7:33 AM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಕಣ್ಣಗುಡ್ಡೆಯಲ್ಲಿ ಹಸಿ ಮಣ್ಣಿನ ರಸ್ತೆಗೆ ಡಾಮರು: ಲೈಟ್ ಕಂಬಕ್ಕೂ ಓಟು ಹಾಕಿ ಕಾರ್ಪೊರೇಟರ್ ಮಾಡಿದ  ನಾಗರಿಕರು ! 

17/07/2021, 16:29

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರು ಮಹಾನಗರಪಾಲಿಕೆಯು ತೆರಿಗೆದಾರರ ಹಣದಲ್ಲಿ ಹೇಗೆ ಆಟವಾಡುತ್ತಿದೆ ಎನ್ನುವುದಕ್ಕೆ ಪಾಲಿಕೆ ವ್ಯಾಪ್ತಿಯಲ್ಲಿರುವ ಕಣ್ಣಗುಡ್ಡೆ ರಸ್ತೆಯೇ ತಾಜಾ ನಿದರ್ಶನ. ಇಲ್ಲಿ ಎರಡನೇ ಬಾರಿ ಹಾಕಿದ ಡಾಮರು ಕೂಡ ಹಪ್ಪಳದ ಹಾಗೆ ಎದ್ದು ಹೋಗಿದೆ. ಹೊಸ ರಸ್ತೆಯಾಯಿತು ಎಂದು ಸಂಭ್ರಮಪಟ್ಟ ನಾಗರಿಕರು ಪ್ರಸ್ತುತ ಕೆಸರಿನಲ್ಲಿ ಪರದಾಡುತ್ತಿದ್ದಾರೆ.

ಮೊದಲು ಗದ್ದೆಯಾಗಿದ್ದ ಇಲ್ಲಿ ಹೊಸ ರಸ್ತೆ ನಿರ್ಮಿಸಲಾಯಿತು.2021ರ ಜನವರಿ ತಿಂಗಳಿನಲ್ಲಿ ಮಣ್ಣು ಹಾಕಿ ಫೆಬ್ರವರಿಯಲ್ಲಿ ಡಾಮರೀಕರಣವಾಯಿತು. ಒಂದು ಸಲ ಕಳಪೆ ಡಾಮರೀಕರಣವೆಂದು ಎರಡನೇ ಸಲ ಡಾಮರು ಹಾಕಲಾಯಿತು. ಆದರೆ ಎರಡನೇ ಬಾರಿಯ ಡಾಮರು ಕೂಡ ಕಿತ್ತು ಹೋಗಿದೆ. ಇದಕ್ಕೆ ಮುಖ್ಯ ಕಾರಣ ಮಣ್ಣು ಹಾಕಿದ ಕೂಡಲೇ ಡಾಮರು ಹಾಕಿರುವುದು.

ಮಣ್ಣು ಹಾಕಿದ ತಕ್ಷಣ ಡಾಮರು ನಿಲ್ಲುವುದಿಲ್ಲ ಎನ್ನುವುದು ಸಾಮಾನ್ಯ ವ್ಯಕ್ತಿಗೂ ಗೊತ್ತು. ಆದರೆ ಪಾಲಿಕೆಯಲ್ಲಿರುವ ಸಿವಿಲ್ ಪದವಿ/ಡಿಪ್ಲಮೋ ಪಡೆದ ಎಂಜಿನಿಯರ್ ಗಳಿಗೆ ಗೊತ್ತಿಲ್ಲವೇ? ಕಾರ್ಪೊರೇಟರ್ ಅಥವಾ ಗುತ್ತಿಗೆದಾರರ ಒತ್ತಾಸೆಗೆ ಮಣಿದು ಡಾಮರು ಹಾಕಿದರೆ? ಇಂತಹ ಫೈಲ್ ಗಳಿಗೆ ಕಮಿಷನರ್ ಅಥವಾ ಇತರ ಅಧಿಕಾರಿಗಳು ಕಣ್ಣು ಮುಚ್ಚಿ ಸಹಿ ಹಾಕಿದ್ರಾ? ಇಂತಹ ಹತ್ತಾರು ಪ್ರಶ್ನೆಗಳಿಗೆ ಉತ್ತರವೇ ಇಲ್ಲವಾಗಿದೆ.

ಅಂದು ಪ್ರಧಾನಿ ಮೋದಿ ಅವರ ಮುಖ ನೋಡಿ ಲೈಟ್ ಕಂಬಗಳಿಗೂ ಮತ ಹಾಕಿ ನಾವು ಮೋಸ ಹೋದೆವು.ನಮ್ಮ ಸಂಕಷ್ಟವನ್ನು ಕೇಳುವವರಿಲ್ಲ ಎಂದು ನಾಗರಿಕರು ನೊಂದು ನುಡಿಯುತ್ತಿದ್ದಾರೆ. ಹೊಸತಾಗಿ ಆಯ್ಕೆಯಾದ ಹೆಚ್ಚಿನ ಕಾರ್ಪೊರೇಟರ್ ಗಳಿಗೆ ಏನೂ ಗೊತ್ತಿಲ್ಲ. ಹೆಚ್ಚಿನ ಮಹಿಳಾ ಕಾರ್ಪೊರೇಟರ್ ಗಳ ಗಂಡಂದಿರುವ ಅಧಿಕಾರ ಚಲಾಯಿಸುತ್ತಿದ್ದಾರೆ ಎಂಬ ದೂರು ಹಲವು ವಾರ್ಡ್ ಗಳಿಂದ ಕೇಳಿ ಬರುತ್ತಿದೆ. ಪಾಲಿಕೆ ಕಚೇರಿಯ ಕಂಬ ಕಂಬಗಳಿಗೆ ಕೆಲವು ಮಹಿಳಾ ಕಾರ್ಪೊರೇಟರ್ ಗಳ ಗಂಡಂದಿರು ಸುತ್ತು ಬರುವುದನ್ನು ಕಾಣುವಾಗ ನಾಗರಿಕರ ಆರೋಪದಲ್ಲಿ ಸತ್ಯಾಂಶವಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಕೆಲವೆಡೆ ಹೆಂಡತಿ ಕಾರ್ಪೊರೇಟರ್ ಆದರೆ ಗಂಡ ಪಾಲಿಕೆಯಲ್ಲಿ ಬ್ರೋಕರ್ ಕೆಲಸ ಮಾಡುತ್ತಿರುವ ನಿದರ್ಶನಗಳು ಕೂಡ ಇದೆ. ಇವರಿಗೆ ನಾಚಿಗೆ, ಮಾನ ಮರ್ಯಾದೆ ಯಾವುದೂ ಇಲ್ಲ. ಪ್ರಧಾನಿ ಮೋದಿ ಹೆಸರಿನಲ್ಲಿ ಇವರನ್ನು ಆಯ್ಕೆ ಮಾಡಿರುವುದು ಹುಲುಸಾಗಿ ಮೇಯಲು ಎಂದು ತಿಳಿದುಕೊಂಡಿದ್ದಾರೆ. ಹಾಗೆಂತ ಭ್ರಷ್ಟರಲ್ಲದ, ಉತ್ತಮ ಸೇವೆಯ ಕಾರ್ಪೊರೇಟರ್ ಗಳು ಕೂಡ ನಮ್ಮಲ್ಲಿ ಇದ್ದಾರೆ. ಅವರಿಗೊಂದು ದೊಡ್ಡ ಹ್ಯಾಟ್ಸಾಪ್.

ಇತ್ತೀಚಿನ ಸುದ್ದಿ

ಜಾಹೀರಾತು