ್ವರ್ಶಕ್ಕೆ ಒಳಗಾಗುವುದಕ್ಕಿಂತ. ತನ್ನ ದೇಶೀಯತನದ ಪ್ರಯೋಗಾತ್ಮಕ ಬದುಕಿನ ನಡೆಯೊಂದಿಗೆ ಮಹಾತ್ಮರಾಗಿ ಭಾರತದ ಆದರ್ಶದ ಪ್ರತಿನಿದಿಯಾದರು. ನಾವು ಸಾಮಾನ್ಯವಾಗಿ ಗಾಂಧಿಯನ್ನು ಭಾರತಕ್ಕೆ ಸ್ವಾತಂತ್ರö್ಯ ತಂದುಕೊಟ್ಟರೆAಬ ದಿಕ್ಕಿನಲ್ಲಿಯೇ ಓದಿಕೊಂಡಿದ್ದೇವೆ ಮತ್ತು ಚರಿತ್ರೆಯನ್ನು ರಚಿಸಿಕೊಂಡಿದ್ದೇವೆ. ಗಾಂಧಿ ಒಂದು ಕಾಲಘಟ್ಟದ ದೇಶೀಯ ಶಕ್ತಿಯಾಗಿ ರೂಪುಗೊಂಡು ನಮ್ಮ ಮೈಮನವನ್ನು ಆವರಿಸಿಕೊಳ್ಳುತ್ತಾರೆ ಜೊತೆಗೆ ಕಾಲಕಳೆದಂತೆ ನಮ್ಮಿಂದ ದೂರಸರಿದು ಕೇವಲ ಗಾಂಧೀ ಜಯಂತಿಯ ದಿನ ನೆನಪಿಗೆ ಬರುತ್ತಾರೆ ಈ ನಡುವೆ ನಾವು ಗಾಂಧಿಯೊAದಿಗೆ ಅನುಸಂಧಾನ ಮಾಡುವ ಅಗತ್ಯವಿದೆ.
ವಸಾಹತುಶಾಹಿ ಪ್ರಭುತ್ವ ಮತ್ತು ಪರಿಸರವು ಭಾರತವನ್ನು ತನ್ನದಾಗಿಸಿಕೊಂಡು ಆಧುನಿಕತೆಯ ನೆಲೆಯಲ್ಲಿ ಪಾಶ್ಚಾತ್ಯ ಸಾಂಸ್ಕೃತಿಕ ಬೀಜವನ್ನು ಬಿತ್ತುವ ಮೂಲಕ ಭಾರತೀಯರ ಜೀವ ಸತ್ವವನ್ನು, ಸ್ವಾವಲಂಬಿತ ಆರ್ಥಿಕ ಮೀಮಾಂಸೆಯ ಕೊಂಡಿಯನ್ನು ತಪ್ಪಿಸುವ ಮೂಲಕ ಬಂಡವಾಳಶಾಹಿ ಕೇಂದ್ರಿತ ಆರ್ಥಿಕತೆಗೆ ಭಾರತವನ್ನು ಒಗ್ಗಿಸು ಕಡೆಗೆ ಹೆಜ್ಜೆಹಾಕಿತು. ವಸಾಹತುಶಾಹಿಯು ನಡೆದ ದಾರಿಯು ಬ್ರಿಟೀಷ್ ಸಾಮ್ರಾಜ್ಯ್ಕಕ್ಕೆ ಆರ್ಥಿಕ ಹೆದ್ದಾರಿಯಾಗಿ ರೂಪ ಪಡೆಯಿತು ಆದರೆ ಭಾರತೀಯರಿಗೆ ದೇಶೀಯತೆಯ ಸಾವಿನ ದಾರಿಯಾಗಿ ಎಲ್ಲಾವನ್ನು ಕಳೆದುಕೊಳ್ಳುವ ಕಡೆಗೆ ಹೋಗುವಂತಾಯಿತು. ಈ ನಡುವೆ ಗಾಂಧಿ ಭಾರತದ ಸ್ವಾತಂತ್ರö್ಯ ಹೋರಾಟದ ನಾಯಕರಾದ ಮೇಲೆ ವಸಾಹತುಶಾಹಿಯ ಪ್ರತಿಯಾಗಿ ಭಾರತೀಯತೆಯನ್ನು ಕಟ್ಟುವ ಕಾರ್ಯವನ್ನು ಮಾಡಿದರು. ಹಿಂಸೆಯ ಪ್ರತಿಯಾಗಿ ಅಹಿಂಸೆಯನ್ನು, ಯುದ್ಧದ ಬದಲಿಗೆ ಶಾಂತಿಯನ್ನು, ಬಂಡವಾಳಶಾಹಿಯ ಪ್ರತಿಯಾಗಿ ಸ್ವದೇಶಿಯತೆಯನ್ನು, ಭೌತವಾದಕ್ಕೆ ಮುಖಾಮುಖಿಯಾಗಿ ಸತ್ಯವನ್ನು, ಸಾಮ್ರಾಜ್ಯಶಾಹಿಯ ಪ್ರತಿಯಾಗಿ ರಾಮರಾಜ್ಯವನ್ನು ಪ್ರತಿಪಾದಿಸುವ ಮೂಲಕ ಭಾರತದ ಸಾರ್ವಭೌಮತ್ವವನ್ನು ಭಾರತೀಯರಿಂದಲೆ ಕಟ್ಟುವ ಚಳುವಳಿಯನ್ನು ಹುಟ್ಟುಹಾಕಿದರು. ಈ ಚಳುವಳಿಯು ಭಾರತದ ಆರ್ಥಿಕ ನಡೆಗೆ ಹೊಸದ ದಾರಿಯನ್ನು ತೋರಿಸಿತು. ಗಾಂಧಿಯ ಮುಖೇನ ಹುಟ್ಟಿಕೊಂಡ ಸ್ವದೇಶಿ, ಸತ್ಯ, ಸತ್ಯಾಗ್ರಹ, ಶಾಂತಿ, ಅಹಿಂಸೆ, ರಾಮರಾಜ್ಯದಂತಹ ಪರಿಕಲ್ಪನೆಗಳು ಭಾರತಿಯ ಸ್ವರ್ಶಕ್ಕೆ ಒಳಗಾಗಿ ಜೀವಪಡೆದು ಆದರ್ಶವೆಂಬ ಶರೀರವನ್ನು

ಪಡೆದುಕೊಂಡಿತ್ತು ಮತ್ತು ಭಾರತೀಯ ಜೀವನ ಮೀಮಾಂಸೆಯನ್ನು ವಸಾಹತುಶಾಹಿಯ ಪರಿಸರದಲ್ಲಿಯೇ ಮರುರೂಪಿಸಿ ಗಟ್ಟಿಗೊಳಿಸಿತು.
ಭಾರತದ ಸ್ವಾತಂತ್ರö್ಯ ಮತ್ತು ಗಾಂಧಿಯ ಸಾವು ಬಂಡವಾಳಶಾಹಿತ್ವಕ್ಕೆ ಹೊಸ ದಿಕ್ಕುನ್ನು ನೀಡಿತು. ಗಾಂಧಿಯನ್ನು ತನ್ನ ನಿಲುವಿನಲ್ಲಿ ಜಾಗತೀಕರಣಗೊಳಿಸುವ ಮೂಲಕ ಮುಕ್ತ ಆರ್ಥಿಕತೆ, ಕೈಗಾರಿಕ ಬೆಳವಣಿಗೆ, ಹಸಿರು, ನೀಲಿ ಮತ್ತು ಶ್ವೇತಾಕ್ರಾಂತಿಯ ನೆಲೆಯಿಂದ ಭಾರತಕ್ಕೆ ಆಧುನಿಕತೆಯನ್ನು ಪ್ರವೇಶಪಡಿಸಿತು. ಈ ಆಧುನಿಕತೆಯು ನಮ್ಮ ಜೀವನ ಮೌಲ್ಯವನ್ನು ಬದಲಾಯಿಸಿತು ಮತ್ತು ಈ ಬದಲಾವಣೆಯನ್ನು ಮಾನವಕೇಂದ್ರಿತ ಮೌಲ್ಯವನ್ನು ಯಾಂತ್ರಿಕ ಕೇಂದ್ರಿತ ಮೌಲ್ಯಕ್ಕೆ ಮಾಡಿದ ವರ್ಗವಣೆಯೆಂದು ಕರೆಯಬಹುದು. ಈ ಸಂದರ್ಭದಲ್ಲಿ ಗಾಂಧಿಯು ಭೌತಿಕರೂಪದಲ್ಲಿ ಜನಸ್ವರ್ಶಕ್ಕೆ ಒಳಗಾಗುತ್ತ ಮುಂದುವರಿದರು. ಪ್ರತಿಯೊಂದು ನಗರ, ಹಳ್ಳಿ, ಊರುಗಳಲ್ಲಿ ಗಾಂಧಿಯ ಪ್ರತಿಮೆ, ಗಾಂಧಿರಸ್ತೆ, ಗಾಂಧಿ ಮಳಿಗೆ ಎನ್ನುವ ನಿಮಾರ್ಣತ್ಮಕ ಪರಿಕಲ್ಪನೆಗಳು ನಮ್ಮನ್ನು ಒಳಗೊಂಡವು ಆದರೆ ಗಾಂಧಿಯ ತಾತ್ವಿಕ ಚಿಂತನೆಗಳಾದ ಸತ್ಯ, ಶಾಂತಿ, ಸ್ವದೇಶಿ, ಅಹಿಂಸೆಗಳು ತನ್ನ ತನವನ್ನು ಕಳೆದುಕೊಂಡು ಮೌಲ್ಯ ರಹಿತವಾಗಿ ನಮ್ಮೊಂದಿಗೆ ರೂಢಿಗತವಾಗಿರುವುದು ಗಾಂಧಿಯನ್ನು ಆಧುನಿಕತೆಯು ತನ್ನೊಳಗೆ ಸೇರಿಸಿಕೊಂಡ ಬಗೆಯಾಗಿದೆ. ಬಂಡವಾಳಶಾಹಿತ್ವದ ಚಿಂತನ ಮಾರ್ಗಗಳು ಭಾರತವನ್ನು ಆವರಿಸಿಕೊಂಡ ಮೇಲೆ ಭೌತಿಕ ಪರಿಸರ ಮತ್ತು ವೈಜ್ಞಾನಿಕ ನಿಲುವುಗಳು ಪ್ರಧಾನವೆಂದು ಮಂಡಿತವಾದಾಗ ಗಾಂಧಿ ಎಂಬ ಹೆಸರು ಮಾತ್ರ ಚಲಾವಣೆಯಾಯಿತ್ತಲ್ಲದೆ. ಗಾಂಧಿಯ ರಾಮರಾಜ್ಯದ ಚಿಂತನೆಗಳು ಭ್ರಮತ್ಮಕ ಕಲ್ಪಿತ ಆದರ್ಶವೆಂದು ನಿರೂಪಿತವಾಯಿತು.
ಗಾಂಧಿಯ ನಡೆ ಮತ್ತು ಗಾಂಧಿಯ ಚಿಂತನೆಗಳು ಆಧುನಿಕ ಸಮಾಜದ ಆದರ್ಶವಾಗಿ ಮರುಜೀವ ಪಡೆದಾಗ ಮಾತ್ರ ನಮ್ಮ ಬದುಕಿಗೆ ಸಾರ್ಥಕವಾದ ಅರ್ಥವನ್ನು ಕಾಣಲು ಸಾಧ್ಯವಾಗುತ್ತದೆ. ಯುದ್ಧ, ಭಯೋತ್ಪಾದನೆ, ಭ್ರಷ್ಟಚಾರ, ಮೌಲ್ಯ ರಹಿತ ಶಿಕ್ಷಣ, ಸಂಬAಧ ರಹಿತ ಬದುಕಿನ ಮಾದರಿಗಳೊಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡುತ್ತಿರುವ ನಾವು. ಮಾತಿನ ಮೌಲ್ಯವನ್ನು ಕಳೆದುಕೊಂಡಿದ್ದೇವೆ ಮತ್ತು ಅಭಿವೃದ್ಧಿಯ ಪಶುಗಳಾಗಿ ಬದುಕುತ್ತಿರುವ ಕಾಲದಲ್ಲಿ ಯುವಕರ ಬದುಕನ್ನು ಕಟ್ಟುವ ಆದರ್ಶದ ಪ್ರಜ್ಞೆಯಾಗಿ ಗಾಂಧಿಯ ಅಹಿಂಸೆ, ಸತ್ಯ, ಶಾಂತಿ, ಸ್ವದೇಶಿಯತೆಯಂತ ಚಿಂತನೆಗಳು ಒಳಗೊಳ್ಳುವ ಅಗತ್ಯ ನಮ್ಮ ಮುಂದಿದೆ.

✍️ಡಾ. ಸುಬ್ರಹ್ಮಣ್ಯ ಸಿ ಕುಂದೂರು

ಇತ್ತೀಚಿನ ಸುದ್ದಿ

ಜಾಹೀರಾತು