2:11 PM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಸುರತ್ಕಲ್ ಎನ್ ಐಟಿಕೆಯಲ್ಲಿ ಮತ ಎಣಿಕೆ: ದ.ಕ. ಜಿಲ್ಲೆಯ 6 ಮಂದಿ ಹಾಲಿ ಶಾಸಕರು ಸಹಿತ 60 ಮಂದಿಯ ಭವಿಷ್ಯ ಇಂದು ನಿರ್ಧಾರ

13/05/2023, 00:21

ಮಂಗಳೂರು(reporterkarnataka.com): ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ದ.ಕ‌. ಜಿಲ್ಲೆಯ 8 ಕ್ಷೇತ್ರಗಳ ಮತ ಎಣಿಕೆ ಸುರತ್ಕಲ್ ಸಮೀಪದ ಎನ್ ಐಟಿಕೆಯಲ್ಲಿ ಮೇ 13ರಂದು ನಡೆಯಲಿದೆ. 8 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಎಲ್ಲ 60 ಮಂದಿ ಅಭ್ಯರ್ಥಿ ಗಳ ಭವಿಷ್ಯ ಮಧ್ಯಾಹ್ನದೊಳಗೆ ನಿರ್ಧಾರವಾಗಲಿದೆ.
ಸುರತ್ಕಲ್ ಸಮೀಪದ ಎನ್ ಐಟಿಕೆಯ ಲೈಬ್ರೇರಿ ಸಮೀಪ ಸ್ಟ್ರಾಂಗ್ ರೂಮ್ ನಲ್ಲಿ ಎಲ್ಲ ಇವಿಎಂಗಳನ್ನು ಭದ್ರವಾಗಿ ಇರಿಸಲಾಗಿದೆ. ಲೈಬ್ರೇರಿ ಕಟ್ಟಡದಲ್ಲೇ ಮತ ಎಣಿಕೆ ಕೇಂದ್ರವನ್ನು ತೆರೆಯಲಾಗಿದೆ. ಮೇ 13ರಂದು ಬೆಳಗ್ಗೆ 8 ಗಂಟೆಗೆ ಮತ ಆರಂಭವಾಗಲಿದೆ. ಪ್ರತಿ ಕ್ಷೇತ್ರದ ಮತ ಎಣಿಕೆಗೆ ತಲಾ 19 ಟೇಬಲ್ ಗಳನ್ನು ಅಳವಡಿಸಲಾಗಿದೆ. 5 ಟೇಬಲ್ ಪೋಸ್ಟಲ್ ಮತ ಎಣಿಕೆಗೆ ಹಾಗೂ 14 ಟೇಬಲ್ ಇವಿಎಂ ಮತ ಎಣಿಕೆಗೆ ಅಳವಡಿಸಲಾಗಿದೆ. ಜಿಲ್ಲೆಯ 8 ಕ್ಷೇತ್ರಗಳಿಗೆ ಒಟ್ಟು 112 ಟೇಬಲ್ ಗಳನ್ನು ಮತ ಎಣಿಕೆ ಕಾರ್ಯಕ್ಕೆ ಅಳವಡಿಸಲಾಗಿದೆ. ಪ್ರತಿ ಕ್ಷೇತ್ರದ 19 ಕೌಟಿಂಗ್ ಟೇಬಲ್ ಗಳಿಗೆ ಚುನಾವಣಾ ಆಯೋಗದ ಸೂಚನೆ ಮೇರೆಗೆ 19 ಸಿಸಿ ಕ್ಮಾಮೆರಾ ಅಳವಡಿಸಲಾಗಿದೆ.
ಅರಬ್ಬೀ ಸಮುದ್ರ ತೀರದ ಮಂಗಳೂರು(ಉಳ್ಳಾಲ) ಕ್ಷೇತ್ರದಿಂದ ಆರಂಭಗೊಂಡು ಘಟ್ಟ ತಪ್ಪಿಲಿನ ಸುಳ್ಯ ಕ್ಷೇತ್ರದವರೆಗಿನ ಎಲ್ಲ 8 ಕ್ಷೇತ್ರಗಳ
ಮತ ಎಣಿಕೆ ಸಿಸಿ ಕ್ಯಾಮೆರಾದ ಕಣ್ಗಾವಲಿನೊಂದಿಗೆ ಸಿಆರ್ ಪಿಎಫ್ ಪಡೆ ಮತ್ತು ಪೊಲೀಸರ ಸರ್ಪಗಾವಲಿನಲ್ಲಿ ನಡೆಯಲಿದೆ. ಹಾಗೆ ಎನ್ ಐಟಿಕೆ ಆವರಣ ಸುತ್ತ ಸಿಆರ್ ಪಿಎಫ್ ಜವಾನರು ಹಾಗೂ ಸುರತ್ಕಲ್ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಸ್ತುತ 6 ಮಂದಿ ಹಾಲಿ ಶಾಸಕರು, ಓರ್ವ ಮಾಜಿ ಸಚಿವರು, ಓರ್ವ ಮಾಜಿ ಶಾಸಕರು ಸ್ಪರ್ಧಿಸುತ್ತಿದ್ದಾರೆ.
60ರಿಂದ 80ರ ದಶಕದವರೆಗೆ ಕದ್ರಿಯ ಕೆಪಿಟಿಯಲ್ಲಿ ಮತ ಎಣಿಕೆ ಮಾಡಲಾಗುತ್ತಿತ್ತು. ನಂತರ ಬೊಂದೆಲ್ ನ ಎಂಜಿಎಂ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಸ್ಥಳದ ಅಭಾವ ಮತ್ತು ನಗರದೊಳಗೆ ಟ್ರಾಫಿಕ್ ಜಾಮ್ ಉಂಟಾಗುವುದನ್ನು ತಡೆಯುವ ಉದ್ದೇಶದಿಂದ ಇದೀಗ ಮತ್ತೆ ಮತ ಎಣಿಕೆ ಕೇಂದ್ರವನ್ನು ನಗರದ ಹೊರವಲಯದ ಸುರತ್ಕಲ್ ಸಮೀಪದ ಎನ್ ಐಟಿಕೆಗೆ ಸ್ಥಳಾಂತರಿಸಲಾಗಿದೆ.
ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆದ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಅಂತಿಮ ಕಣದಲ್ಲಿ ಒಟ್ಟು 60 ಮಂದಿ ಅಭ್ಯರ್ಥಿಗಳು ಇದ್ದರು. ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಎಲ್ಲ 8 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜನತಾ ದಳ ಮಂಗಳೂರು(ಉಳ್ಳಾಲ) ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆ ಸ್ಪರ್ಧಿಸುತ್ತಿದೆ. 10 ಮಂದಿ ಪಕ್ಷೇತರರು ಅಖಾಡದಲ್ಲಿದ್ದಾರೆ. ಆರ್ ಯುಪಿಪಿ 19 ಮಂದಿ ಸ್ಪರ್ದಿಸುತ್ತಿದ್ದಾರೆ. ಸುಳ್ಯ ಕ್ಷೇತ್ರ ಹೊರತುಪಡಿಸಿದರೆ ಜಿಲ್ಲೆ ಯಲ್ಲಿ ಎಎಪಿ ಸ್ಪರ್ಧೆ ಹೆಸರಿಗಷ್ಟೇ ಸೀಮಿತವಾಗಿದೆ. ಸುಳ್ಯ ಎಎಪಿ ಅಭ್ಯರ್ಥಿ ಸುಮನಾ ಅವರು ಕ್ಷೇತ್ರದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದ್ದಾರೆ. ಇಲ್ಲಿ ಎಎಪಿಯಿಂದ ತಕ್ಕ ಮಟ್ಟಿನ ರೋಡ್ ಶೋ ಕೂಡ ನಡೆದಿದೆ. ಉಳಿದಂತೆ ಎಎಪಿ ಅಭ್ಯರ್ಥಿಗಳು ಬರೇ ಮಾರ್ಕೇಟ್ ಗಳಿಗೆ ಮತ್ತು ಕೆಲವು ಪ್ರದೇಶದ ಅಂಗಡಿಗಳಿಗೆ ಮಾತ್ರ ಭೇಟಿ ನೀಡಿ ಮತಬೇಟೆ ನಡೆಸಿದ್ದಾರೆ. ಇದು ಬಿಟ್ಟರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಮಾತ್ರ ತಿರುಗಾಡಿದ್ದು. ಜನತಾ ದಳ ಕೂಡ ಹೆಸರಿಗಷ್ಟೇ ಸ್ಪರ್ಧೆ ನಡೆಸುತ್ತಿದೆ. ಅಭ್ಯರ್ಥಿಗಳು ಮತದಾರರನ್ನು ಭೇಟಿಯಾಗುವ ಪ್ರಯತ್ನ ಮಾಡಿಲ್ಲ. ಜಿಲ್ಲೆಯ ಎರಡು ಪ್ರಬಲ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್
ಅಭ್ಯರ್ಥಿಗಳು ಕೂಡ ಎಲ್ಲ ಮನೆಗಳಿಗೆ ಭೇಟಿ ನೀಡುವಲ್ಲಿ ವಿಫಲರಾಗಿದ್ದಾರೆ. ಆದರೆ ಪಕ್ಷದ ಕಾರ್ಯಕರ್ತರು ಪ್ರತಿ ಮನೆಗಳಿಗೆ ಎರಡೆರಡು ಬಾರಿ ಭೇಟಿ ನೀಡಿ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳು ಕೂಡ ತಮ್ಮ ಕರಪತ್ರವನ್ನು ಹೌಸಿಂಗ್ ಕಾಲೋನಿಗಳಿಗೆ ಮುಟ್ಟಿಸಿದ್ದಾರೆ.
ದ.ಕ. ಜಿಲ್ಲೆಯ ಅಂತಿಮ ಕಣದಲ್ಲಿ ಒಟ್ಟು 60 ಮಂದಿ ಅಭ್ಯರ್ಥಿಗಳಿದ್ದಾರೆ. ಇವರ ಪೈಕಿ 52 ಮಂದಿ ಪುರುಷರು ಹಾಗೂ 8 ಮಂದಿ ಮಹಿಳೆಯರು.

ಇತ್ತೀಚಿನ ಸುದ್ದಿ

ಜಾಹೀರಾತು