ಇತ್ತೀಚಿನ ಸುದ್ದಿ
ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ: ಮಂಗಳೂರಿನಲ್ಲಿ ಪ್ರಾಚ್ಯ ವಸ್ತುಗಳ ಪ್ರದರ್ಶನ
18/05/2023, 18:45
ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporter Karnataka.com)
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರರ ಸಂಘದ ಸದಸ್ಯರಿಂದ ವಿಶೇಷ ಪ್ರಾಚ್ಯ ವಸ್ತುಗಳ ಒಂದು ದಿನದ ಪ್ರದರ್ಶನ ಮತ್ತು ಉದ್ಘಾಟನೆ ನಗರದ ಬಿಜೈ ಸಮೀಪದ ಶ್ರೀಮಂತಿಬಾಯಿ ಸ್ಮಾರಕ ವಸ್ತು ಸಂಗ್ರಹಾಲಯದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಣೆಯನ್ನು ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ ನೆರವೇರಿಸಿದರು. ಟಿ.ಟಿ. ಗುರುಪ್ರಸಾದ್, (ಸಹಾಯಕ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಮಂಗಳೂರು) ಮತ್ತು ರಾಜ್ ಕಿಶೋರ್ (ಪಿಜಿಕಲ್ ಡೈರೆಕ್ಟರ್ , ಶ್ರೀ ರಾಮಕೃಷ್ಣ ಕಾಲೇಜ್ ಮಂಗಳೂರು)
ದಕ್ಷಿಣ ಕನ್ನಡ ಜಿಲ್ಲೆಯ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರರ ಸಂಘದ ಅಧ್ಯಕ್ಷರು ಪ್ರಭಾಕರ ಕಾಮತ್,ಉಪಾಧ್ಯಕ್ಷ ಶ್ರೀ ವೈನಾಡಿ ಶ್ರೀನಿವಾಸ ರಾವ್, ಕಾರ್ಯದರ್ಶಿ. ಸಂತೋಷ ಪ್ರಭು, ಖಜಾಂಚಿ ರಘುನಾಥ ಪ್ರಭು, ಶಿವಕುಮಾರ್ ಮತ್ತು ವೆಂಕಟೇಶ ಪ್ರಭು,ವಸ್ತು ಸಂಗ್ರಹಾಲಯದ ಅಧಿಕಾರಿ ಧನಲಕ್ಷ್ಮಿ ಅಮ್ಮಾಳ ಉಪಸ್ಥಿತರಿದ್ದರು.