11:27 PM Saturday26 - July 2025
ಬ್ರೇಕಿಂಗ್ ನ್ಯೂಸ್
ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ… ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ… Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ… Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;… ಕಳಸ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಹಾರಿದ ಜೀಪ್; 23ರ… ಮೈಸೂರು ದಸರಾ: ಜಂಬೂ ಸವಾರಿಯ ಮೊದಲ ಹಂತದ ಸಾಕಾನೆಗಳ ಪಟ್ಟಿ ಬಿಡುಗಡೆ Kodagu | ಬಿರುಸಿನ ಮಳೆ: ಕೊಡಗು ಜಿಲ್ಲೆಯಲ್ಲಿ ನಾಳೆ ಶಾಲೆ, ಪಿಯು ಕಾಲೇಜುಗಳಿಗೆ…

ಇತ್ತೀಚಿನ ಸುದ್ದಿ

ಮುಖ್ಯಮಂತ್ರಿ ಸ್ಥಾನ: ಮತ್ತೊಮ್ಮೆ ಗೆದ್ದ ರಾಮಯ್ಯ: ನಾಳೆಯೇ ರಾಜ್ಯಪಾಲರ ಭೇಟಿ ಸಾಧ್ಯತೆ; ಶುಕ್ರವಾರದೊಳಗೆ ಹೊಸ ಸರಕಾರ

15/05/2023, 23:28

ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಿಚ್ಚಳ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷದ ಮುಖ್ಯ ಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ನೇಮಕ ಕುರಿತು ಎಐಸಿಸಿ ಅನುಮೋದನೆ ನೀಡಿದ್ದು, ಸಿದ್ದರಾಮಯ್ಯ ಅವರು ನಾಳೆಯೇ ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆಗಳಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಣದೀಪ್ ಸುರ್ಜೇವಾಲ ಮುಂತಾದ ಹಿರಿಯ ನಾಯಕರು ಹೊಸದಿಲ್ಲಿಯಲ್ಲಿ ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಆಯಕಟ್ಟಿನ ಖಾತೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಇದರೊಂದಿಗೆ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.
ಸಚಿವ ಸಂಪುಟದಲ್ಲಿ ಡಾ. ಜಿ. ಪರಮೇಶ್ವರ್, ರಾಮಲಿಂಗಾ ರೆಡ್ಡಿ, ಜಮೀರ್ ಅಹಮ್ಮದ್, ಯು.ಟಿ. ಖಾದರ್, ದಿನೇಶ್ ಗುಂಡೂ ರಾವ್ ಮುಂತಾದವರು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.

ಇತ್ತೀಚಿನ ಸುದ್ದಿ

ಜಾಹೀರಾತು