12:45 PM Friday25 - July 2025
ಬ್ರೇಕಿಂಗ್ ನ್ಯೂಸ್
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;… ಕಳಸ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಹಾರಿದ ಜೀಪ್; 23ರ… ಮೈಸೂರು ದಸರಾ: ಜಂಬೂ ಸವಾರಿಯ ಮೊದಲ ಹಂತದ ಸಾಕಾನೆಗಳ ಪಟ್ಟಿ ಬಿಡುಗಡೆ Kodagu | ಬಿರುಸಿನ ಮಳೆ: ಕೊಡಗು ಜಿಲ್ಲೆಯಲ್ಲಿ ನಾಳೆ ಶಾಲೆ, ಪಿಯು ಕಾಲೇಜುಗಳಿಗೆ… ಬಿಜೆಪಿ ನಡೆಸಿರುವ ಅಕ್ರಮವೇ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಎನ್ನುವ ಸತ್ಯ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಎಸ್ ಐಟಿಯಿಂದ ಹಿರಿಯ ಐಪಿಎಸ್ ಅಧಿಕಾರಿ ಸೌಮ್ಯಲತಾ… ನೇಣು ಬಿಗಿದ ಸ್ಥಿತಿಯಲ್ಲಿ ಶಿಕ್ಷಕಿಯ ಮೃತದೇಹ ಪತ್ತೆ: ಕೊಲೆ ಶಂಕೆ; ಕುಟುಂಬಸ್ಥರಿಂದ ದೂರು ಇಡೀ ಮಲೆನಾಡು ಪ್ರದೇಶದಲ್ಲಿ ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ಶಿವಮೊಗ್ಗ ಅಭಿವೃದ್ಧಿ: ಸಚಿವ ಡಾ.… ಐಟಿಐ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಅವಕಾಶಕ್ಕಾಗಿ ಬಜಾಜ್ ಆಟೋ ಜತೆ ರಾಜ್ಯ…

ಇತ್ತೀಚಿನ ಸುದ್ದಿ

ಸಿಬಿಎಸ್‌ಇ ಬೋರ್ಡ್ ಪರೀಕ್ಷೆ: ಕೆನರಾ ಹೈಸ್ಕೂಲ್ ಅತ್ಯುತ್ತಮ ಸಾಧನೆ

15/05/2023, 10:23

ಮಂಗಳೂರು(reporterlarnataka.com): ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ) 2023 ನೇ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಕೆನರಾ ಹೈ ಸ್ಕೂಲ್ (ಸಿಬಿಎಸ್ಇ ) ಶಾಲೆಯು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ. 120 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣಗೊಂಡು 100% ಫಲಿತಾಂಶ ಬಂದಿದೆ. 117 ವಿದ್ಯಾರ್ಥಿಗಳು 60% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿಕೊಂಡಿದ್ದಾರೆ. 10 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಸಾರಂಗ ರಾವ್ ಇನೊಳಿ(97%), ದಿಯಾ ಎನ್ ಕಾಮತ್(96.8%), ಜಾಹ್ನವಿ ಶೆಣೈ(96.6%), ವಾರುಣಿ ಸುರೇಶ್(96%), ಆರ್ಯನ್ ಎಂ(96%), ವಿ ಸಾಯಿ ವಿಜ್ವಲ್ ಕಾರ್ತಿಕ್(96%), ಸತ್ಯಪ್ರಸಾದ್ ಜಿ ಪೈ(95.8%), ಕೆ ಆಕಾಶ್ ಎಂ ರಾವ್(95.4%), ಕಾತ್ಯಾಯಿನಿ ಎಸ್ ಪೈ(95.4%), ತುಳಸಿ ಹರಿಪ್ರಸಾದ್ (95.4%) ಅಂಕಗಳನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿದ್ದಾರೆ. 24 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು, 23 ವಿದ್ಯಾರ್ಥಿಗಳು 85%ಕ್ಕಿಂತ ಹೆಚ್ಚು, 60 ವಿದ್ಯಾರ್ಥಿಗಳು 60%ಕ್ಕಿಂತ ಹೆಚ್ಚು, ಹಾಗು 3 ವಿದ್ಯಾರ್ಥಿಗಳು 48% ಗಿಂತ ಹೆಚ್ಚು ಪಡೆದುಕೊಂಡಿದ್ದಾರೆ.2015 ರ ಈ ಸಂಸ್ಥೆಯ ಮೊದಲ ಬ್ಯಾಚ್ 100 ಶೇಕಡ ಫಲಿತಾಂಶ ಪಡೆದುಕೊಂಡಿದ್ದು ಅದರ ನಂತರ ಪ್ರತಿವರ್ಷ ಕೂಡ ಅತ್ಯುತ್ತಮ ಸಾಧನೆಯನ್ನು ಮಾಡುತ್ತಾ ಬಂದಿದೆ. ಈ ಸಾಧನೆಗೆ ವಿದ್ಯಾರ್ಥಿಗಳ ಶ್ರಮ, ಶಿಕ್ಷಕ ವರ್ಗದ ಪ್ರೋತ್ಸಾಹ, ಅತ್ಯುತ್ತಮ ಬೋಧನಾ ಕ್ರಮ, ಆಡಳಿತ ಮಂಡಳಿಯ ಸಹಕಾರ, ಪೋಷಕರ ಕಾಳಜಿ ಇವೆಲ್ಲವೂ ಕಾರಣವಾಗಿರುತ್ತದೆ. ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕವರ್ಗವನ್ನು ಕೆನರಾ ಆಡಳಿತ ಮಂಡಳಿಯ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು