ಇತ್ತೀಚಿನ ಸುದ್ದಿ
ಹರೇಕಳ ಸೇತುವೆ ಗೇಟ್ ತೆರೆದ ಪ್ರಕರಣ: ತಿಂಗಳ ಬಳಿಕ ಡಿವೈಎಫ್ ಐ ಕಾರ್ಯಕರ್ತರ ಮೇಲೆ ಎಫ್ ಐಆರ್
06/05/2023, 09:00
ಉಳ್ಳಾಲ(reporterkarnataka.com): ಉಳ್ಳಾಲ ತಾಲೂಕು ಹರೇಕಳ ಕಾಮಗಾರಿ ಮುಗಿದ ಸೇತುವೆಯ ಗೇಟ್ ತೆರೆದು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಪ್ರಕರಣದಲ್ಲಿ ತಿಂಗಳ ತರುವಾಯ ಅಧಿಕಾರಿಗಳು ಕೊಣಾಜೆ ಠಾಣೆಯಲ್ಲಿ ಡಿವೈಎಫ್ಐ ಕಾರ್ಯಕರ್ತರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.
ಗೇಟ್ ತೆರವುಗೊಳಿಸಿದ
ಸಂದರ್ಭ ಅಧಿಕಾರಿಗಳು ದೂರು ನೀಡಿದ್ದರೂ ಕಾನೂನು ಉಲ್ಲಂಘನೆಯ ಅಂಶಗಳು ಇಲ್ಲದ್ದರಿಂದ ಪೊಲೀಸರು ಎಫ್ ಐಆರ್ ಹಾಕದೆ ಹೇಳಿಕೆ ಪಡೆದು ಪ್ರಕರಣ ಮುಕ್ತಾಯಗೊಳಿಸಿದ್ದರು. ಇದೀಗ ಘಟನೆ ನಡೆದು ತಿಂಗಳ ತರುವಾಯ ಹೊಸದಾಗಿ ಎಫ್ ಐಆರ್ ಹಾಕಲಾಗಿದೆ.
ಸಿಪಿಐಎಂ, ಡಿವೈಎಫ್ಐ ಕಾರ್ಯಕರ್ತರು ಜಿಲ್ಲೆಯಾದ್ಯಂತ ಬಿಜೆಪಿ ಸೋಲಿಸಲು ಪೂರ್ಣಪ್ರಮಾಣದಲ್ಲಿ ಓಡಾಡುತ್ತಿದ್ದಾರೆ. ಜಾತ್ಯಾತೀತ ಅಭ್ಯರ್ಥಿಗಳ ಪರವಾಗಿ ಪರಿಣಾಮಕಾರಿ ಪ್ರಚಾರ ನಡೆಸುತ್ತಿದ್ದಾರೆ. ಇದು ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ.ಉಳ್ಳಾಲದಲ್ಲಿಯೂ ಸಿಪಿಎಂ, ಡಿವೈಎಫ್ಐ ಚುನಾವಣಾ ತಂತ್ರಗಳು ಬಿಜೆಪಿ ಲೆಕ್ಕಾಚಾರವನ್ನು ಉಲ್ಟಾ ಹೊಡೆಸುತ್ತಿದೆ. ಅದರ ಪರಿಣಾಮ ಡಿವೈಎಫ್ಐ ಕಾರ್ಯಕರ್ತರ ಮೇಲೆ ಸುಳ್ಳು ಎಫ್ ಐಆರ್ ದಾಖಲಿಸಿ ಅಧಿಕಾರಿಗಳು ಬಿಜೆಪಿ ನಾಯಕರ ಮಾತಿಗೆ ಇನ್ಜೂ ಕಿವಿಗೊಡುತ್ತಿರುವುದು ಅಚ್ಚರಿಯ ಸಂಗತಿ ಎಂದು ಡಿವೈಎಫ್ ಐ ನಾಯಕ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.